Advertisements

ಗಾನ ಕೋಗಿಲೆ SPB ಯವರ ಅರೋಗ್ಯ ಕೆಡಲು ಇದೇ ಕಾರಣವಾಯ್ತಾ ?

Cinema

ಗಾನಕೋಗಿಲೆ ಶಾಶ್ವತವಾಗಿ ಹಾಡುವುದನ್ನ ನಿಲ್ಲಿಸಿದೆ. ಇಡೀ ಭಾರತೀಯ ಚಿತ್ರರಂಗ ಒಬ್ಬ ಅದ್ಭುತ ಗಾನ ಗಂಧರ್ವನನ್ನ ಕಳೆದುಕೊಂಡಿದೆ. ಹೌದು, ಅದ್ಭುತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂರವರು ಇನ್ನು ನೆನಪು ಮಾತ್ರ. ಆದರೆ ಅವರು ಹಾಡಿದ ಹಾಡುಗಳ ಮೂಲಕ ಶಾಶ್ವತವಾಗಿ ಈ ಭೂಮಿಯ ಮೇಲೆ ಅಮರರಾಗಿರುತ್ತಾರೆ. ಚೆನ್ನೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದ SPBಯವರು ಕಳೆದ ಒಂದು ತಿಂಗಳಿಂದ ಸಾ’ವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಕಾರಣ ಇಂದು ೨೫ ಶುಕ್ರವಾರ ಮಧ್ಯಾನ್ಹ ೧.೦೪ನಿಮಿಷಕ್ಕೆ ಸ್ವರ್ಗಸ್ತರಾಗಿದ್ದಾರೆ.

Advertisements

SPBಯವರು ಗುಣಮುಖರಾಗಿ ಮತ್ತೆ ನಮ್ಮ ಮುಂದೆ ಬಂದು ಹಾಡಬೇಕು ಎಂದು ಪ್ರಾರ್ಥಿಸಿದ್ದ ಕೋಟ್ಯಾಂತರ ಅಭಿಮಾನಿಗಳು ಪ್ರಾರ್ಥನೆ ಫಲಿಸಲೇ ಇಲ್ಲ. ಇಂದು ಭಾರತೀಯ ಚಿತ್ರರಂಗಕ್ಕೆ ಕರಾಳ ದಿನವೇ ಸರಿ. ಆದರೆ SPBಯವರ ತೂಕ ಇಳಿಸಿಕೊಂಡಿರುವುದೇ ಅವರ ಇಮ್ಯುನಿಟಿ ಶಕ್ತಿ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ಹೌದು, ಎಂಟು ವರ್ಷಗಳ ಹಿಂದೆ ಅಂದರೆ ೨೦೧೨ರಲ್ಲಿ ಅವರು ಸರ್ಜರಿಗೆ ಒಳಗಾಗಿದ್ದು, ಅನಂತರ ಅವರಲ್ಲಿ ಇಮ್ಮ್ಯೂನಿಟಿ ಶಕ್ತಿಯು ಕಡಿಮೆಯಾಗಿತ್ತು ಎನ್ನುವ ಮಾಹಿತಿ ಇದೆ. ಇನ್ನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಮೊದಲು ಎಸ್.ಪಿ.ಬಾಲಸುಬ್ರಮಣ್ಯಂರವರು ೧೩೫ ಕೆಜಿ ತೂಕ ಹೊಂದಿದ್ದು ಸರ್ಜರಿ ಬಳಿಕ ಅವರು ತೂಕ ೯೬ ಕೆಜಿಗೆ ಇಳಿದಿತ್ತು ಎನ್ನಲಾಗಿದೆ.

ಇನ್ನು ಆ ಸಮಯದಲ್ಲಿ ತಾವು ತೂಕ ಇಳಿಸಿಕೊಂಡಿದ್ದರ ಬಗ್ಗೆ ಮಾತನಾಡಿದ್ದ SPBಯವರು ಸರ್ಜರಿ ಬಳಿಕ ನಾನು ೩೫ ಕೆಜಿಯವರೆಗೆ ತೂಕ ಇಳಿಸಿಕೊಂಡಿದ್ದೇನೆ. ಇದು ನನಗೆ ಉತ್ತಮ ಜೀವನಮಟ್ಟವನ್ನ ಕೊಡುವುದರ ಜೊತೆಗೆ ಉತ್ತಮ ಗಾಯಕನನ್ನಾಗಿ ಮಾಡಿದೆ ಎಂದು ಹೇಳಿದ್ದರು. ಆದರೆ ಈ ಶಸ್ತ್ರ ಚಿಕಿತ್ಸೆಯ ಬಳಿಕ ಎಸ್.ಪಿ.ಬಾಲಸುಬ್ರಮಣ್ಯಂರವರ ಆರೋಗ್ಯದಲ್ಲಿ ಪದೇ ಪದೇ ಏರುಪೇರು ಕಾಣಿಸಿಕೊಂಡಿದ್ದು ಇಮ್ಮ್ಯೂನಿಟಿ ಶಕ್ತಿ ಕೂಡ ಕಡಿಮೆಯಾಗಿತ್ತು ಎನ್ನಲಾಗಿದೆ. ಕೋಟ್ಯಂತರ ಜನರಿಗೆ ತಮ್ಮ ಗಾಯನದಿಂದಲೇ ರಸದೌತಣ ನೀಡಿದ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಮಣ್ಯಂರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಪ್ರಾರ್ಥಿಸೋಣ..