Advertisements

ಗೀತಾ ಶಿವರಾಜ್ ಕುಮಾರ್ ಮೇಲೆ ಪುನೀತ್ ಮತ್ತು ರಾಘಣ್ಣ ಅಸಮಾಧಾನ ಗೊಂಡಿದ್ರಾ! ದೊಡ್ಮನೆ ರೂಲ್ಸ್ ನಾ ಗೀತಾ ಶಿವರಾಜ್ ಕುಮಾರ್ ಬ್ರೇಕ್ ಮಾಡಿದ್ಯಾಕೆ..

Cinema

ಪ್ರಿಯ ಓದುಗರೆ ಡಾಕ್ಟರ್ ರಾಜಕುಮಾರ್ ಕುಟುಂಬ ಎಂದರೆ ಅತೀ ಗೌರವಾನ್ವಿತ ಮನೆತನ, ಸ್ಯಾಂಡಲ್ವುಡ್ ನ ತವರು, ದೊಡ್ಮನೆ ಎಂತಲೂ ಹೆಸರು ಮಾಡಿದ ಕುಟುಂಬವಾಗಿದೆ. ಈ ಮನೆಯ ಎಲ್ಲ ಸದಸ್ಯರು ಎಲ್ಲ ಸಮಯದಲ್ಲಿಯೂ ನಯ, ವಿನಯ, ನಮ್ರತೆ ಗೆ ಹೆಸರಾದವರು. ಅದು ಅಲ್ಲದೆ ಈ ಕುಟುಂಬ ತನ್ನದೇ ಆದ ಕೆಲ ನಿಯಮಗಳನ್ನು ಹಾಕಿಕೊಂಡಿತ್ತು. ಆ ನಿಯಮಗಳೇನು? ಅದನ್ನು ಗೀತ ಶಿವರಾಜಕುಮಾರ್ ಮಾಡಿದ್ರಾ? ದೊಡ್ಮನೆಗೆ ಡಾಕ್ಟರ್ ರಾಜಕುಮಾರ್ ಅವರು ಯಜಮಾನ್ರು. ಇವರ ಮಾತನ್ನು ಯಾರು ಕೂಡ ನಿರಾಕರಿಸುವುದು ಆಗಲಿ ಮಾಡುತ್ತಿರಲಿಲ್ಲ. ತನ್ನ ಐದು ಮಕ್ಕಳು ಕೂಡ ಇವರು ಹಾಕಿದ ನಿಯಮಗಳನ್ನು ಪಾಲಿಸಿದ್ದರು. ಅದರಂತೆ ನಡೆದುಕೊಂಡಿದ್ದರು. ಆದ್ರೆ ಶಿವಣ್ಣ ಪತ್ನಿ ಗೀತಾ ಅವರು ನಿಯಮವನ್ನು ಬ್ರೇಕ್ ಮಾಡಿದ್ದಾರೆ ಎನ್ನುವ ಮಾತುಗಳು ಆಗ ಹರಿದಾಡಿದ್ದು ನಿಜ. ಡಾ.ರಾಜಕುಮಾರ್ ಅವರ ಕುಟುಂಬ ಹಾಕಿಕೊಂಡ ನಿಯಮ ಎಂದರೆ ಯಾರು ಕೂಡ ರಾಜಕೀಯ ರಂಗಕ್ಕೆ ಪ್ರವೇಶ ಮಾಡದೆ ಇರುವುದು. ಯಾವುದೇ ಸಂದರ್ಭ ಆಗಲಿ ಯಾರೇ ದೊಡ್ಡ ರಾಜಕೀಯ ವ್ಯಕ್ತಿ ಆಗಲಿ ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದರು ಕೂಡ ಹೋಗಬಾರದು. ಯಾಕೆ ಅಂದ್ರೆ ನಾವು ಕಲಾವಿದರು ಇದರಲ್ಲಿ ಪ್ರಾಮಾಣಿಕತೆ ಇದೆ. ಆದರೆ ರಾಜಕೀಯದಲ್ಲಿ ಸುಳ್ಳು ಹೇಳಬೇಕು.

[widget id=”custom_html-3″]

