Advertisements

ಕರ್ನಾಟಕದಲ್ಲೇ ಇದೆ ಈ ಅದ್ಭುತ ಮನೋಹರವಾದ ದ್ವೀಪ !

Kannada Mahiti

ಸುತ್ತಲೂ ಜಲ ರಾಶಿ. ನೋಡುತ್ತಾ ನಿಂತರೆ ನೋಡುತ್ತಲೇ ಇರಬೇಕನ್ನುವ ಮೋಹಕ ದೃಶ್ಯ. ಇದು ಉಡುಪಿ ಜಿಲ್ಲೆಯಲ್ಲಿರುವ ಕೋಕೊನಟ್ ದ್ವೀಪ . ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ತುಂಬಾ ಫೇಮಸ್ ಆಗಿದೆ. ಇದು ಕರ್ನಾಟಕದ ನಾಲ್ಕು ಭೂ ವೈಜ್ನ್ಯಾನಿಕ ಸ್ಮಾರಕಗಳಲ್ಲಿ ಒಂದಾಗಿದೆ. ವಾಸ್ಕೊಡಿಗಾಮ ಯುರೋಪ್ ನಿಂದ ಭಾರತಕ್ಕೆ ಪ್ರಯಾಣಿಸುವಾಗ ಇಲ್ಲಿಗೆ ಭೇಟಿಕೊಟ್ಟು ಯೇಸುವಿನ ತಾಯಿಯ ಹೆಸರನ್ನ ಈ ದ್ವೀಪಕ್ಕೆ ಇಟ್ಟಿದಾನೆ ಎಂಬ ಉಲ್ಲೇಖವಿದೆ. ಈ ದ್ವೀಪವು ನಾಲ್ಕು ದ್ವೀಪಗಳ ಸಮೂಹದಿಂದ ಉಂಟಾಗಿದೆ.

Advertisements

ಇನ್ನು ಈ ದ್ವೀಪವನ್ನ ಸೈಂಟ್ ಮೇರೀಸ್ ಐಲ್ಯಾಂಡ್ ಅಂತಲೂ ಕರೆಯಲಾಗುತ್ತೆ. ಇವುಗಳನ್ನ ನಾರಿಕೇಳ ದ್ವೀಪ, ಉತ್ತರ ದ್ವೀಪದರ್ಯ, ಬಹದ್ದೂರ ದ್ವೀಪ, ಮತ್ತು ದಕ್ಷಿಣ ದೀಪ ಎಂದು ಕರೆಯಲಾಗುತ್ತದೆ. ಇಲ್ಲಿಗೆ ಉಡುಪಿಯ ಕಾಪುವಿನಿಂದ ಬೋಟುಗಳ ಮೂಲಕ ಪ್ರಯಾಣಿಸಬಹುದಾಗಿದೆ. ಈ ದ್ವೀಪದಲ್ಲಿ ತಂಗಲು ಯಾವುದೇ ವಸತಿ ಸೌಕರ್ಯಗಳು ಇಲ್ಲ. ಒಂದು ದಿನದ ಪ್ರವಾಸಕ್ಕಾಗಿ ಹೇಳಿ ಮಾಡಿಸಿದ ಸ್ಥಳವಾಗಿದೆ. ನೈಸರ್ಗಿಕ ನಿರ್ಮಿತ ಪ್ರದೇಶವಾಗಿರುವ ಇದು ನೋಡಲು ಬಹಳ ಸುಂದರವಾಗಿದೆ.