Advertisements

ರಾಘವೇಂದ್ರ ರಾಜ್ ಕುಮಾರ್ ಅವರ ಸ್ವಾಧೀನ ತಪಿದ್ದ ಕೈ ಕಾಲು ಪವಾಡ ಸದೃಶದಂತೆ ಸರಿಯಾಗಿದ್ದು ಇದೇ ದೇವಾಲಯದಲ್ಲಿ !

Cinema Temples

ಡಾ. ರಾಜ್ ಕುಮಾರ್ ಕನ್ನಡದ ಹೆಮ್ಮೆಯ ನಟ. ಕನ್ನಡದ ಧ್ರುವತಾರೆ. ಅವರು ಕನ್ನಡದ ಸಂಸ್ಕೃತಿಗೆ, ಕನ್ನಡ ಚಿತ್ರ ರಂಗಕ್ಕೆ ನೀಡಿರುವ ಕೊಡುಗೆ ಅಪಾರ. ತಮ್ಮ ಪ್ರತಿಭೆ ಮಾತ್ರವಲ್ಲ ತಮ್ಮ ಸರಳ ಸಜ್ಜನ ವ್ಯಕ್ತಿತದಿಂದ ಎಲ್ಲರಿಗಿಂತ ಭಿನ್ನವಾದರು. ಅವರ ನಂತರ ಅವರ ಮಕ್ಕಳು ಕೂಡ ತಂದೆಯ ದಾರಿಯಲ್ಲೇ ನಡೆಯುತ್ತಿದ್ದಾರೆ. ಅಪ್ಪಾಜಿಯಂತೆ ಮಕ್ಕಳು ಕೂಡಾ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಡಾ.ರಾಜ್ ಅವರ ದ್ವಿತೀಯ ಪುತ್ರ ರಾಘೇಂದ್ರ ರಾಜ್ ಕುಮಾರ್ ತಂದೆಯಂತೆಯೇ ನಟನೆಯಲ್ಲಿ, ಹಾಡುಗಾರಿಕೆಯಲ್ಲಿ ಪ್ರತೀಭಾವಂತರು, ಕನ್ನಡದ ಕೆಲವು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಆದರೆ ಆನಂತರ ಮಾರಕ ಕ್ಯಾನ್ಸರ್ ಕಾ’ಯಿಲೆ ಅವರನ್ನು ಚಿತ್ರ ರಂಗದಿಂದ ದೂರಾಗುವಂತೆ ಮಾಡಿತು.

Advertisements

ಕ್ಯಾನ್ಸರ್ ಕಾಯಿಲೆ ಸಂಪೂರ್ಣ ಗುಣವಾದರೂ ಅವರು ಚಿತ್ರ ರಂಗದಿಂದ ದೂರವೇ ಉಳಿದಿದ್ದರು. ತಮ್ಮ ಕುಟುಂಬದ ಸದಸ್ಯರಿಗೆ ಪ್ರೋತ್ಸಾಹ ಕೊಡುತ್ತಿದ್ದರು ಅಷ್ಟೇ. ಆದರೆ ಇತ್ತೀಚೆಗೆ ಕೆಲ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದರು. ಈ ಮಧ್ಯೆ ಅವರ ಆರೋಗ್ಯದಲ್ಲಿ ಪುನಃ ಸಮಸ್ಯೆ ಕಾಣಿಸಿಕೊಂಡಿತು. ಅವರ ಎಡ ಭಾಗ, ಎಡಗೈ ಮತ್ತು ಎಡಗಾಲು ಸ್ವಾಧೀನವನ್ನು ಕಳೆದುಕೊಂಡಿತ್ತು. ಅವರು ಕೈ ಮತ್ತು ಕಾಲನ್ನು ಎಳೆಯುತ್ತಾ ನಡೆಯುವ ದುಸ್ಥಿತಿ ಎದುರಾಯಿತು. ಇಂತಹ ಸ್ಥಿತಿಯಲ್ಲಿ ಹೀಗೆ ಎಲ್ಲಾ ದೇವಾಲಯಗಳಿಗೆ ಹೋಗುವಂತೆ ಮಂಡ್ಯದ ಸಾಯಿಬಾಬ ದೇವಾಲಯಕ್ಕೆ ತಮ್ಮ ಕುಟುಂಬದವರೊಂದಿಗೆ ಹೋಗಿದ್ದರು.

