Advertisements

ಈ ಮನೆಗಳು ಯಾಕೆ ರಸ್ತೆಗಳ ಮಧ್ಯೆ ಇವೆ ಗೊತ್ತಾ? ನೀವು ಇದುವರೆಗೂ ಕೇಳಿರದ ವಿಚಿತ್ರ ಮನೆಗಳ ರಹಸ್ಯ..

Kannada Mahiti

ಇಲ್ಲಿ ಕಾಣಿಸ್ತಾಯಿರುವ ಫೋಟೋ ನೋಡಿ ಇದೆಂತಾ ವಿಚಿತ್ರನಾಪ್ಪ! ಸುತ್ತಲೂ ರಸ್ತೆಯಿದೆ ಮಧ್ಯೆ ಮಾತ್ರ ಮನೆ ಯಾಕಿದೆ ಅಂತ ನೀವು ಅಂದುಕೊಳ್ತಾಯಿದ್ರೆ ಅದರಲ್ಲಿ ಯಾವುದೇ ಆಆಶ್ಚರ್ಯವಿಲ್ಲ, ಮೊದ ಮೊದಲು ಇದನ್ನು ನೋಡಿದ್ರೆ ಬಹುಷಃ ಎಲ್ಲರಿಗೂ ಹಾಗೇ ಅನಿಸಬಹುದೇನೋ. ಆದರೆ ಎಲ್ಲವೂದಕ್ಕೂ ಒಂದು ಹಿನ್ನಲೆಯಂತು ಇದ್ದೇ ಇರುತ್ತದೆ. ಹಾಗೇ ಈ ವಿಚಿತ್ರ ಒಂಟಿ ಮನೆಯ ಹಿಂದೆ ಸಹ ಒಂದು ಕಥೆಯಿದೆ. ಎಸ್, ನೀವಿಲ್ಲಿ ನೋಡ್ತಾಯಿರುವ ಈ ಫೋಟೊ ಚೀನಾ ದೇಶದ್ದು, ಚೀನಾದಲ್ಲಿ ಹಳ್ಳಿಗಳ ಅಭಿವೃದ್ಧಿ ಮಾಡುವ ಯೋಜನೆಯನ್ನು ಅಲ್ಲಿಯ ಅಧ್ಯಕ್ಷರು ಕೈಗೊಳ್ತಾರೆ, ಹೀಗೆ ಹಳ್ಳಿ ಅಭಿವೃದ್ಧಿ ಆಗಬೇಕು ಅಂದ್ರೆ ಅಲ್ಲಿ ಮೊದಲು ರಸ್ತೆಗಳು ಚೆನ್ನಾಗಿ ನಿರ್ಮಾಣ ಆಗಿರಬೇಕು..

[widget id=”custom_html-3″]

Advertisements

ನಗರ ನಗರಗಳಿಗೆ, ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಾಗ ಮೊದಲಿಗೆ ಅಲ್ಲಿನ ಹಳ್ಳಿಯೊಂದರ ಜನರನ್ನು ತೆರವು ಮಾಡಬೇಕಾದ ಪರಿಸ್ಥಿತಿ ಬರುತ್ತದೆ, ಆಗ ಅಲ್ಲಿಯ ಜನರಿಗೆ ಒಂದಷ್ಟು ಅಗತ್ಯ ಹಣ ಕೊಟ್ಟು ಖಾಲಿ ಮಾಡಿಸಲಾಗುತ್ತದೆ, ಆದರೆ ಈ ರಸ್ತೆಗಳ ಮಧ್ಯೆ ಇರುವ ಒಂಟಿ ಮನೆಯ ಮಾಲೀಕ ಮಾತ್ರ ಜಪ್ಪಯ್ಯ ಅಂದ್ರೂ ಮನೆ ಖಾಲಿ ಮಾಡಲು ಒಪ್ಪುವುದಿಲ್ಲ, ನನಗೆ ನನ್ನ ಮನೆಗೆ ಸೂಕ್ತ ಬೆಂಬಲ ಕೊಡುವವರೆಗೂ ಖಾಲಿ ಮಾಡಲ್ಲ ಅಂತ ಪಟ್ಟು ಹಿಡಿದು ಕುಳಿತ, ಹಾಗಾಗಿ ಅಲ್ಲಿನ ಚೀನಾ ಆಡಳಿತ ಮಂಡಳಿ ನಿರ್ಧರಿಸಿ ಆತನ ಮನೆಗೆ ಕರೆಂಟ್ ಹಾಗೂ ನೀರಿನ ವ್ಯವಸ್ಥೆ ಕಟ್ ಮಾಡಿದ್ರು, ಇಷ್ಟಾದರೂ ಆತ ಮಾತ್ರ ಸುತಾರಂ ಮನೆ ಮಾರಲು ಒಪ್ಪಲಿಲ್ಲ, ಈ ಕಾರಣಕ್ಕೆ ರಸ್ತೆ ಮಧ್ಯೆಯೇ ಮನೆ ಉಳಿದುಕೊಂಡಿದೆ.

