Advertisements

ವಿಶ್ವೇಶ್ವರಯ್ಯನವರು ಕಟ್ಟಿದ ಈ ಡ್ಯಾಮ್ ನಲ್ಲಿ ಒಂದೇ ಒಂದು ಕಲ್ಲು ತೆಗೆದ್ರೆ ಇಡೀ ಡ್ಯಾಮ್ ಮಟಾಷ್ ಆಗುತ್ತಾ !?

Motivation

ಸ್ನೇಹಿತರೆ, ಭಾರತ ರತ್ನ ಮೋಕ್ಷ ಗುಂಡಂ ಸರ್.ಎಮ್.ವಿಶ್ವೇಶ್ವರಯ್ಯನವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸೆಪ್ಟೆಂಬರ್ 15,1860 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ತಂದೆ ‘ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ ದಂಪತಿಗಳ ಮಗನಾಗಿ ಜನಿಸುತ್ತಾರೆ. ಒಮ್ಮೆ ಜಗತ್ತಿನ ದೊಡ್ಡಣ್ಣ ಅಮೆರಿಕದಿಂದ ಬಂದಂತ ಕೆಲವು ಇಂಜಿನಿಯರ್ ಗಳು ವಿಶ್ವೇಶ್ವರಯ್ಯನವರನ್ನ ಭೇಟಿ ಮಾಡಿ ಅಮೆರಿಕಾದಲ್ಲಿ ಡ್ಯಾಮ್ ನ್ನ ಕಟ್ಟೋಕೆ ಕೇಳಿಕೊಳ್ಳುತ್ತಾರೆ. ಆಗ ವಿಶ್ವೇಶ್ವರಯ್ಯನವರು ನಾನು ಖಂಡಿತಾ ಅಮೆರಿಕಾದಲ್ಲಿ ನಿಮಗೆ ಡ್ಯಾಮ್ ಕಟ್ಟಿಕೊಡುತ್ತೇನೆ. ಆದರೆ ನಿಮ್ಮ ಡ್ಯಾಮ್ ಮೇಲೆ ನಮ್ಮ ದೇಶದ ಹೆಸರನ್ನ ಇಡೋದಕ್ಕೆ ಒಪ್ಪಿದರ ಮಾತ್ರ ಎಂದು ಷರತ್ತು ಹಾಕುತ್ತಾರೆ.

ಆದರೆ ಅಮೇರಿಕಾದ ಇಂಜಿನಿಯರ್ ಗಳು ಅವರ ದೇಶದ ಡ್ಯಾಮ್ ನಲ್ಲಿ ಇಂಡಿಯಾ ಹೆಸರನ್ನ ಇಡೋಕ್ಕೆ ಒಪ್ಪೋದಿಲ್ಲ. ಆದರೆ ಇದರ ನಡುವೆಯೇ ಒಂದು ಸಣ್ಣ ಒಪ್ಪನಿಂದ ಆಗಿದ್ದು ಡ್ಯಾಮ್ ನ ಯಾವುದಾದರೂ ಮೂಲೆಯಲ್ಲಿ ನಮ್ಮ ದೇಶದ ಹೆಸರನ್ನ ಇಡುವುದಾಗಿ ವಿಶ್ವೇಶ್ವರಯ್ಯನವರು ಅಮೆರಿಕಾದ ಇಂಜಿನಿಯರ್ ಗಳ ಬಳಿ ಒಪ್ಪಿಗೆ ತೆಗೆದುಕೊಳ್ಳುತ್ತಾರೆ. ಬಳಿಕ ಡ್ಯಾಮ್ ನ ನಿರ್ಮಾಣವೆಲ್ಲಾ ಸಂಪೂರ್ಣವಾಗಿ, ಉದ್ಘಾಟನೆಯಾಗುತ್ತೆ. ಆಗ ಅಮೆರಿಕಾದ ಇಂಜಿನಿಯರ್ ಗಳು ವಿಶ್ವೇಶ್ವರಯ್ಯನವರಯ್ಯನವರ ಬಳಿ ನಿಮ್ಮ ಬೇಡಿಕೆಗೆ ನಾವು ಒಪ್ಪಿಗೆ ಕೊಡದಿದ್ದರೂ ಸಹ ನೀವು ನಮಗೆ ಸಹಾಯ ಮಾಡಿದ್ದೇಕೆ ಎಂದು ಅವರು ಕೇಳುತ್ತಾರೆ. ಆಗ ಸರ್.ಎಂ. ವಿಶ್ವೇಶ್ವರಯ್ಯನವರು ಅವರನ್ನ ಕರೆದು ಎಲಿಕಾಪ್ಟರ್ ಹತ್ತಿ ಮೇಲೇರಿ ಡ್ಯಾಮ್ ನ ಮೇಲೆ ಹಾರಾಟ ಮಾಡುತ್ತಾ ತೋರಿಸುತ್ತಾರೆ. ಆಗ ಇಡೀ ಡ್ಯಾಮ್ ನ ರಚನೆ ಮೇಲಿನಿಂದ ಇಂಡಿಯಾ ಅಂತ ಕಾಣುತಿತ್ತು. ಇದಿಷ್ಟೇ ಅಲ್ಲ ನಾನು ಡ್ಯಾಮ್ ನ ಮೂಲೆಯಲ್ಲಿ ಇಂಡಿಯಾ ಅಂತ ಬರೆದಿದ್ದು, ಆ ಐದು ಅಕ್ಷರಗಳಲ್ಲಿರುವ ಒಂದೇ ಒಂದು ಕಲ್ಲನ್ನ ತೆಗೆದರೂ ಸಂಪೂರ್ಣ ಡ್ಯಾಮ್ ಬಿಡು ಹೋಗುತ್ತೆ ಅಂತ ಸರ್.ಎಂ.ವಿ ಅವರು ಹೇಳುತ್ತಾರೆ. ಇದನ್ನ ನೋಡಿದ ಅಮೆರಿಕಾದ ಇಂಜಿನಿಯರ್ ಗಳು ಸರ್.ಎಂ. ವಿಶ್ವೇಶ್ವರಯ್ಯನವರಯ್ಯನವರ ತಾಕತ್ತು ಕಂಡು ದಂಗಾಗಿಬಿಡುತ್ತಾರೆ. ಮುಂದೇನಾಗುತ್ತೆ ಮೇಲಿರುವ ವಿಡಿಯೋ ನೋಡಿ..