ಧರ್ಮಕ್ಕಾಗಿ ನಡೆದ ಯುದ್ಧವೇ ಮಹಾಭಾರತ. ನಾರಾಯಣನ ಅವತಾರಿಯಾದ ಶ್ರೀಕೃಷ್ಣನು ಯುದ್ಧದಲ್ಲಿ ಧರ್ಮಾತ್ಮರಾದ ಪಾಂಡವರ ಕಡೆ ನಿಲ್ಲುತ್ತಾನೆ. ಮಹಾಕಾವ್ಯ ಮಹಾಭಾರತದಲ್ಲಿ ಅನೇಕರಿಗೆ ತಿಳಿದಿರದ ಹಲವಾರು ಕತೆಗಳಿವೆ. ಇನ್ನೇನು ಮಹಾಭಾರತ ಯುದ್ಧ ಶುರುವಾಗಬೇಕು ಎನ್ನುವಷ್ಟರಲ್ಲಿ ಕೃಷ್ಣನು ಮಹಾನ್ ಯೋಧರಲ್ಲಿ ಕೆಲವೊಂದು ಪ್ರಶ್ನೆಗಳನ್ನ ಕೇಳುತ್ತಾನೆ..

ಅದರಲ್ಲಿ ಮಹಾಭಾರತ ಯುದ್ಧ ಎಷ್ಟು ಸಮಯದಲ್ಲಿ ಮುಗಿಯುತ್ತೆ ಎಂದು. ಆಗ ಭೀಷ್ಮ ಪಿತಾಮಹ ಹೇಳುತ್ತಾನೆ ಈ ಯುದ್ಧ ಮುಗಿಯಲು 20 ದಿನ ಸಾಕು ಎಂದು. ಕೌರವ ಪಾಂಡವರ ಗುರುಗಳಾದ ದ್ರೋಣಾಚಾರ್ಯರು ಹೇಳುತ್ತಾರೆ 25 ದಿನ ಎಂದು. ದಾನವೀರ ಶೂರ ಕರ್ಣ ಹೇಳುತ್ತಾನೆ 24 ದಿನಗಳಲ್ಲಿ ಮುಗಿಯುತ್ತೆ ಎಂದು. ಇನ್ನು ಮಧ್ಯಮ ಪಾಂಡವ ಅರ್ಜುನ ಹೇಳುತ್ತಾನೆ 28 ದಿನಗಳಲ್ಲಿ ಈ ಯುದ್ಧ ಮುಗಿಯುತ್ತೆ ಎಂದು. ಆದರೆ ಮಹಾಯೋಧ ಬಾರ್ಬರಿಕ ಹೇಳುತ್ತಾನೆ ನಾನು ಈ ಯುದ್ಧವನ್ನ ಕೇವಲ ಒಂದೇ ನಿಮಿಷದಲ್ಲಿ ಮುಗಿಸುತ್ತೇನೆ ಎಂದು. ಬಾರ್ಬರಿಕನ ಮಾತನ್ನ ಕೇಳಿ ಕೃಷ್ಣ ಸೇರಿದಂತೆ ಎಲ್ಲರಿಗೂ ಅಚ್ಚರಿಯುಂಟು ಮಾಡುತ್ತದೆ.