ಪೂಜೆಯ ಸಮಯ ಎಲ್ಲರೂ ಕೈ ಎತ್ತಿ ಸಾಯಿಬಾಬಾನಿಗೆ ನಮಸ್ಕರಿಸುವ ವೇಳೆ ರಾಘವೇಂದ್ರ ರಾಜ್ ಕುಮಾರ್ ತಮಗೇ ಗೊತ್ತಿಲ್ಲದೆ ಭಕ್ತಿ ಪರವಶರಾಗಿ ಎರಡು ಕೈ ಮೇಲಕ್ಕೆ ಎತ್ತಿ ನಮಸ್ಕರಿಸಿದರು. ಆಗ ಅವರ ಮನೆಯವರಿಗೆಲ್ಲ ಆಶ್ಚರ್ಯವಾಯಿತು. ನಂತರ ತಮ್ಮ ಈ ಕಾಯಿಲೆ ಸಂಪೂರ್ಣ ಗುಣವಾಗಲೆಂದು ಬಾಬಾ ನಲ್ಲಿ ಹರಕೆ ಹೊತ್ತರು. ಆರು ತಿಂಗಳಿನ ಒಳಗಾಗಿ ಸ್ವಾಧೀನ ತಪಿದ್ದ ಅವರ ಕೈ ಕಾಲುಗಳು ಸರಿಯಾದವು. ತಮ್ಮ ಕೋರಿಕೆ ನೆರವೇರಿದಾಗ ಹರಕೆಯ ರೂಪದಲ್ಲಿ ಬೆಳ್ಳಿಯ ಸಿಂಹಾಸನವನ್ನು ಸಾಯಿ ಬಾಬಾನಿಗೆ ಸಲ್ಲಿಸಿದರು.

ಮಂಡ್ಯದಲ್ಲಿ ಇರುವ ಈ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದನ್ನು ಕರ್ನಾಟಕದ ಶಿರಡಿ ಎಂದೇ ಕರೆಯಲಾಗುತ್ತದೆ. ಇಲ್ಲಿ ಸಾಯಿ ಬಾಬಾನ ಮಹಿಮೆ ಅಪಾರ. ಜನರು ತುಂಬಾ ಭಕ್ತಿಯಿಂದ ಇಲ್ಲಿಗೆ ಬರುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ತಾವು ಕಷ್ಟದಿಂದ ಪಾರಾದಾಗ ದೇವರಿಗೆ ಭಕ್ತಿಯಿಂದ ತಮಗೆ ಕೈಲಾದದನ್ನು ಸಲ್ಲಿಸುತ್ತಾರೆ. ಸಾಯಿಬಾಬಾ ಯಾರ ನಂಬಿಕೆಯನ್ನೂ ಸುಳ್ಳು ಮಾಡಿಲ್ಲ. ನಂಬಿ ಬಂದವರಿಗೆ ನಿರಾಶೆ ಮಾಡುವುದಿಲ್ಲ ಎನ್ನುತ್ತಾರೆ ಭಕ್ತರು. ಸೆಲೆಬ್ರಿಟಿಗಳು, ಗಣ್ಯರಿಂದ ಹಿಡಿದು ಜನ ಸಾಮಾನ್ಯರವರೆಗೆ ಇಲ್ಲಿಯ ಸಾಯಿಬಾಬ ಮೇಲೆ ಅಪಾರ ಭಕ್ತಿ ನಂಬಿಕೆ ಇಟ್ಟುಕೊಂಡಿದ್ದಾರೆ.