[widget id=”custom_html-3″]


ಇನ್ನು ಇಂತಹದ್ದೇ ಒಂದು ಘ’ಟ’ನೆ ಅಮೇರಿಕಾದಲ್ಲಿಯೂ ನಡೆದಿತ್ತು. ಎಂಎನ್‌ಸಿ ಕಂಪನಿಯೊಂದು ತಲೆಎತ್ತುವ ಸಲುವಾಗಿ ಅಜ್ಜಿ ಬಳಿ ಮನೆ ಖಾಲಿ ಮಾಡುವಂತೆ ವಿನಂತಿಸಿದ್ದಾರೆ, ಆದರೆ ಆ ಅಜ್ಜಿ ಇಲ್ಲ ಆಗೋದಿಲ್ಲ, ಇದು ನಾನು ಸುಮಾರು 50ವರ್ಷಗಳಿಂದ ಬಾಳಿ ಬದುಕಿದ ಮನೆ, ಈ ಮನೆಯಲ್ಲಿ ಸಾಕಷ್ಟು ನೆನಪುಗಳಿವೆ, ನನ್ನ ಭಾವನೆಗಳಿವೆ ಅಂತ ಹೇಳಿ ಮನೆ ಮಾರಲು ನಿರಾಕರಿಸಿದ್ರು, ಅಂದ ಹಾಗೇ ಈ ಅಜ್ಜಿಗೆ 6 ಕೋಟಿಯ ಆಫರ್ ಕೊಟ್ರು ಸಹ ಈ ಅಜ್ಜಿ ಮನೆ ಮಾರಲು ಒಪ್ಪಲಿಲ್ಲ, ಈ ಹಿನ್ನಲೆ ಒಂದು ದೊಡ್ಡ ಕಂಪನಿಯ ಮಧ್ಯೆ ಕೇವಲ ಅಜ್ಜಿ ಮನೆ ಮಾತ್ರಯಿದ್ದು ಈ ಅಜ್ಜಿ ಒಳ್ಳೆ ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ.

[widget id=”custom_html-3″]

ಇನ್ನು ಇಲ್ಲೊಂದು ಫೋಟೋವನ್ನು ನೋಡಿ, ಈ ಫೋಟೋದಲ್ಲಿ ಸುತ್ತ ಮಣ್ಣಿನ ರಾಶಿ ಮಧ್ಯೆ ಹೇಗೆ ಒಂದೇ ಒಂದು ಮನೆ ಹೊಂಡದಲ್ಲಿದೆ ನೋಡಿ, ಹೀಗ್ಯಾಕಪ್ಪ ಮನೆ ಕಟ್ಟಿದ್ರು ಅಂತ ಆಶ್ಚರ್ಯ ಪಡಬೇಡಿ ಯಾಕಂದ್ರೆ ಈ ಮನೆ ಕಟ್ಟುವ ಮುನ್ನ ಸರಿಯೇಯಿತ್ತು, ಇಲ್ಲಿ ಮಿಸ್ಟರ್ ಯಂಗ್ ಎನ್ನುವ ವ್ಯಕ್ತಿ ವಾಸಿಸುತ್ತಿದ್ದಾರೆ. ಅವರು ಮನೆ ಕಟ್ಟುವಾಗ ಸರಿಯಾದ ಜಾಗದಲ್ಲಿಯೇ ಕಟ್ಟಿದ್ರು, ಆದರೆ ಕನ್‌ಸ್ಟ್ರಕ್ಷನ್ ಕೆಲಸದ ಸಲುವಾಗಿ ಮನೆ ಮಾರಲು ಅನುಮತಿಸದ ಕಾರಣ, ಭೂಮಿಯಿಂದ ತೆಗೆದ ಮಣ್ಣನ್ನು ಮನೆಯ ಸುತ್ತ ಹಾಕಿ ಆ ಮನೆಯನ್ನು ಹೊಂಡದಲ್ಲಿರೋ ತರ ಕಾಣುವಂತೆ ಮಾಡಲಾಗಿದೆ. ಸ್ನೇಹಿತರೇ ನೋಡಿದ್ರಲ್ಲಾ? ಇದು ಕೇವಲ ಒಂದು ಚಿಕ್ಕ ವರದಿ ಅಷ್ಟೇ, ಇದೇ ರೀತಿಯಾದ ಹಲವು ಚಿತ್ರ ವಿಚಿತ್ರ ಮನೆಗಳು ಜಗತ್ತಿನಲ್ಲಿ ಕಾಣಸಿಗುತ್ತದೆ.