Advertisements

ನನ್ನ ದೇಹ, ನನಗೇನಿಷ್ಟನೋ ಅದನ್ನೇ ಮಾಡ್ತೇನೆ ! ಟ್ರೋಲ್ ಮಾಡಿದವರಿಗೆ ಚಳಿ ಬಿಡಿಸಿದ ಖ್ಯಾತ ಗಾಯಕಿ

Cinema

ನಮಸ್ತೇ ಸ್ನೇಹಿತರೇ, ಸೆಲೆಬ್ರೆಟಿಗಳೆನಿಸಿಕೊಂಡವರು ಅವರು ಧರಿಸುವ ಬಟ್ಟೆಗಳು, ಅವರ ಬಾಯಿಯಿಂದ ಬರುವ ಹೇಳಿಕೆಗಳು ಸೇರಿದಂತೆ ಬೇರೆ ಬೇರೆ ರೀತಿಯ ಕಾರಣಗಳಿಗಾಗಿ ಟ್ರೋಲಿಗರ ಬಾಯಿಗೆ ತುತ್ತಾಗುವುದು ಸಾಮಾನ್ಯವಾಗಿದೆ. ಅದರಲ್ಲೂ ತಾವು ಧರಿಸುವ ಬಟ್ಟೆ ಹಾಗು ಫೋಟೋಶೂಟ್ ವಿಚಾರಕ್ಕಾಗಿ ಹೆಚ್ಚಾಗಿ ಟ್ರೋಲ್ ಗಳಿಗೆ ಒಳಗಾಗುತ್ತಾರೆ. ಇದೆ ರೀತಿ ಈಗ ಬಾಲಿವುಡ್ ಖ್ಯಾತ ಗಾಯಕಿ ತಮ್ಮ ಬಟ್ಟೆಯ ವಿಚಾರವಾಗಿ ಟ್ರೋಲ್ ಆಗಿದ್ದು ನೆಟ್ಟಿಗರೊಬ್ಬರ ಚಳಿ ಬಿಡಿಸಿರುವ ಘಟನೆ ನಡೆದಿದೆ.

ಹೌದು, ಖ್ಯಾತ ಗಾಯಕಿ ಸೋನಾ ಮೋಹಪತ್ರಾ ಅವರೇ ತಮ್ಮ ಬಟ್ಟೆಯ ಕಾರಣಕ್ಕಾಗಿ ಟ್ರೋಲ್ ಗೆ ಒಳಗಾದವರು. ಐ ನೆವರ್ ಆಸ್ಕ್ ಫಾರ್ ಇಟ್ ಎಂಬ ಅಭಿಯಾನವೊಂದು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ನಡೆಯುತ್ತಿದ್ದು ಅದರಲ್ಲಿ ಅವರು ಕೂಡ ತಮ್ಮ ಕಾಲೇಜಿನ ದಿನಗಳಲ್ಲಿ ಎದುರಿಸಿದ ಲೈಂ-ಗಿಕ ಕಿ’ರುಕು’ಳದ ಬಗ್ಗೆ ಬಹಿರಂಗ ಮಾಡಿದ್ದು ಇದನ್ನ ಟ್ರೋಲ್ ಮಾಡಿದ್ದ ನೆಟ್ಟಿಗನಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡುವ ಮೂಲಕ ಅವರಿಗೆ ಚಳಿ ಬಿಡಿಸಿದ್ದಾರೆ.

