Advertisements

ಹೇಗಿದೆ ನೋಡಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಮಾಧಿ..

Cinema Entertainment

ಪ್ರಿಯ ಓದುಗರೆ ಹಾಡು ಮುಟ್ಟದ ಸೊಪ್ಪಿಲ್ಲ ಬಾಲಸುಬ್ರಹ್ಮಣ್ಯಂ ಅವರು ಹಾಡದ ಹಾಡಿಲ್ಲ. ಅಷ್ಟರಮಟ್ಟಿಗೆ ಸಂಗೀತ ಸರಸ್ವತಿಯನ್ನು ಎಸ್ಪಿಬಿ ಅವರು ಅರೆದು ಕುಡಿದಿದ್ದರು. ಇವರ ಕಂಠಸಿರಿಗೆ ಅದೆಷ್ಟೋ ಲಕ್ಷಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಇವರ ಕುರಿತು ಕೆಲ ಸನ್ನಿವೇಶಗಳನ್ನು ಮೆಲುಕು ಹಾಕೋಣ ಬನ್ನಿ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಅಗಲಿದ್ದು, ಗಾನ ಲೋಕದ ಒಂದು ಅಮೂಲ್ಯ ಕೊಂಡಿ ಕಳಚಿದಂತಾಗಿದೆ. ಇವರ ಕಂಠ ದಿಂದಲೇ ಅದಷ್ಟು ಸಾಹಿತ್ಯಗಳು ಇಂದಿಗೂ ಜೀವಂತವಾಗಿವೆ. ಇವರು ಇಂದಿಗೂ ಎಲ್ಲರ ಕಿವಿಯಲ್ಲಿ ಹಾಗೂ ಬಾಯಲ್ಲಿ ಹರಿದಾಡುತ್ತಿದ್ದರೆ. ಇನ್ನೂ ಇವರು ಹುಟ್ಟಿದ್ದು ಎಲ್ಲಿ ಎಂದು ನೋಡಿದರೆ, ಎಸ್ಪಿಬಿ ಅವರು ಆಂಧ್ರಪ್ರದೇಶದ ಚಿತ್ತೂರಿನ ಕೊನೆಟ್ಟಮ್ಮ್ಪೆಟ್ಟು ಎಂಬಲ್ಲಿ ಹರಿಕಥೆ ಹೇಳುತ್ತಿದ್ದ ಸಾಂಬಮೂರ್ತಿ ಮಗನಾಗಿ ಜನಿಸಿದರು ಪ್ರೇರಿತರಾದವರು ಸಂಗೀತ ಲೋಕದ ದಿಗ್ಗಜರು ಆದರು. ಹಾರ್ಮೋನಿಯಂ, ಕೊಳಲು,ತಬಲವನ್ನು ಸಹ ಸ್ವತಃ ಕಲಿತರು.

[widget id=”custom_html-3″]

Advertisements

ತಮಿಳು ತೆಲುಗು, ಕನ್ನಡದಲ್ಲಿ ಒಂದೇ ದಿನದಲ್ಲಿ 17ರಿಂದ 19 ಗೀತೆಗಳನ್ನು ಮುದ್ರಿಸುವ ಅಂತಹ ಕಲಾಕೌಶಲ್ಯ ಸಂಗೀತಗಾರ ಎಸ್ಪಿಬಿ ಅವರು. ಅಷ್ಟರ ಮಟ್ಟಿಗೆ ಸಂಗೀತ ಸರಸ್ವತಿಯನ್ನು ಒಲಿಸಿಕೊಂಡಿದ್ದರು. ಕನ್ನಡದಲ್ಲಿಯೂ ಸಂಗೀತಲೋಕದಲ್ಲಿ ಸಾರ್ವಭೌಮತ್ವವನ್ನು ಸಾಧಿಸಿದವರು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು. ಹಾವಿನ ದ್ವೇಷ ಹನ್ನೆರಡು ವರುಷ ‘ಎಂದು ಹೇಳುವ ಮೂಲಕ ವಿಷ್ಣುವರ್ಧನ್ ಅವರನ್ನು ಹೆಸರಗುವಂತೆ ಮಾಡಿದರು. ಸ್ನೇಹದ ಕಡಲಿನಲಿ ನೆನಪಿನದೋಣಿಯಲ್ಲಿ ‘ಎಂದು ಹಾಡುವ ಮೂಲಕ ಶ್ರೀನಾಥ ಪ್ರಣಯರಾಜ ಎಂದು ಹೆಸರು ಬರಲು ಕಾರಣರಾದರು. ಎಲ್ಲಿರುವೆ ಮನವ ಕಾಡುವ ರೂಪಸಿಯೇ ಎಂದು ಹಾಡಿನ ಮೂಲಕ ಅನಂತ್ ನಾಗ್ ಅವರು ಗಗನಕ್ಕೆ ಹಾರಿ ಗಗನದೆತ್ತರಕ್ಕೆ ಹೆಸರು ಮಾಡಿದರು. ಹೀಗೆ ಅನೇಕ ಹಾಡುಗಳನ್ನು ಹಾಡುವ ಮೂಲಕ ಕನ್ನಡದ ನಟರಿಗೆ ಆಂತರಿಕ ಧ್ವನಿಯಾದ ಎಸ್ಪಿಬಿ ನಟರನ್ನು ತಮ್ಮ ಕಂಠದ ಮೂಲಕ ಉತ್ತುಂಗಕ್ಕೆ ಏರುವಂತೆ ಮಾಡಿದರು.

