Advertisements

ಎಷ್ಟೇ ಶತಮಾನ ಕಳೆದ್ರು ಇವರಷ್ಟು ಹಾಡುಗಳನ್ನು ಹಾಡಲು ಯಾರ ಕೈಯಿಂದ ಆಗಲ್ಲ ಅನಿಸುತ್ತೆ.‌. ಒಂದೇ ದಿನದಲ್ಲಿ ಎಸ್ ಪಿ ಬಿ ಅವರು ಎಷ್ಟು ರಾಜ್ಯಗಳಲ್ಲಿ ಹಾಡ್ತಾ ಇದ್ರು ಗೊತ್ತಾ?

Cinema Entertainment

ಇವರು ಹಾಡಿದ ಹಾಡುಗಳು ಅದೆಷ್ಟು ಪುಣ್ಯ ಮಾಡಿದವೋ, ಇವರ ಕಂಚಿನ ಕಂಠಕ್ಕೆ ಮರುಳಾಗದವರಿಲ್ಲ, ಕನ್ನಡಿಗರ ಎದೆಬಡಿತದಲ್ಲಿ ವಿಲೀನವಾಗಿರುವ ಧ್ವನಿಗೆ ಸಾ’ವಿ’ಲ್ಲ, ಸಾವು ಕೇವಲ ದಣಿದ ದೇಹಕಷ್ಟೇ.. ಎಸ್ ಎಸ್‌ಬಿ ಬಾಲಸುಬ್ರಹ್ಮಣ್ಯಂ ಅವರು ಇವತ್ತು ನಮ್ಮ ಜೊತೆಗೆ ಇಲ್ಲ ಅಂದ್ರು ಸಹ ಅವರು ಹಾಡಿದ ಹಾಡುಗಳು ಇಂದಿಗೂ ಜೀವಂತ, ಎಂದೆಂದಿಗೂ ಜೀವಂತ. ಅಂತಹ ಗಾನ ಗಾರುಡಿಗನ ಹಾಡಿನ ಜರ್ನಿ ಆರಂಭವಾದ ಬಗೆಯನ್ನು ಇವತ್ತು ಸಂಖ್ಷಿಪ್ತವಾಗಿ ಹೇಳುವ ಪ್ರಯತ್ನ ಮೂಲತಃ ತೆಲುಗಿನವರಾದ ಎಸ್‌ಪಿಬಾಲಸುಬ್ರಹ್ಮಣ್ಯಂ ಅವರ ಕುಟುಂಬ ತಮಿಳುನಾಡಿನಲ್ಲಿ ಬೀಡುಬಿಟ್ಟಿತ್ತು, ಇವರ ತಂದೆ ಸಹ ಹರಿಕತೆ ಹೇಳುತ್ತಾ, ನಾಟಕಗಳಲ್ಲಿ ಅಭಿನಯಿಸುತ್ತಾ ಇದ್ದರು.

[widget id=”custom_html-3″]

Advertisements

ಇನ್ನು ಎಸ್‌ಪಿಬಿ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಸಹ ಸಿಂಗರ್ ಆಗಬೇಕೆಂಬ ಆಸೆಯಿತ್ತು, ಅದಕ್ಕೆ ಪೂರಕವಾದ ಅಭ್ಯಾಸ ಸಹ ಮಾಡ್ತಾಯಿದ್ದರು, ಹಾಗಂತ ಎಜುಕೇಶನ್‌ನ್ನು ಎಂದಿಗೂ ನಿರ್ಲಕ್ಷಿಸಿರಲಿಲ್ಲ, ಈ ಹಿನ್ನಲೆ ಆಂಧ್ರಪ್ರದೇಶದಲ್ಲಿ ಇಂಜಿನಯರಿಂಗ್ ಓದಲು ಸೇರಿಕೊಳ್ತಾರೆ, ನಂತರ ಆರೋಗ್ಯ ಏ’ರುಪೇರಾದ ಕಾರಣ ಚೆನೈ ಅಲ್ಲಿಯೇ ಇಂಜಿನಯರಿಂಗ್ ಮುಂದುವರೆಸ್ತಾರೆ, ಅಲ್ಲಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತೆ, ಸಾಕಷ್ಟು ಸಂಗೀತ ಕಾರ್ಯಕ್ರಮಗಳನ್ನು ಸಹ ಕೊಡುತ್ತಾರೆ, ಹೀಗೆ ಒಂದು ಸ್ಪರ್ಧೆಯಲ್ಲಿ ಭಾಗವಹಿಸುವಾಗ ಇಳಯರಾಜ ಅವರ ಪರಿಚಯವಾಗುತ್ತೆ, ಆ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಎಸ್‌ಪಿಬಿ ಅವರಿಗೆ ಸಿನಿಮಾಗಳಲ್ಲಿ ಹಾಡುವಂತೆ ಸಂಗೀತ ದಿಗ್ಗಜರು ಸಲಹೆ ಕೊಡುತ್ತಾರೆ.