Advertisements

ಸೋನಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಹಾಗೆ ನಾನು ಎಂಜಿನಿಯರಿಂಗ್ ಓದುತ್ತಿದ್ದ ವೇಳೆ ಒಂದು ಸಲ ಲ್ಯಾಬ್ ಕಡೆಗೆ ಹೋಗುತ್ತಿದ್ದು, ಆ ದಿನ ನಾನು ಹಸಿರು ಬಣ್ಣದ ಖಾದಿ ಖುರ್ತಾ ಬಟ್ಟೆ ಧರಿಸಿದ್ದೆ. ಇನ್ನು ನಾನು ಧರಿಸಿದ್ದ ಬಟ್ಟೆ ತುಂಬಾ ಸಡಿಲವಾಗಿತ್ತು. ಇದನ್ನ ನೋಡಿದ ಸೀನಿಯರ್ ಗಳು ಸಿಳ್ಳೆ ಹೊಡೆದು ನಾನು ಧರಿಸಿದ್ದ ಬಟ್ಟೆಯ ಬಗ್ಗೆ ಮಾತನಾಡುತ್ತಿದ್ದರು. ಇನ್ನು ಇದೇ ವೇಳೆ ಅಲ್ಲಿಗೆ ಬಂದ ನನ್ನ ಆತ್ಮಿಯರೊಬ್ಬರು ಇದರ ಬಗ್ಗೆ ಹೇಳಿದರು. ನಾನು ಸರಿಯಾಗಿಯೇ ದುಪ್ಪಟ ಧರಿಸಿದ್ದೆ ಎಂದು ಅವರು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಮತ್ತೊಂದು ಟ್ವೀಟ್ ಮಾಡಿರುವ ಗಾಯಕಿ ಸೋನಾ ಅವರು ಅದನ್ನ ಗಾಯಕಿ ಚಿನ್ಮಯಿ ಸೇರಿದಂತೆ ನಟಿ ಸೋನಂ ಕಪೂರ್ ಹಾಗೂ ಹಲವರಿಗೆ ಟ್ಯಾಗ್ ಮಾಡುವ ಮೂಲಕ ನಿಮ್ಮ ಜೀವನದಲ್ಲಾದ ಕಹಿ ಘಟನೆಯ ಬಗೆ ಹಂಚಿಕೊಳ್ಳಿ ಜೊತೆಗೆ ಆ ಸಂದರ್ಭದಲ್ಲಿ ನೀವು ಯಾವ ರೀತಿಯ ಬಟ್ಟೆ ಧರಿಸಿದ್ರೆ ಎಂಬುದರ ಬಗ್ಗೆ ವಿ’ಕ್ಟಿಮ್ ಬ್ಲೇ-ಮಿಂಗ್ ಗಮನಕ್ಕೆ ತನ್ನಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಸೋನಾ ಮಾಡಿರುವ ಟ್ವೀಟ್ ಗಳಿಗೆ ರೀ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ ನೆಟ್ಟಿಗರು. ಇದೆ ವೇಳೆ ನೆಟ್ಟಿಗನೊಬ್ಬ ಸೋನಾ ಧರಿಸುತ್ತಿರುವ ಬಟ್ಟೆಯ ಬಗ್ಗೆಯೇ ಟ್ರೋಲ್ ಮಾಡಿದ್ದು ಇಷ್ಟೆಲ್ಲಾ ಹೇಳುವ ನೀವು ಎ’ದೆ ಕಾಣುವಂತೆ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಸುವ ನೀವು ಈ ರೀತಿಯಾಗಿ ನಾಟಕ ಮಾಡುವುದೇಕೆ ಎಂದು ಕಾಮೆಂಟ್ ಮಾಡಿ ಸೋನಾ ಮೇಲೆ ಕಿಡಿಕಾರಿದ್ದಾನೆ. ಇನ್ನು ಇದಕ್ಕೆ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿರುವ ಸೋನಾ ಖಡಕ್ ಆಗಿಯೇ ನನ್ನ ದೇಹ ನನ್ನಿಷ್ಟ, ನಂಗೆ ಏನು ಇಷ್ಟವೋ ಹಾಗೆಯೆ ಮಾಡುತ್ತೇನೆ ? ಇದನ್ನೆಲ್ಲಾ ಕೇಳೋದಕ್ಕೆ ನೀನ್ಯಾರು ಎಂದು ಆತನ ಮೇಲೆ ಗರಂ ಆಗಿದ್ದಾರೆ. ಇನ್ನು ಸೋನಾ ಪ್ರತಿಕ್ರಿಯೆಗೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ರೆ ಮತ್ತೆ ಕೆಲವರು ಅವರ ಪರವಾಗಿ ಕಾಮೆಂಟ್ ಗಳನ್ನ ಮಾಡಿದ್ದಾರೆ.