Advertisements

ಪ್ರೀತಿ ಮಾಡಿ ಮದುವೆ ಆದವರು ಅಥವಾ ಓಡಿ ಹೋಗಿ ಮದುವೆಯಾದವರನ್ನು ನೋಡಿದ್ದೇವೆ! ಆದರೆ ಇವರಿಬ್ಬರು ಮಾಡಿದ್ದೇನು ನೋಡಿ.. ವಿಚಿತ್ರ ಘಟನೆ..

News

ಪ್ರೀತಿ ಕುರುಡು ಅಂತಾರೆ ನಿಜ ಆದರೆ ಇಷ್ಟರ ಮಟ್ಟಿಗೆ ಕುರುಡಾಗಿರುತ್ತದೆ ಎಂಬುವುದಕ್ಕೆ ಈ ಕಥೆಯೆ ಸಾಕ್ಷಿ‌.. ಪ್ರೀತಿ ಮಾಡಿ ಮದುವೆಯಾಗುವವರನ್ನು, ಓಡಿ ಹೋಗಿ ಮದುವೆಯಾಗುವವರನ್ನು ನೋಡಿದ್ದೇವೆ ಆದರೆ ಈ ಕಥೆಯಲ್ಲಿ ಆಗಿದ್ದೆ ಬೇರೆ.. ಅದೇನು ಈ ಪ್ರೇಮ ಕಥೆ ಕೇಳಿದರೆ ನಿಜಕ್ಕೂ ವಿಚಿತ್ರ ಎನಿಸುತ್ತದೆ. ಹೇಗೆ ಈ ರೀತಿ ಘ’ಟ’ನೆಗಳು ನಡೆಯುತ್ತವೆ ಎಂದು ಆಶ್ಚರ್ಯವು ಉಂಟಾಗುತ್ತದೆ.. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬ್ಯಾಲಿಕೇರಿ ಗ್ರಾಮದ‌ ನಿವಾಸಿ 35 ವರ್ಷದ ಶ್ರೀನಿವಾಸ ಎಂಬಾತ ದಾಸೇಗೌಡನ ಪಾಳ್ಯದಲ್ಲಿ ಟ್ರ್ಯಾಕ್ಟರ್ ಚಲಾಯಿಸುವ ಕೆಲಸ ಮಾಡುತಿದ್ದ. ಇನ್ನು ಇತನಿಗೆ ಅದಾಗಲೇ ಮದುವೆಯಾಗಿದ್ದು‌. ಅದಾಗಲೇ ಒಂದು ಮಗುವಿದ್ದು, ಹೆಂಡತಿ ಗ’ರ್ಭಿ’ಣಿಯಾಗಿದ್ದಳು. ಒಟ್ಟಿನಲ್ಲಿ ಇವರದ್ದು ಚಂದದ ಸಂಸಾರವಾಗಿತ್ತು. ಅದ್ಯಾರ ಕಣ್ಣು ಬಿತ್ತೊ ಗೊತ್ತಿಲ್ಲ. ದಾಸೇಗೌಡ ಗ್ರಾಮದ ನಿವಾಸಿ 32 ವಯಸ್ಸಿನ ಪುಷ್ಪಲತಾ ಎಂಬಾಕೆಗೆ 6 ವರ್ಷದ ಹಿಂದೆ ಬ್ಯಾಲಕೇರಿ ಗ್ರಾಮದ ಗೆಂಡಯ್ಯ ಎಂಬುವವರ ಜೊತೆ ಮದುವೆಯಾಗಿತ್ತು‌.

