Advertisements

SSLC ಯಲ್ಲಿ ರಾಜ್ಯಕ್ಕೆ ನಂಬರ್ ಒನ್ ಟಾಪರ್ ಬಂದ ಲಾರಿ ಡ್ರೈವರ್ ಮಗಳು.

News

ಪ್ರತಿಯೊಬ್ಬರ ಜೀವನದಲ್ಲೂ ಅವರ ಯಶಸ್ಸಿಗೆ ಕಾರಣ ಚಲ, ಹೌದು ಚಲ ಒಂದಿದ್ದರೆ ಬಡತನವನ್ನು ಸಹ ಮೆಟ್ಟಿ ನಿಲ್ಲಬಹುದು‌‌‌. ಎಂದು ತೋರಿಸಿಕೊಟ್ಟ ಲಾರಿ ಡ್ರೈವರ್ ಮಗಳ ಕಥೆ ಇದು‌.

Advertisements

ಹೌದು ಒಬ್ಬ ಸಾಮಾನ್ಯ ಲಾರಿ ಡ್ರೈವರ್ ಇವರು ಮೂಲತಃ ಪಂಜಾಬ್ ರಾಜ್ಯದವರು. ಈವರ ಮಗಳು ಎಸ್ ಎಸ್ ಎಲ್ಸಿ ಯಲ್ಲಿ ತೆಗೆದಿರುವ ಅಂಕಗಳನ್ನು ನೋಡಿದರೆ, ಎಲ್ಲಾ ಮಕ್ಕಳಿಗೂ ಇವರು ಸ್ಪೂರ್ತಿ. ಹೌದು ನೇಹಾ ವರ್ಮ ಅವರು 99.54 ರಿಸಲ್ಟ್ ಪಡೆದು ರಾಜ್ಯಕ್ಕೆ ಟಾಪರ್ ಹಾಗಿದ್ದಾರೆ‌. ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಇದ್ಯಾವುದಕ್ಕೂ ಲೆಕ್ಕಿಸದೆ ಹಗಲು ರಾತ್ರಿ ವಿದ್ಯಾಭ್ಯಾಸ ಮಾಡಿ ಈ ದಿನ ತನ್ನ ಸಾಧನೆಯ ಮೂಲಕ ಇತರ ಮಕ್ಕಳಿಗೂ ಮಾದರಿಯಾಗಿದ್ದಾರೆ‌.

ನಮ್ಮ ತಂದೆ ಒಬ್ಬ ಲಾರಿ ಡ್ರೈವರ್, ಇವರ ಸಂಪಾದನೆ ತುಂಬಾ ಕಡಿಮೆ. ಹೀಗಾಗಿ ನಮ್ಮ ಮನೆಯಲ್ಲಿ ಸಾಕಷ್ಟು ಬಡತನ. ಆದರೂ ನಮ್ಮ ತಂದೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ನನಗೆ ಓದಲು ಪ್ರೋತ್ಸಾಹ ನೀಡುತ್ತಾರೆ. ನನ್ನ ಅಪ್ಪ ಅಮ್ಮನ ಪ್ರೊತ್ಸಾಹ ನನ್ನ ಗುರಿ ತಲುಪಲು ಸಾಧ್ಯವಾಗಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ದೊಡ್ಡೋರು ಹೇಳಿದಾರೆ ಅಲ್ವಾ ಮನಸ್ಸು ಒಂದಿದ್ದರೆ ಮಾರ್ಗ ಎಂದು, ಕೆಲಸದಲ್ಲಿ ಶ್ರದ್ದೆ, ಗಮನ ಸಾಧನೆಯ ಗುರಿಯ ಕಡೆಗೆ ಇದ್ದರೆ ಎಷ್ಟು ಪೆಟ್ಟು ತಿಂದರೂ ಎದ್ದೇಳಿ ತಮ್ಮ ಗುರಿಯನ್ನು ಮಟ್ಟಬಹುದು. ಇವರ ಕುಟುಂಬ ಬಡತನದಲ್ಲಿ ಬೇಯುತಿದ್ದರೂ ನಮ್ಮ ದೇಶಕ್ಕೆ ಮಾದರಿಯಾಗುವ ರೀತಿ ಸಾಧನೆ ಮಾಡಿರುವ ನೇಹಾ ವರ್ಮ ಅವರು ನಿಜಕ್ಕೂ ಗ್ರೇಟ್‌.

ಗಿರೀಶ್ ಭಾರದ್ವಾಜ್ ಎನ್ನುವವರು ನೇಹಾ ವರ್ಮ ಬಗ್ಗೆ ಟ್ವೀಟ್ ಮೂಲಕ ಇವರ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಈ ವಿದ್ಯಾರ್ಥಿನಿಯನ್ನು ಸಾಕಷ್ಟು ಜನ ಟ್ಟಿಟ್ ಮೂಲಕ ಹೊಗಳಿದ್ದಾರೆ. ಇನ್ನೂ ಕೆಲವರು ನೇಹಾ ವರ್ಮ ಅವರಿಗೆ ಸಹಾಯ ಮಾಡತ್ತೇವೆ ಎಂದು ಕಮೆಂಟ್ ನಲ್ಲಿ ತಿಳಿಸಿದ್ದಾರೆ. ನೇಹಾ ವರ್ಮ ಅವರು ಇನ್ನಷ್ಟೂ ಮುಂದುವರೆಯಲಿ, ಇನ್ನಷ್ಟೂ ಸಾಧನೆಗಳನ್ನು ಮಾಡಲಿ, ನಮ್ಮ ದೇಶಕ್ಕೆ ಕೀರ್ತಿ ತರಲಿ ಎಂದು ಆಶಿಸೋಣ.