ಹಾಗಾದ್ರೆ ಈ ಬಾರ್ಬರಿಕ ಯಾರು ಗೊತ್ತಾ ? ಭೀಮ ಮತ್ತು ಹಿಡಂಬಿಯ ಮಗನಾಗಿರುವ ಘಟೋತ್ಕಚನ ಪುತ್ರ. ಅಂದರೆ ಭೀಮನ ಮೊಮ್ಮಗ. ಘಟೋತ್ಕಚ ಮತ್ತು ಮೌರವಿಯ ಮಗ. ಇನ್ನು ಮಹಾದೇವನ ಪರಮ ಭಕ್ತನಾಗಿದ್ದ ಬಾರ್ಬರಿಕ ಶಿವನ ಕುರಿತು ತಪಸ್ಸು ಮಾಡಿ ವಿಶೇಷವಾದ ವರವೊಂದನ್ನ ಪಡೆಯುತ್ತಾನೆ. ಜೊತೆಗೆ ಅಷ್ಟದೇವತೆಗಳಿಂದ ವಿಶೇಷವಾದ ವರಪಡೆಯುವ ಬಾರ್ಬರಿಕ ವಿಶೇಷ ಶಕ್ತಿಯಿರುವ ಮೂರು ಬಾಣಗಳನ್ನ ಪಡೆಯುತ್ತಾನೆ. ಇನ್ನು ಒಂದು ಬಾಣವು ಯಾವ ವಸ್ತುವನ್ನ ಗುರಿ ಮಾಡಿ ಬಿಡುತ್ತಾನೋ ಅವುಗಳನ್ನ ಗುರುತಿಸುವ ಶಕ್ತಿ ಹೊಂದಿತ್ತು. ಇನ್ನು ಎರಡನೆಯ ಬಾಣವು ಬಾರ್ಬರಿಕನು ಯಾವ ವಸ್ತುಗಳನ್ನ ಉಳಿಸಲು ಇಷ್ಟ ಪಡುತ್ತಾನೋ ಅವುಗಳನಂ ಗುರುತಿಸುವ ಶಕ್ತಿ ಆ ಎರಡನೆಯಬಾಣಕಿತ್ತು. ಇನ್ನು ಬಾರ್ಬರಿಕನ ಮೂರನೆಯ ಬಾಣವು ಬೇಡ ಎಂದು ಗುರುತಿಸಿದ್ದ ಎಳ್ಳವುಗಲನ್ನ ನಾಶ ಮಾಡುವ ವಿಶೇಷ ಶಕ್ತಿ ಹೊಂದಿತ್ತು. ಇನ್ನು ಬಾರ್ಬರಿಕನು ವರದಿಂದ ದೊರೆತ ಈ ಮೂರು ಬಾಣಗಳನ್ನ ಒಮ್ಮೆಲೇ ಪ್ರಯೋಗ ಮಾಡಿದ್ದಾರೆ ಎಲ್ಲವೂ ನಾಶವಾಗೋಹೋಗುತಿತ್ತು. ಇದೆ ಕಾರಣದಿಂದಲೇ ಮಹಾಭಾರತ ಯುದ್ಧ ಮುಗಿಸಲು ನನಗೆ ಒಂದು ನಿಮಿಷ ಸಾಕು ಎಂದು ಬಾರ್ಬರಿಕ ಹೇಳಿದ್ದು.

ಇನ್ನು ಪಾಂಡವರು ಕೌರವರ ನಡುವೆ ಯುದ್ಧ ಶುರುವಾದಾಗ ಬಾರ್ಬರಿಕನು ಯುದ್ಧ ಸೇರಲು ಹೋಗುತ್ತಿರುತ್ತಾನೆ. ಬಾರ್ಬರಿಕನ ನಿಜವಾದ ಶಕ್ತಿಯನ್ನ ತಿಳಿಯಲೇಬೇಕು ಎಂದರಿತ ಕೃಷ್ಣ ಋಷಿಯ ವೇಷ ಧರಿಸಿ ಕಾಡಿನಲ್ಲಿ ಹೋಗುತ್ತಿದ್ದ ಬಾರ್ಬರಿಕನ ಎದುರಿಗೆ ಹೋಗುತ್ತಾನೆ. ಆಗ ಋಷಿಯ ವೇಷದಲ್ಲಿದ್ದ ಕೃಷ್ಣನು ಎಲ್ಲಾ ಎಲೆಗಳನ್ನ ಗುರುತಿಸುವುದರ ಮೂಲಕ ನಿನ್ನ ಶಕ್ತಿಯನ್ನ ನನಗೆ ತೋರಿಸು ಎಂದು ಬಾರ್ಬರಿಕನಿಗೆ ಹೇಳುತ್ತಾನೆ. ಇನ್ನು ಋಷಿಯ ಮಾತಿಗೆ ತಪ್ಪಾದ ಬಾರ್ಬರಿಕನು ಬಣ ಬಿಡಲು ಕಣ್ಣು ಮುಚ್ಚಿದಾಗ, ಕೃಷ್ಣನು ಒಂದು ಎಳೆಯನ್ನ ತನ್ನ ಪಾದದ ಕೆಳಗಡೆ ಹಾಕಿಕೊಳ್ಳುತ್ತಾನೆ. ಇನ್ನು ಬಾರ್ಬರಿಕ ಬಿಟ್ಟಬಾಣ ವನದಲ್ಲಿದ್ದ ಎಲ್ಲಾ ಎಲೆಗಳನ್ನ ಗುರುತಿಸಿ, ಋಷಿಯ ಪಾದದ ಸುತ್ತ ಸುತ್ತುತ್ತದೆ. ಆಗ ಬಾರ್ಬರಿಕನು ಯಾವುದೊ ಒಂದು ಎಲೆ ನಿಮ್ಮ ಪಾದದ ಕೆಳಗಡೆ ಇದೆ ಎಂದು ಹೇಳುತ್ತಾನೆ.
