Advertisements

ಮೊದಲು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂತರ ಬೇರೆ ಬಾಷೆಗಳಲ್ಲಿ ಸ್ಟಾರ್ ಗಿರಿ ಪಟ್ಟ ಪಡೆದ ನಟಿಯರು.. ಯಾರ್ಯಾರು ಗೊತ್ತಾ?

Cinema

ಕನ್ನಡ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ದೊಡ್ಡ ಸ್ಟಾರ್ ಪಟ್ಟ ಪಡೆದಿರುವ ನಟಿಯರು ಯಾರು ಗೊತ್ತಾ? ಈಗ ತೆಲುಗು, ತಮಿಳು, ಹಿಂದಿ ಚಿತ್ರದಲ್ಲಿ ಬ್ಯುಸಿಯಾಗಿರುವ ರಾಹುಲ್ ಪ್ರೀತ್ ಸಿಂಗ್ ಮೊದಲು ಕನ್ನಡದಲ್ಲಿ ಹಿರಿಯ ನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಜೊತೆಗೆ ಗಿಲ್ಲಿ ಚಿತ್ರದಲ್ಲಿ ನಟಿಸಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಈಗ ಸೌಥ್ ಇಂಡಿಯಾದಲ್ಲಿ ಸಾಕಷ್ಟು ಪ್ರಶಸ್ತಿ ಪಡೆದು ಬಹಳ ಜನಪ್ರಿಯ ನಟಿಯಾಗಿದ್ದಾರೆ.. ನಿತ್ಯಾ ಮೆನನ್ ಹುಟ್ಟಿದ್ದು ಬೆಂಗಳೂರಾದ್ರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಮಲಯಾಳಂ ತೆಲುಗು ತಮಿಳು ಚಿತ್ರರಂಗದಲ್ಲಿ.. ಇವರು ಕನ್ನಡದಲ್ಲಿ ಸೆವೆನ್ ಪ್ ಕ್ಲಾಕ್ ಚಿತ್ರದ ಮೂಲಕ ಕಲಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಆಗೋಮ್ಮೆ ಈಗೊಮ್ಮೆ ಕನ್ನಡ ಚಿತ್ರಗಳಲ್ಲೂ ಅಭಿನಯಿಸ್ತಿರ್ತಾರೆ..

[widget id=”custom_html-3″]

Advertisements

ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿದ ಪ್ರತಿಭಾನ್ವಿತ ನಟಿ ಸೌಂದರ್ಯ ನನ್ನ ತಂಗಿ ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು ಬಾರಿ ಹೆಸರು ಮಾಡಿದ್ರು. ಚಾಯಾ ಸಿಂಗ್.. ಮುನ್ನುಡಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ತಮಿಳು ಮಲಯಾಳಂ, ಬೆಂಗಾಳಿ, ಬೋಜ್ ಪುರಿ ಈಗೆ ಎಲ್ಲಾ ಕ್ಷೇತ್ರಳಲ್ಲಿಯೂ ಕೂಡ ಇವರು ನಟಿಸಿ ಯಶಸ್ವಿ ನಟಿಯಾಗಿದ್ದಾರೆ.. ತಮಿಳುನಾಡಿನ ರಾಜಕೀಯ ರಂಗದಲ್ಲಿ ಯಶಸ್ವಿ ನಾಯಕಿಯಾಗಿ ತಮಿಳಿಗರ ಪಾಲಿಗೆ ಅಮ್ಮನಾಗಿ ಜೈಲಲಿತಾ ಅವರು ರಾಜಕೀಯಕ್ಕೂ ಬರುವ ಮುನ್ನ ಚಿತ್ರರಂಗದಲ್ಲಿ ಸಕ್ರಿಯರಾಗಿದ್ರು. ಕನ್ನಡದಲ್ಲಿ ಚಿನ್ನದ ಗೊಂಬೆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ರು..

[widget id=”custom_html-3″]

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ ಪಡುಕೋಣೆ ಇವರು ಸಹ ಉಪೇಂದ್ರ ನಟನೆಯ ಐಶ್ವರ್ಯ ಸಿನಿಮಾ ಮೂಲಕ ಎಂಟ್ರಿಕೊಟ್ಟು ಹಿಂದಿ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ಬಹಳ ಹೇಸರು ಮಾಡಿದ್ದಾರೆ.. 1960 ದಶಕದಲ್ಲಿ ಆಪ್ರೇಷನ್ ಜಾಬ್ ಸ್ಪಾಟ್ ನಲ್ಲಿ ಸಿಐಡಿ, ತ್ರಿಬ್ಬಲ್ ನೈನ್ ಅಲ್ಲಿ ಅಭಿನಯಿಸಿರುವ ನಟಿ ರೇಖಾ ನಂತರ ಹೆಚ್ಚಾಗಿ ಗುರುತಿಸಿಕೊಂಡಿದ್ದು ತೆಲುಗು ಹಾಗು ಹಿಂದಿ ಚಿತ್ರರಂಗದಲ್ಲಿ.. ಒಟ್ಟಿನಲ್ಲಿ ನಮ್ಮ ಕನ್ನಡ ಚಿತ್ರರಂಗ ದೊಡ್ಡ ಆಲದಮರದಂತೆ. ಎಲ್ಲರಿಗೂ ನೆರಳನ್ನು ಕೊಡುತ್ತಾ ಹೆಮ್ಮರವಾಗಿ ಬೆಳೆಯುತ್ತಿದೆ.. ಇನ್ನೂ ಇವರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು..