Advertisements

ನಟ ಶ್ರೀ ಮುರುಳಿ ಕುಟುಂಬದ ಸುಂದರ್ ರೇರ್ ಕ್ಷಣಗಳು..

Cinema

ನಮಸ್ತೆ ಸ್ನೇಹಿತರೆ, ರೋರಿಂಗ್ ಸ್ಟಾರ್ ಎಂದೇ ಬಿರುದು ಪಡೆದಿರುವ ನಟ ಶ್ರೀ ಮುರುಳಿ ಅವರು ಹಲವು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಚಂದ್ರ ಚಕೋರಿ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ನಂತರದಲ್ಲಿ ಹಲವಾರು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ.. ಇನ್ನೂ ಕಳೆದ ಕೆಲವು ವರ್ಷಗಳ ಹಿಂದೆ ಶ್ರೀ ಮುರುಳಿ ಅವರು ನಟಿಸಿದ ಉಗ್ರಂ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿತ್ತು.

Advertisements

ಉಗ್ರಂ ಚಿತ್ರವನ್ನು ಕೆಜಿಎಪ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿರ್ದೇಶಿಸಿದ್ದರು. ಉಗ್ರಂ ಚಿತ್ರದ ಮೂಲಕ ಶ್ರೀ ಮುರುಳಿ ಅವರು ತಮ್ಮ ಟ್ಯಾಲೆಂಟ್‌ ಏನು ಎಂಬುದನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟರು.. ಒಂದು ಉತ್ತಮ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುವ ಮೂಲಕ ತಮ್ಮ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ಇನ್ನೂ ಶ್ರೀ ಮುರುಳಿ ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಅವರ ತಂದೆ ತಾಯಿ ಹಾಗೂ ಡಾ.ರಾಜ್ ಕುಮಾರ್ ಅವರ ಕುಟುಂಬ..

ಇನ್ನೂ ಇವರ ಅಣ್ಣ ವಿಜಯ ರಾಘವೇಂದ್ರ ಅವರು ಕೂಡ ತಮ್ಮನಿಗೆ ಉತ್ತಮ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತಾರೆ. ಇನ್ನೂ ಶ್ರೀ ಮುರುಳಿಯವರ ಪತ್ನಿ ವಿದ್ಯಾ ಅವರು ಕೂಡ ಸುಖ ದುಃಖಗಳಲ್ಲಿ ಪತಿಯ ಜೊತೆಯಾಗಿ ನಿಂತು ಸ್ಪೂರ್ತಿ ತುಂಬುತ್ತಾರೆ. ಇನ್ನೂ ಇವರು ಇತ್ತೀಚಗೆ ನಾಯಕ ನಟರಾಗಿ ನಟಿಸಿದ ಮದಗಜ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.