Advertisements

ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನುವಾಪಸ್ ಕೊಡಿಸುತ್ತೇನೆ! ಬಡವನ ಬೆನ್ನಿಗೆ ನಿಂತ ಸೋನು ಸೂದ್

News

ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಸಾಕಿದ ಹಸುವನ್ನೇ ಮಾರಿ ಆನ್ ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಕೊಡಿಸದ ಸುದ್ದಿ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ‌. ಇನ್ನೂ ಬಾಲಿವುಡ್ ನಟ ತೆರೆಯಲ್ಲಿ ಖಳನಾಯಕ ರಿಯಲ್ ಲೈಪ್ ನಲ್ಲಿ ರಿಯಲ್ ಹೀರೋ ಎಂದು ಗುರುತಿಸಿಕೊಂಡಿರುವ ಸೋನು ಸೂದ್ ಅವರು ಇದರ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Advertisements

ಹಸು ಮಾರಿದ ತಂದೆಯ ಈ ಸುದ್ದಿಗೆ ಟ್ಟೀಟ್ ಮಾಡಿರುವ ಸೋನು ಸೂದ್ ಅವರು, ಆನ್ ಲೈನ್ ಶಿಕ್ಷಣಕ್ಕೆ ಮಾರಿದ ಹಸುವನ್ನು ನಾನು ವಾಪಸ್ ಕೊಡಸ್ತೀನಿ, ಸದ್ಯಕ್ಕೆ ‌ನನಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದೆ ಯಾರಾದರೂ ಮಾಹಿತಿಯನ್ನು ನೀಡಿ ಎಂದು ಮನವಿಯನ್ನ ಮಾಡಿಕೊಂಡಿದ್ದಾರೆ.

ಸೋನು ಸೂದ್ ಈ ರೀತಿ ಮನವಿ ಮಾಡುಕೊಳ್ಳುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಲಾಕ್ ಡೌನ್ ಸಮಯದಲ್ಲಿ ಸಿಲುಕಿಕೊಂಡ ಕಾರ್ಮಿಕರನ್ನು ಊರಿಗೆ ತಲುಪಿಸಿದ್ದರು. ಇಷ್ಟೇ ಅಲ್ಲದೇ ವಲಸೆ ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಿದ್ದರು. ಇತ್ತೀಚಿಗೆ ಪೋಲಿಸರಿಗೆ 26 ಸಾವಿರ ಪೇಸ್ ಶೀಲ್ಡ್ ನೀಡುವ ಮೂಲಕ ಇದುವರೆಗೂ ಮಾನವೀಯ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ‌.

ಇದೀಗ ಹಸು ವಾಪಸ್ ಕೊಡಿಸುತ್ತೇನೆ ಎಂದು ಬಡವನ ಕುಟುಂಬದ ಪಾಲಿಗೆ ಬೆನ್ನಿಗೆ ನಿಂತಿದ್ದಾರೆ. ಒಬ್ಬ ನಟ ಎಕಾಂಗಿಯಾಗಿ ನಮ್ಮ ದೇಶದ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಈಗೆ ದೇಶದಲ್ಲಿರುವ ಎಲ್ಲಾ ರಾಜಕಾರಣಿಗಳು ಈ ರೀತಿ ಇಂತಹ ಮಾನವೀಯ ಕಾರ್ಯಗಳು ಹಾಗಬಹದು ಎಂದು ನೀವೇ ಊಹಿಸಿಕೊಳ್ಳಿ. ನಟ ಸೋನು ಸೂದ್ ಅವರು ಮಾಡುತ್ತೀರುವ ಈ ಮಾನವೀಯತೆಯ ಕಾರ್ಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು‌. ದೇವರು ನಿಮಗೆ ಹೆಚ್ಚನಿ ಆರೋಗ್ಯ ಸಂಪತ್ತನ್ನು ನೀಡಲಿ, ನಿಮ್ಮಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು ಹಾಗಲಿ, ಜೈ ಹಿಂದ್ ಸರ್.