ಇನ್ನು ಬಾರ್ಬರಿಕನ ಶಕ್ತಿ ನೋಡಿ ಇವನು ಮಹಾಭಾರತದ ಯುದ್ಧವನ್ನ ಒಂದೇ ನಿಮಿಷದಲ್ಲಿ ಮುಗಿಸುವ ಸಾಮರ್ಥ್ಯ ಇದೆ ಎಂದು ತಿಳಿಯುತ್ತಾನೆ. ಬಳಿಕ ನೀನು ಯಾರ ಪರವಾಗಿ ಯುದ್ಧ ಮಾಡುವೆ ಎಂದು ಋಷಿ ವೇಷದಾರಿ ಕೃಷ್ಣನು ಕೇಳುತ್ತಾನೆ. ಆಗ ಬಾರ್ಬರಿಕಾ ನನ್ನ ತಾಯಿಗೆ ಯಾರು ದುರ್ಬಲರೋ ಅವರ ಕಡೆ ಯುದ್ಧ ಮಾಡುತ್ತೇನೆ ಎಂಬ ಮಾತು ಕೊಟ್ಟಿದ್ದೇನೆ. ಹಾಗಾಗಿ ಕೌರವರ ಹಾಗೂ ಪಾಂಡವರ ಸೈನ್ಯದ ಮಿತಿಯನ್ನ ಹೋಲಿಸಿದ್ರೆ ಪಾಂಡವರು ದುರ್ಬಲರಿದ್ದಾರೆ. ಹಾಗಾಗಿ ಅವರ ಕಡೆಯೇ ನಿಂತು ನಾನು ಯುದ್ಧ ಮಾಡುವೆ ಎಂದು ಬಾರ್ಬರಿಕ ಹೇಳುತ್ತಾನೆ. ಬಳಿಕ ಕೃಷ್ಣನು ಮತ್ತೊಂದು ಪ್ರಶ್ನೆಯನ್ನ ಕೇಳುತ್ತಾನೆ. ಒಂದು ವೇಳೆ ಪಾಂಡವರ ಶಕ್ತಿಯ ಕಾರಣದಿಂದ ಕೌರವರು ದುರ್ಬಲರಾದರೆ ಎಂದಾಗ, ಆಗ ನಾನು ಕೌರವರ ಪರವಾಗಿ ಯುದ್ಧ ಮಾಡುವೆ ಎಂದು ಬಾರ್ಬರಿಕ ಹೇಳುತ್ತಾನೆ. ಆಗ ಕೃಷ್ಣನಿಗೆ ಒಂದಂತೂ ಸ್ಪಷ್ಟವಾಗುತ್ತೆ. ಬಾರ್ಬರಿಕ ದುರ್ಬಲರಾದವರ ಕಡೆ ಯುದ್ಧ ಮಾಡುತ್ತಿದ್ದಾರೆ ಕೊನೆಯವರೆಗೂ ಏಕಾಂಗಿಯಾಗಿ ಯುದ್ಧ ಮಾಡುತ್ತಲೇ ಇರುತ್ತಾನೆ ಎಂದರಿತು, ನನಗೆ ಏನಾದರು ದಾನ ಕೊಡುವೆಯಾ ಎಂದು ಕೃಷ್ಣ ಕೇಳುತ್ತಾನೆ. ಆಗ ಬಾರ್ಬರಿಕ ಏನಾದರೂ ಕೇಳಿ ಕೊಡುವೆ ಎಂದು ವಚನ ನೀಡುತ್ತಾನೆ. ಆಗ ಋಷಿಯ ವೇಷದಲ್ಲಿದ್ದ ಕೃಷ್ಣನು ನಿನ್ನ ತಲೆಯನ್ನ ದಾನವಾಗಿ ಕೊಡು ಎನ್ನುತ್ತಾನೆ. ಇದರಿಂದ ಗಾಬರಿಯಾದ ಬಾರ್ಬರಿಕ ಅಸಲಿಗೆ ನೀನು ಯಾರು ಎಂದು ಕೇಳುತ್ತಾನೆ.

