Advertisements

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್ ನಲ್ಲಿ ಹೀರೊ ಆದ ನಟ..

Cinema News

ಬಸ್ಕೊ ಗಾಲ ರೋನಾ ಹಿನ್ನಲೆ ಲಾಕ್ ಡೌನ್ ಇರುವ ಕಾರಣ ಬೇರೆ ಬೇರೆ ರಾಜ್ಯಗಳ ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಮುಂಬೈನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳ ವಲಸೆ ಕಾರ್ಮಿಕರನ್ನ ಅವರ ರಾಜ್ಯಗಳಿಗೆ ಕಳುಹಿಸಲು, ಆರುಂಧತಿ ಖ್ಯಾತಿಯ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಬೇಕಾದ ಊಟ ಸೇರಿದಂತೆ, ಬಸ್ ಗಳ ವ್ಯವಸ್ಥೆ ಕೂಡ ಮಾಡಿ ಮಾನವೀಯತೆ ಮೆರೆದಿದ್ದರು.

Advertisements

ಸಿನಿಮಾದಲ್ಲಿ ವಿಲನ್ ಆಗಿ ವಿಜೃಂಬಿಸುತ್ತಿದ್ದ ಸೋನು ಸೂದ್ ನಿಜ ಜೀವನದಲ್ಲಿ ಹೀರೊ ಆಗಿದ್ದಾರೆ. ಹೌದು, ತಮ್ಮ ಸಾಮಾಜಿಕ ಕೆಲಸದಿಂದ ಮತ್ತೊಮ್ಮೆ ಮಾನವೀಯತೆ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ ಸೋನು ಸೂದ್. ಒರಿಸ್ಸಾ ರಾಜ್ಯದ 177 ಯುವತಿಯರು ಕೇರಳ ರಾಜ್ಯದಲ್ಲಿಸಿಕ್ಕಿಹಾಕೊಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿದ್ದರು. ಈಗ ಅವರನ್ನೆಲ್ಲಾ ಅವರ ಅವರ ಊರುಗಳಿಗೆ ಮರಳುವಂತೆ ಮಾಡಲು ಬಾಡಿಗೆ ವಿಮಾನದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕೇರಳದಲ್ಲಿ ಸಿಕ್ಕಿ ಹಾಕಿಕೊಂಡಿರುವ ಯುವತಿಯರ ಬಗ್ಗೆ ಭುವನೇಶ್ವರದಲ್ಲಿರುವ ತಮ್ಮ ಸ್ನೇಹಿತನೊಬ್ಬನಿಂದ ಮಾಹಿತಿ ಪಡೆದ ಸೋನು ಸೂದ್ ರವರು ತಕ್ಷಣವೇ ಅಲ್ಲಿನ ಸರ್ಕಾರದ ಅನುಮತಿ ಪಡೆದು, ಬೆಂಗಳೂರಿನ ವಿಮಾನವೊಂದನ್ನ ಬಾಡಿಗೆ ಪಡೆದು, ಕೇರಳದ ಕೊಚ್ಚಿಗೆ ಕಳುಹಿಸಿದ್ದು, ಕೇರಳದಲ್ಲಿರುವ ಯುವತಿಯರನ್ನ ಒರಿಸ್ಸಾಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಸೋನು ಸೂದ್ ರವರ ಈ ಮಾನವೀಯತೆಗೆ ಎಲ್ಲಾ ಅಕೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.