ನಮಸ್ತೆ ಸ್ನೇಹಿತರೆ, ಒಂದು ರಾಜ್ಯದ ಮುಖ್ಯಮಂತ್ರಿ ಆಗುವುದು ಎಂದರೆ ಅಷ್ಟು ಸುಲಭದ ಮಾತಲ್ಲ.. ಹತ್ತಾರು ವರ್ಷ ಕಾಯಬೇಕು. ಆದರೆ ಬಿ.ಎಸ್ಸಿ ಓದುತ್ತಿರುವ ಈ ಹುಡುಗಿ ಈಗ ಭಾರತದ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.. ಹಳ್ಳಿಯಲ್ಲಿ ಹುಟ್ಟಿದ ಈ ಹುಡುಗಿಗೆ ಯಾಕೆ ಮುಖ್ಯಮಂತ್ರಿ ಪಟ್ಟ ಕೊಡಲಾಗುತ್ತಿದೆ ಇದರ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿಯೋಣ ಬನ್ನಿ. ಉತ್ತರಾಖಂಡ ರಾಜ್ಯದ ಹರಿದ್ವಾರ ಎಂಬ ಜಿಲ್ಲೆಯ ದೌಲತ್ ಪುರ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಈ ಹುಡುಗಿಯ ಹೆಸರು ಸೃಷ್ಟಿ ಗೋಸ್ವಾಮಿ..

ಈಗ ಬಿ.ಎಸ್.ಸಿ ಅಗ್ರಿಕಲ್ಚರ್ ಓದುತ್ತಿರುವ ಈ ಹುಡುಗಿ ಹಲವು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ಬಗೆಗಿನ ಕಾರ್ಯಕ್ರಮಗಳು ಭಾಗವಹಿಸಿದ್ದರು. 2018 ರಲ್ಲಿ ಉತ್ತರಖಾಂಡದ ಬಾಲ ವಿಧಾನಸಬೆಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿದ ಸೃಷ್ಟಿ ಈಗ ಬಾಲ ವಿಧಾನಸಬೆಯ ಮುಖ್ಯಮಂತ್ರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.. ಜನವರಿ 24 ರಂದು ರಾಷ್ಟ್ರೀಯ ಬಾಲಕೀಯರ ದಿನಾಚರಣೆಯ ಪ್ರಯುಕ್ತ ಒಂದು ದಿನದ ಮಟ್ಟಿಗೆ ಉತ್ತರಖಾಂಡದ ಮುಖ್ಯಮಂತ್ರಿಯಾಗಿ ಸೃಷ್ಟಿ ಅಧಿಕಾರ ಸ್ವೀಕರಿಸಲಿದ್ದಾರೆ.

ಅಂದರೆ ಒಂಡೇ ಸಿ.ಎಮ್.. ಇನ್ನೂ ಇಷ್ಟೇ ಮಾತ್ರಕ್ಕೆ ಎಂದು ಭಾವಿಸಬೇಡಿ.. ಆ ದಿನ ರಾಜ್ಯದ ಬಗೆಗಿನ ಎಲ್ಲಾ ಯೋಜನೆಗಳನ್ನ ಪರಿಶೀಲಿಸಲಿರುವ ಸೃಷ್ಟಿ ತಮ್ಮ ಅಧಿಕಾರವನ್ನ ಚಲಾಯಿಸಿ. ಯಾವುದೇ ನಿರ್ದಾರ ತೆಗೆದುಕೊಳ್ಳುವ ಶಕ್ತಿ ಹೊಂದಿರುತ್ತಾರೆ.. ಸೃಷ್ಟಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಜನವರಿ 24 ರಂದು ಎಲ್ಲಾ ಉನ್ನತ ಅಧಿಕಾರಿಗಳು ಹಾಜರಿರಬೇಕು. ಹಾಗೆ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ.

ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ತುಂಬುವ ರಾಜ್ಯದ ರಾಜಕೀಯದಲ್ಲಿ ಯುವಜನತೆ, ವಿದ್ಯಾವಂತರು ತೊಡಗಿಸಿಕೊಳ್ಳುವಂತೆ ಮಾಡುತ್ತಿರುವ ಈ ವಿಧಾನ ಮುಂದೆ ಉತ್ತಮ ರಾಜ್ಯ ಕಟ್ಟಲು ಪಾರದರ್ಶಕತೆಯ ಆಡಳಿತ ನಿರ್ಮಿಸಲು ಸಹಕಾರಿಯಾಗಿದೆ ಎಂದು ಭಾವಿಸಿದರೆ ಇದರ ಬಗ್ಗೆ ಒಂದು ಅನಿಸಿಕೆ ಹಾಗೂ ಸೃಷ್ಟಿಯವರಿಗೆ ಶುಭಾಶಯಗಳನ್ನು ತಿಳಿಸಿ.