ಆಗ ನಾನು ನಾರಾಯಣನ ಅವತಾರಿ ಕೃಷ್ಣ ಎಂದು ತನ್ನ ನಿಜ ಸ್ವರೂಪವಾದ ವಿಷ್ಣು ಅವತಾರವನ್ನ ತೋರಿಸುತ್ತಾನೆ. ಆಗ ಪರಮಾತ್ಮನ ದರ್ಶನ ಪಡೆದ ಬಾರ್ಬರಿಕ ನಾನು ತಲೆಯನ್ನ ನೀಡಿದ ಮೇಲೆ ಯುದ್ಧದಲ್ಲಿ ಭಾಗವಹಿಸುವುದಕ್ಕೆ ಆಗುವುದಿಲ್ಲ. ಆದರೆ ನಾನು ಮಹಾಭಾರತ ಯುದ್ಧವನ್ನ ನೋಡಲು ಬಯಸುತ್ತನೆ ಎಂದು ಕೃಷ್ಣನಲ್ಲಿ ಕೇಳುತ್ತಾನೆ. ಆಗ ವಾಸುದೇವ ಕೃಷ್ಣನು ನಿನ್ನ ಆಸೆ ನೆರವೇರುವುದು ಎಂದು ಬಾರ್ಬರಿಕನಿಗೆ ಹೇಳಿದಾಗ ತನ್ನ ತಲೆಯನ್ನ ಕತ್ತರಿಸಿ ಕೃಷ್ಣನ ಕೈಗೆ ಕೊಡುತ್ತಾನೆ ಬಾರ್ಬರಿಕ. ಬಳಿಕ ಕೃಷ್ಣನುಕುರುಕ್ಷೇತ್ರ ಯುದ್ಧವನ್ನ ನೋಡಲು ಅನುಕೂಲವಾಗುವಂತೆ ಬಾರ್ಬರಿಕನ ತಲೆಯನ್ನ ಬೆಟ್ಟವೊಂದರ ತುದಿಯಲ್ಲಿ ಇರಿಸುತ್ತಾನೆ. ಮಹಾಭಾರತ ಯುದ್ಧ ಮುಗಿದು ಜಯಶಾಲಿಯಾದ ಪಾಂಡವರು ನಾವು ಕುರುಕ್ಷೇತ್ರ ಯುದ್ಧ ಗೆಲ್ಲಲು ಯಾರು ಕಾರಣ ಎಂದು ವಾದ ನಡೆಯುತ್ತದೆ. ಕೃಷ್ಣನ ಸೂಚನೆಯಂತೆ ಬಾರ್ಬರಿಕನಲ್ಲಿ ಪಾಂಡವರು ತಮ್ಮ ಜಯಕ್ಕೆ ಕಾರಣ ಯಾರು ಎಂದು ಕೇಳಿದಾಗ ಕೃಷ್ಣ ಸಮಯಕ್ಕೆ ಸರಿಯಾಗಿ ಕೊಟ್ಟ ಸೂಕ್ತ ಸಲಹೆಗಳಿಂದಲೇ ನೀವು ಜಯಶಾಲಿಯಾಗಿದ್ದು ಎಂದು ಹೇಳುತ್ತಾನೆ.

ಬಳಿಕ ಶ್ರೀಕೃಷ್ಣನು ಬಾರ್ಬರಿಕನ ತಲೆಯನ್ನ ರೂಪವತಿ ಎಂಬ ನದಿಯಲ್ಲಿ ಮುಳುಗಿಸಿದನು ಎಂದು ಹೇಳಲಾಗಿದ್ದು, ಕಲಿಯುಗ ಆರಂಭವಾದ ಮೇಲೆ ಬಾರ್ಬರಿಕನ ತಲೆಯನ್ನ ರಾಜಸ್ಥಾನದ ಗ್ರಾಮವೊಂದರಲ್ಲಿ ಸಮಾಧಿ ಮಾಡಲಾಗಿದ್ದು, ರಾಜನೊಬ್ಬನು ಬಾರ್ಬರಿಕನ ತಲೆಗೆ ದೇವಸ್ಥಾನ ನಿರ್ಮಿಸಿದ ಎಂದು ಹೇಳಲಾಗುತ್ತೆ.