[widget id=”custom_html-3″]

ಹೀಗೆ ಸತತ ಶ್ರಮದಿಂದ ತೆಲುಗಿನ ಸಿನಿಮಾವೊಂದಕ್ಕೂ ಸಹ ಎಸ್‌ಪಿಬಿ ಹಾಡುತ್ತಾರೆ, ಇವರು ಮೊದಲು ಶ್ರೀ ಮರ್ಯಾದೆ ರಾಮಣ್ಣ ಎಂಬ ಸಿನಿಮಾಕ್ಕೂ ಸಹ ಧ್ವನಿ ನೀಡುತ್ತಾರೆ, ಅಲ್ಲಿಂದ ಸೂಪರ್‌ಹಿಟ್ ಆಗಿ ತಮಿಳಿಗೆ ಸಹ ಎಂಟ್ರಿ ಕೊಡುತ್ತಾರೆ, ತಮಿಳಿನಲ್ಲಿ ಸಹ ಲೆಜೆಂಡರಿ ಕಲಾವಿದರಿಗೆ ತನ್ನ ಧ್ವನಿಯನ್ನು ಕೊಟ್ಟು ಫೇಮಸ್ ಆದ್ರು, ಬಳಿಕ ಕನ್ನಡದಲ್ಲಿ ಮೊದಲು ನಕ್ಕರೆ ಅದೇ ಸ್ವರ್ಗ ಎಂಬ ಸಿನಿಮಾದಲ್ಲಿ ಹಾಡುತ್ತಾರೆ, ಅವರು ಹಾಡಿದ ಹಾಡು ಸೂಪರ್ ಹಿಟ್ ಆಗುತ್ತೆ. ಹಿಂದಿಯಲ್ಲಿ ಪ್ರಪ್ರಥಮವಾಗಿ ಕಮಲ್‌ಹಾಸನ್ ಅವರ ಏಕ್ ದುಜೆ ಕೆಲಿಯೇ ಎಂಬ ಸಿನಿಮಾಕ್ಕೆ ಹಾಡ್ತಾರೆ, ಇವರ ಕಂಠಕ್ಕೆ ಬಾಲಿವುಡ್ ಅಂಗಳ ಫುಲ್ ಫಿದಾ ಆಯ್ತು, ಜೊತೆಗೆ ಇವರ ಧ್ವನಿಗೆ ಇವರಿಗೆ ರಾಷ್ಟ್ರಪ್ರಶಸ್ತಿ ಸಹ ಲಭ್ಯವಾಯಿತು.

[widget id=”custom_html-3″]

ನಂತರ ಸಲ್ಮಾನ್ ಖಾನ್ ಅಭಿನಯದ ಮೈನೇ ಪ್ಯಾರ್ ಕಿಯಾ, ಹಮ್ ಆಪ್ ಕೆ ಹೆ ಕೌನ್ ಸಿನಿಮಾಗಳಲ್ಲಿಯೂ ಸಹ ಹಾಡು ಹಾಡಿ ಉತ್ತಮ ಹೆಸರು ಮಾಡ್ತಾರೆ, ಹಿಂದಿಯ ಪ್ರಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಜೊತೆಗಿನ ಕಾಂಬೋ ಸಹ ಸೂಪರ್ ಹಿಟ್ ಆಗುತ್ತೆ. ಇನ್ನು ಕನ್ನಡದಲ್ಲಿ ನಾದಬ್ರಹ್ಮ ಹಂಸಲೇಖ ಅವರ ಜೊತೆ ಕೆಲಸ ಮಾಡಿ ಸಾಕಷ್ಟು ಸೂಪರ್‌ಹಿಟ್ ಹಾಡು ಕೊಟ್ಟಿದ್ದಾರೆ, ಪ್ರೇಮಲೋಕದ ಒಂದೊಂದು ಹಾಡು ಸಹ ಎವರ್‌ಗ್ರೀನ್ ಎಂಬಂತೆ ಹಿಟ್ ಆದ್ವು.

[widget id=”custom_html-3″]

ಇನ್ನು ಎಸ್‌ಪಿಬಿ ಅವರು ಎಷ್ಟೋ ಸಲ ಬೆಂಗಳೂರಿನಲ್ಲಿ ರೆಕಾರ್ಡಿಂಗ್ ಮುಗಿಸಿ ಚೆನೈಗೆ ಹೋಗುತ್ತಿದ್ರಂತೆ, ಚೆನೈ ಮುಗಿಸಿ ಹೈದ್ರಾಬಾದ್ ಹೋಗುತ್ತಿದ್ರಂತೆ, ಸಮಯಕ್ಕೆ ಸರಿಯಾಗಿ ರೆಕಾರ್ಡಿಂಗ್ ಮಾಡ್ತಾಯಿದ್ರಂತೆ. ಒಂದು ದಿನದಲ್ಲಿ 19 ಹಾಡುಗಳನ್ನು ಸಹ ಎಸ್‌ಪಿಬಿ ಹಾಡಿದ್ದುಂಟು. ಇನ್ನು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಭಾರತದ ಅನೇಕ ಭಾಷೆಗಳಲ್ಲಿ ಹಾಡಿರುವ ದಣಿವರಿಯದ ಗಾನ ಗಾರುಡಿಗನ ಹೆಸರು ಗಿನ್ನಿಸ್ ರೆಕಾರ್ಡ್ನಲ್ಲಿ ಸಹ ದಾಖಲಾಗಿದೆ.