[widget id=”custom_html-3″]

Advertisements

ಪುಷ್ಪಲತಾ ಗಂಡನೊಡೆನೆ ಮನಸ್ತಾಪ ಮಾಡಿಕೊಂಡು ದಾಸೇಗೌಡನ ಪಾಳ್ಯ ಗ್ರಾಮದ ತನ್ನ ತವರು ಮನೆಯಲ್ಲಿ ಬಂದು ನೆಲೆಸಿದಳು. ಇದೇ ಊರಿಗೆ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತಿದ್ದ ಶ್ರೀನಿವಾಸ ಹಾಗೂ ಗಂಡನನ್ನು ಬಿಟ್ಟು ಬಂದ ಪುಷ್ಪಲತಾ ಪ್ರೀತಿಯಲ್ಲಿ ಬಿದ್ದು ತಮ್ಮಗೆ ಸಂಸಾರ ಇದೆ ಎಂಬ ಸತ್ಯವನ್ನು ಮರೆತುಬಿಟ್ಟಿದ್ದರು. ಇವರಿಬ್ಬರು ಮದುವೆಗೂ ಮುನ್ನವೇ ಪ್ರೀತಿಸುತಿದ್ದರೂ ಎಂಬ ಮಾತು ಕೇಳಿಬರುತ್ತಿದ್ದವು. ತವರು ಮನೆಯಲ್ಲಿ ಬಂದು ನೆಲೆಸಿದ ಪುಷ್ಪಲತಾ ಹಾಗೂ ಇತ್ತ ಶ್ರೀನಿವಾಸ ಹೆಂಡತಿ ತವರು ಮನೆಗೆ ಹೋದ ಸಮಯ ಇವರಿಬ್ಬರು ಪರಸ್ಪರ ಭೇಟಿ, ಮಾತನಾಡುವುದು ಎಕಾಂತದಲ್ಲಿ ಸಮಯ‌ ಕಳೆಯುವುದು ನಡೆದಿತ್ತು.

[widget id=”custom_html-3″]

ಎಷ್ಟು ದಿನ‌ ಸತ್ಯ ಸುಳ್ಳಾಗಿರಲೂ ಸಾಧ್ಯ ಎಲ್ಲದಕ್ಕೂ ಒಂದಲ್ಲ ಒಂದು ದಿನ ಅಂತ್ಯ ಹಾಡಲೇಬೇಕು ಇವರಿಬ್ಬರ ಜೀವನದಲ್ಲಿ ಆಗಿದ್ದು ಅದೆ. ಪ್ರೀತಿಯಲ್ಲಿ ಕುರುಡಾಗಿದ್ದ ಇವರಿಬ್ಬರು ಅವರವರ ಸಂಗಾತಿಗಳನ್ನು ತೊರೆದು ಮದುವೆಯಾಗಲು ನಿಶ್ಚಯಿಸಿದರು. ಇಬ್ಬರು ದಾಸನಪಾಳ್ಯ ಗ್ರಾಮದ ಹೊರಾಂಗಣದಲ್ಲಿರುವ ಜಮೀನೊಂದರಲ್ಲಿ ಭೇಟಿಯಾಗಿದ್ದಾರೆ. ಬಹು ಸಮಯದ ನಂತರ ಮಾತುಕತೆ ಮಾಡಿದ್ದೆ ತಡ ಇಬ್ಬರು ಅಲ್ಲಿರುವ ಮರವೊಂದಕ್ಕೆ ನೇ’ಣು ಬೀಗಿದುಕೊಂಡು ಸಾ’ವಿ’ಗೆ ಶರಣಾಗಿದ್ದಾರೆ. ಇತ್ತ ಗರ್ಭಿಣಿಯಾದ ಶ್ರೀನಿವಾಸ್ ಪತ್ನಿ ಗಂಡನ ಕಳೆದುಕೊಂಡು ರೋಧಿಸುವುದು ಒಂದು ಕಡೆಯಾದರೆ ಚಂದದ ಸಂಸಾರ ಬಿಟ್ಟು ಇವರಿಬ್ಬರು ಹೀಗೆ ಮಾಡಿದ್ದು ನಿಜಕ್ಕೂ ವಿಷಾಧನೀಯ..