Advertisements

ರಸ್ತೆಬದಿಯ ಮಸಾಲಾಪುರಿ ಗಿಂತ ಹೆಚ್ಚು ರುಚಿಕರವಾದ ಮಸಾಲ ಪುರಿಯನ್ನು ಮನೆಯಲ್ಲೇ ಮಾಡಿ. ಮಾಡುವ ವಿಧಾನ ನೋಡಿ.

Aduge

ಮೊದಲಿಗೆ ಒಂದು ಬೌಲ್ ನಷ್ಟು ಹಸಿರು ವಣ ಬಟಾಣಿಯನ್ನು ನೀರಲ್ಲಿ 8 ಗಂಟೆಗಳ ಕಾಲ ನೆನೆಸಿಡಬೇಕು. ಕುಕ್ಕರ್ ಗೆ ನೆನೆಸಿದ ಬಟಾಣಿ , ಒಂದು ಆಲೂಗೆಡ್ಡೆ ಹಾಕಿ ಬೇಯಿಸಿಕೊಳ್ಳಿ. ಒಂದು ಈರುಳ್ಳಿ, ಒಂದು ಟೊಮ್ಯಾಟೋ, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹಚ್ಚಿಟ್ಟುಕೊಳ್ಳಿ.

Advertisements

ಪಾನ್ ಒಲೆ ಮೇಲಿಟ್ಟು 2 ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಕಟ್ ಮಾಡಿದ್ದು ಒಂದು, ಬೆಳ್ಳುಳ್ಳಿ 4 ಎಸಳು, ಶುಂಠಿ ಸಣ್ಣ ತುಂಡು, ಜೀರಿಗೆ , ಚಕ್ಕೆ 1 ಇಂಚು, ಲವಂಗ 3, ಹಸಿಮೆಣಸು 2 ಕಾರ ಬೇಕಾದ್ರೆ ಹಸಿಮೆಣಸು 2 ಜಾಸ್ತಿ ಹಾಕೋಬಹುದು. ಹುರಿದು ಟೊಮ್ಯಾಟೋ ಹಾಕಿ ಹುರಿದು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸ್ವಲ್ಪ ಕೊತ್ತಂಬರಿಸೊಪ್ಪು, ಪುದಿನ ಸ್ವಲ್ಪ, ಮತ್ತೆ ಬೇಯಿಸಿಕೊಂಡ ಬಟಾಣಿ ಸ್ವಲ್ಪ ಹಾಕಿ ರುಬ್ಬಿಡಿ.

ಮತ್ತೆ ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಗರಂ ಮಸಾಲ 1 ಸ್ಪೂನ್, ಹಳದಿ ಅರ್ಧ ಸ್ಪೂನ್, ಧನಿಯಾ ಪುಡಿ 1 ಸ್ಪೂನ್ ಹಾಕಿ ಹುರಿಯಿರಿ ನಂತರ ರುಬ್ಬಿದ ಮಸಾಲೆ, ನೀರು ಹಾಕಿ ಹಸಿ ವಾಸನೆ ಹೋಗೋ ತನಕ ಚೆನ್ನಾಗಿ ಕುದಿಸಿ. ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.

ಒಂದು ಪ್ಲೇಟಿಗೆ ಪೂರಿ ಪುಡಿ ಮಾಡಿ ಹಾಕಿ, 7 ಪೂರಿ ಪುಡಿ ಮಾಡಿ ಹಾಕಿದ್ದೀನಿ. ನಾನು ಚಟ್ಟೆ ಪುರಿ ತಕೊಂಡಿದಿನಿ, ಪಾನಿ ಪುರಿ ಪೂರಿನು ಆಗುತ್ತೆ. ತಯಾರಿಸಿದ ಮಸಾಲೆ ಹಾಕಿ ಅದರ ಮೇಲೆ ಕಟ್ ಮಾಡಿದ ಈರುಳ್ಳಿ, ಟೊಮ್ಯಾಟೋ ಹಾಕಿ , ಸಣ್ಣ ಸೇವ್ ಹಾಕಿ ನಂತರ ಕೊತ್ತಂಬರಿ ಸೊಪ್ಪು ಹಾಕಿ. ಬೇಕಾದರೆ ಮೀಟ ಚಟ್ನಿ ಹಾಕಬಹುದು. ಈಗ ಚಟ್ ಪಟ ಮಸಾಲ ಪೂರಿ ರೆಡಿ .