Advertisements

ಪ್ರಾಮಾಣಿಕತೆಗೆ ಬೆಲೆ ಇರುವುದಿಲ್ಲ ಆದ್ದರಿಂದ ನಮ್ಮ ಕುಟುಂಬದ ಯಾರೊಬ್ಬರೂ ರಾಜಕೀಯ ಪ್ರವೇಶ ಮಾಡಬಾರದು ಎಂಬ ಮಾತು ಹೇಳಿದ್ದರು. ಇದನ್ನು ರಾಘಣ್ಣ, ಶಿವಣ್ಣ, ಪುನೀತ್ ಕೂಡ ಪಾಲಿಸಿದ್ದರು. ಅಷ್ಟೇ ಅಲ್ಲ ಹೆಣ್ಣು ಮಕ್ಕಳು ಸಹ ಅಪ್ಪನ ಮಾತನ್ನು ವೇದ ವಾಕ್ಯದಂತೆ ಪಾಲಿಸಿದ್ದರು. ರಾಜಕುಮಾರ್ ಅವರು ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡಾಗ ಜನಸಾಗರವೇ ಹರಿದುಬಂದಿತ್ತು. ಆಗ ರಾಜಕುಮಾರ್ ಅವರನ್ನು ರಾಜಕೀಯಕ್ಕೆ ಇರಿಸುವ ಎಲ್ಲ ರೀತಿಯ ಪ್ರಯತ್ನ ನಡೆದಿತ್ತು. ಆದ್ರೆ ಇವರು ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಆದರೆ 2014ರಲ್ಲಿ ಲೋಕಸಭಾ ಚುನಾವಣೆ ನಡೆದಾಗ ಗೀತಾ ಶಿವರಾಜ್ ಕುಮಾರ್ ಅವರು ಜೆಡಿಎಸ್ ನಿಂದ ಸ್ಪರ್ಧಿಸಲಿದ್ದಾರೆ, ಶಿವಮೊಗ್ಗದಿಂದ ಹೊಸ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಬರಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಶಿವಣ್ಣ ಕೂಡ ಸ್ಪಷ್ಟನೆ ನೀಡಿದರು. ನಾವು ಯಾರೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವುದಿಲ್ಲ. ಹಾಗೆ ಮಧು ಬಂಗಾರಪ್ಪ ನವರಿಗೆ ಕಾಂಗ್ರೆಸ್ ನಿಂದ ಸಿಗುವ ಟಿಕೆಟ್ ತಪ್ಪಿಸುವ ಉದ್ದೇಶದಿಂದ ಗೀತಾರನ್ನು ರಾಜಕೀಯಕ್ಕೆ ಇಳಿಸಿದರು ಎಂಬ ಮಾತು ಕೂಡ ಹೇಳಲಾಯಿತು. ಈ ಘಟನೆಯಿಂದ ಪುನೀತ್ ಮತ್ತು ರಾಘಣ್ಣ ದೂರವೇ ಉಳಿದರು. ತದನಂತರ ಶಿವಣ್ಣ ಪತ್ನಿ ಪರ ನಿಂತು ಪ್ರಚಾರ ಮಾಡಿದರು.

[widget id=”custom_html-3″]

ನಟ ಉಪೇಂದ್ರ ಕೂಡ ಇವರ ಮತಪ್ರಚಾರಕ್ಕೆ ಸಾಗಿದರು. ಆದರೆ ರಾಘಣ್ಣ ಮತ್ತು ಪುನೀತ್ ರಾಜಕುಮಾರ್ ಅವರ ಕುಟುಂಬದ ಯಾವೊಬ್ಬ ಸದಸ್ಯರೂ ಕೂಡ ಗೀತಾ ಅವರಿಗೆ ಬೆಂಬಲ ಸೂಚಿಸುವುದಾಗಿ ಅಥವಾ ರಾಜಕೀಯ ಪ್ರಚಾರಕ್ಕಾಗಿ ಎಲ್ಲಿಯೂ ಕಾಣಿಸಲಿಲ್ಲ. ಕೊನೆಗೆ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳನ್ನು ಗಳಿಸುವ ಮೂಲಕ ಗೀತಾ ಶಿವರಾಜ್ಕುಮಾರ್ ಹೀನಾಯವಾದ ಸೋಲನ್ನು ಅನುಭವಿಸುತ್ತಾರೆ. ಇದರಿಂದ ರಾಜಕುಮಾರ್ ಕುಟುಂಬದಲ್ಲಿ ಕೆಲ ಕಿರಿಕಿರಿಗಳು ಉಂಟಾದ ಮನಸ್ತಾಪಗಳು ಉಂಟಾದವು ಆದರೆ ಇದನ್ನು ಯಾರಿಗೂ ಕುಟುಂಬಸ್ಥರು ತೋರಿಸಲಿಲ್ಲ. ಇದು ದೊಡ್ಡಮನೆಯ ದೊಡ್ಡ ಮನಸ್ಸುಗಳ ನಿರ್ಧಾರವಾಗಿತ್ತು. ಅದೇನೇ ಆಗಲಿ ಡಾಕ್ಟರ್ ರಾಜಕುಮಾರ್ ಅವರ ನಿಯಮವನ್ನು ಶಿವಣ್ಣ ಮತ್ತು ಪತ್ನಿ ಗೀತಾ ಅವರು ಬ್ರೇಕ್ ಮಾಡಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ರಾಜಕೀಯ ನಮಗೆ ಆಗಿ ಬರಲ್ಲ ಎಂದರು ಕಣಕ್ಕಿಳಿದ ಗೀತಾ ಸೋಲು ಅನುಭವಿಸಿ ಹಿಂದೆ ಸರಿದಿದ್ದು ಮಾತ್ರ ಬೇಸರದ ಸಂಗತಿ ಎನ್ನಬಹುದಾಗಿದೆ..

[widget id=”custom_html-3″]