[widget id=”custom_html-3″]


ಹಾಗೆ ಕಮಲ್ ಹಾಸನ್, ಚಿರಂಜೀವಿ ಹೀಗೆ ಅನೇಕ ಮೇರು ನಟರ ಕಂಠಸಿರಿಗೆ ಎಸ್ಪಿಬಿ ಆಂತರಿಕ ಧ್ವನಿ ನೀಡಿ ಹೆಸರಾದರು. ಹಾಗೆ ಕನ್ನಡ ತೆಲುಗು ತಮಿಳು ಭಾಷೆಗಳಲ್ಲಿ ಇವರ ಕಂಠಸಿರಿಗೆ ಅದೆಷ್ಟು ಸಾವಿರಾರು ಹಾಡುಗಳು ಗಗನದೆತ್ತರಕ್ಕೆ ಮುಟ್ಟಿದವು. ನಾಡಿನ ಎಲ್ಲೆಡೆ ಪಸರಿಸಿ ದವು. ಅವರಿಗೆ ಅತ್ಯುತ್ತಮ ಗಾನ ಪ್ರಶಸ್ತಿ ಕೂಡ ಇದೇ ಸಮಯದಲ್ಲಿ ಲಭಿಸಿತು. ನಂತರ ಪ್ರಶಸ್ತಿಗಳ ಸರಮಾಲೆ ಇವರತ್ತ ಹರಿದುಬಂದಿತ್ತು. ಆದರೆ ಕ್ರೂ’ರಿ ಕ’ರೋ’ನಾ ಇವರನ್ನು ಬಾಧಿಸಿದ್ದು,ಇವರ ಕಂಠವನ್ನೇ ಕಿತ್ತುಕೊಂಡಿತು.
ಹೌದು 2020 ಸೆಪ್ಟಂಬರ್ನಲ್ಲಿ ಚೆನ್ನಾಗಿ ಆಸ್ಪತ್ರೆಯಲ್ಲಿ ಗಂಟಲು ನೋವಿನಿಂದ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊನೆಯುಸಿರೆಳೆದರು. ಇದೀಗ ಅವರ ಸ’ಮಾ’ಧಿಯನ್ನು ಚೆನ್ನೈನ 33 ಕಿಲೋಮೀಟರ್ ದೂರದಲ್ಲಿರುವ ಥಮರೈ ಎಂಬ ಅವರ ಫಾರ್ಮ್ ಹೌಸ್ ನಲ್ಲಿ ಮಾಡಿದ್ದಾರೆ ನೀವು ಸಂಗೀತಪ್ರೇಮಿ ಗಾನಲೋಕದ ದಿಗ್ಗಜನ ಸ’ಮಾ’ಧಿಯನ್ನು ನೋಡಲು ಇಚ್ಛಿಸಿದರೆ ಇವರ ಫಾರ್ಮಸಿಗೆ ಒಮ್ಮೆ ಭೇಟಿ ನೀಡಿ. ಇವರ ಸ’ಮಾಧಿಯ ದರ್ಶನವನ್ನು ಪಡೆಯಿರಿ.

[widget id=”custom_html-3″]