Advertisements

ಸೋನು ಕೆಲಸಕ್ಕೆ ಸಿಕ್ತು ತಕ್ಕ ಪ್ರತಿಫಲ : ಸಲ್ಮಾನ್ ಖಾನ್ ಬದಲಿಗೆ ಸೋನು ಸೂದ್ ಗೆ ಬ್ರಾಂಡ್ ಅಂಬಾಸಿಡರ್ ಪಟ್ಟ !

Cinema

ಕೊರೋನಾ ಮಹಾಮಾರಿ ಹೆಚ್ಚಾದ ಹಿನ್ನಲೆಯಲ್ಲಿ 5 ಹಂತದ ಲಾಕ್ ಡೌನ್ ನ್ನ ಇಡೀ ದೇಶದಾದ್ಯಂತ ಮಾಡಲಾಗಿತ್ತು. ಇನ್ನು ಇದರ ನೇರ ಪರಿಣಾಮ ವಲಸೆ ಕಾರ್ಮಿಕರ ಮೇಲಾಗಿತ್ತು. ಲಾಕ್ ಡೌನ್ ನಿಂದ ಅವರು ಅನುಭವಿಸಿದ ಸಾವು ನೋವು ಗಳು ಅಷ್ಟಿಷ್ಟಲ್ಲ. ಮಾಡಲು ಕೆಲಸವಿಲ್ಲ, ತಿನ್ನಲು ಊಟವಿಲ್ಲ ಅನ್ನೋ ಪರಿಸ್ಥಿತಿಯಲ್ಲಿ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರಿದ್ದರು. ಹೀಗಾಗಿ ತಮ್ಮ ರಾಜ್ಯ, ಊರುಗಳ ಕಡೆ ಪ್ರಯಾಣ ಬೆಳೆಸಿದ್ರು. ಆದರೆ ಸಾವಿರಾರು ವಲಸೆ ಕಾರ್ಮಿಕರು ಸೈಕಲ್ ಮೇಲೆ, ಕಾಲ್ನಡಿಗೆಯಲ್ಲೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದನ್ನ ನಾವೆಲ್ಲಾ ನೋಡಿದ್ದೇವೆ.

Advertisements

ಇನ್ನು ಇದೇ ವೇಳೆ ಅರುಂಧತಿ ಖ್ಯಾತಿಯ, ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲೂ ಖಳನಾಯಕನಾಗಿ ಮಿಂಚಿರುವ ನಟ ಸೋನು ಸೂದ್ ಅವರು ಸಾವಿರಾರು ವಲಸೆ ಕಾರ್ಮಿಕರ ನೆರವಿಗೆ ಬಂದರು. ಬಸ್, ವಿಮಾನಗಳಲ್ಲಿ ತಮ್ಮ ಸ್ವಂತದೆ ಖರ್ಚಿನಿಂದ ಸುಮಾರು ೨೦ ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನ ಅವರ ಊರುಗಳಿಗೆ ಊರುಗಳಿಗೆ ತಲುಪಿಸುವ ಕಾರ್ಯ ಮಾಡಿದ್ರು. ಇದರ ಜೊತೆಗೆ ಊಟ, ತಿಂಡಿಯ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ್ರು. ನಿಜಜೀವನದಲ್ಲಿ ಹೀರೋ ಆದರು.

ಸ್ನೇಹಿತರೆ, ಒಳ್ಳೆಯ ಕೆಲಸಕ್ಕೆ ಉತ್ತಮವಾದ ಫಲವೇ ಸಿಗುತ್ತದೆ ಎಂಬಂತೆ, ಸೋನು ಸೂದ್ ರವರ ಈ ಸಾಮಾಜಿಕ ಕಾರ್ಯಗಳಿಗೆ ಮೆಚ್ಚಿ ದೊಡ್ಡ ಕಂಪನಿಯೊಂದು ಅಂಬಾಸಿಡರ್ ಪಟ್ಟವನ್ನ ಕೊಟ್ಟಿದೆ. ಹೌದು, ಕೂಲ್ಡ್ರಿಂಕ್ಸ್ ಕಂಪನಿಯೊಂದು ಸೋನು ಸೂದ್ ರವರನ್ನ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ನ್ನಾಗಿ ನೇಮಕ ಮಾಡಿದೆ. ವಿಶೇಷ ಏನೆಂದರೆ ಈ ಕಮಣಿಯು ಮೊದಲು ಬಾಲಿವುಡ್ ಬಾದ್ ಷಾ ಸಲ್ಮಾನ್ ಖಾನ್ ರವರನ್ನ ಬ್ರಾಂಡ್ ಅಂಬಾಸಿಡರ್ ಅನ್ಬನಾಗಿ ಮಾಡಿತ್ತು ಅಂತ ಹೇಳಲಾಗಿದ್ದು, ಈಗ ಸಲ್ಮಾನ್ ಖಾನ್ ಬದಲಾಗಿ ಸೋನು ಸೂದ್ ರವರು ಕಂಪನಿಯ ಪ್ರಚಾರ ಕೆಲಸವನ್ನ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕಂಪನಿಯ ಇಂದು ಹಂತಕ್ಕಾಗಿ ಸೋನು ಸೂದ್ ರವರನ್ನ ಅಂಬಾಸಿಡರ್ ನ್ನಾಗಿ ಮಾಡಲಾಗಿದ್ದು, ಸೋನು ಅವರೇ ಪ್ರಚಾರ ರಾಯಭಾರಿಯಾಗಿ ಮುಂದುವರಿಯಲು ಕಂಪನಿ ಕೂಡ ನಿರಾಕರಣೆ ಮಾಡಿಲ್ಲ ಎಂದು ಹೇಳಲಾಗಿದೆ.