Advertisements

6 ವರ್ಷ ಪ್ರೀತಿ.!ಭಾರತೀಯ ಮಹಿಳೆ ಜೊತೆ ವಿದೇಶಿ ಯುವತಿ ಮದ್ವೆ.!ಹನಿಮೂನ್ ಕೂಡ ಉಂಟು?

Kannada News

ಮದುವೆ ಎಂದರೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ನಾವೆಲ್ಲ ನಂಬಿದ್ದೇವೆ..ಅದೇ ರೀತಿ ಇಂದಿಗೂ ಎಲ್ಲರೂ ಆಯಾ ಸಂಪ್ರದಾಯದ ಜೊತೆ ಮನೆಯವರು ನೋಡಿದ ಗಂಡು ಹೆಣ್ಣನ್ನು ಜೊತೆಗೆ ಪ್ರೀತಿ ಮಾಡಿ ಅವರಿಷ್ಟದ ಜೋಡಿ ಇಷ್ಟ ಪಟ್ಟು ಮದುವೆ ಆಗುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಮದುವೆ ತುಂಬಾ ವಿಶೇಷವಾಗಿ ನಡೆದಿದೆ ಸ್ನೇಹಿತರೆ. ಈ ಮದುವೆ ಕಥೆ ಪ್ರೇಮ ನಿವೇದನೆಯ ವಿಚಾರ ತಿಳಿದರೆ ನಿಜಕ್ಕೂ ನಿಮಗೂ ಒಂದು ಕ್ಷಣ ಬೆರಗಾಗುವಂತಿದೆ. ಹೌದು ಹಾಗೂ ಟೀನಾ ದಾಸ್ ಎನ್ನುವ ಬಾಂಗ್ಲಾ ಮಹಿಳೆ ಇತ್ತ ಭಾರತದ ಸುಭಿಕ್ಷಾ ಸುಬ್ರಮಣಿ ಎಂಬ ಮಹಿಳೆಯ ಜೊತೆ ಮೊನ್ನೆ ಕಳೆದ ತಿಂಗಳು ಆಗಸ್ಟ್ 31 ಕ್ಕೆ ತಮಿಳುನಾಡು ಪ್ರದೇಶದಲ್ಲಿ ಮದುವೆಯಾಗಿದ್ದಾರೆ. ಅದು ಕುಟುಂಬಸ್ಥರ ಸಮ್ಮುಖದಲ್ಲಿ ಆಗಿರುವುದು ನಮಗೆಲ್ಲ ಖುಷಿ ತಂದಿದೆ ಎಂದು ಇಬ್ಬರೂ ಕೂಡ ಹೇಳಿಕೊಂಡಿದ್ದಾರೆ.

ಮೊದಲಿಗೆ ಸುಭಿಕ್ಷಾ ಕೆನಡಾದ ಕ್ಯಾಲ್ಗರಿನಲ್ಲಿ ಕುಟುಂಬದ ಜೊತೆ ನೆಲೆಸಿದ್ದರು. ಈಕೆ ಭಾರತೀಯ ಮಹಿಳೆ. ಹೌದು ಅದೇ ವೇಳೆ ಡೇಟಿಂಗ್ ಯಾಪ್ನಲ್ಲಿ ಸಂಗಾತಿಗೆ ಹುಡುಕಾಟ ನಡೆಸಿದ್ದಾರೆ. ಆಗ ಬಾಂಗ್ಲಾದೇಶದ ಹಿಂದೂ ಮಹಿಳೆ ಟೀನಾ ದಾಸ್ ಅವರು ಸಿಕ್ಕಿದ್ದಾರೆ..ಹೌದು ಒಟ್ಟು ಆರು ವರ್ಷಗಳ ಕಾಲ ಇವರಿಬ್ಬರ ಪ್ರೀತಿ ನಡೆದಿದ್ದು ಈಗ ಕೊನೆಗೆ ಮದುವೆಗೆ ಸಾಕ್ಷಿಯಾಗಿದೆ ಎಂದು ಹೇಳಬಹುದು. ಹೌದು ಈ ಸುಭಿಕ್ಷ ಹೇಳುವ ಹಾಗೆ ನಮ್ಮಿಬ್ಬರ ಮದುವೆಗೆ ಆರಂಭದಲ್ಲಿ ತೊಂದರೆ ಎದುರಾಗಬಹುದು, ಸಮಸ್ಯೆ ಉಂಟಾಗಬಹುದು ಎಂದು ಅಂದುಕೊಂಡಿದ್ದೆ, ಆದರೆ ಯಾವುದೇ ಸಮಸ್ಯೆ ನಡೆಯದೆ, ನಾವು ಇಷ್ಟ ಪಟ್ಟ ಹಾಗೇನೇ ಮದುವೆ ಆಗಿದೆ ಎಂದರು. ಹಾಗೆ ಅವರಿಷ್ಟದಂತೆ ಭಾರತದಲ್ಲಿ ಬ್ರಾಹ್ಮಿನ್ ಪದ್ಧತಿಯಲ್ಲೇ ತಮಿಳುನಾಡಿನಲ್ಲಿ ಮದುವೆ ನಡೆದಿದೆ.

Advertisements

ತಮ್ಮ ಮದುವೆ ಬಗ್ಗೆ ಮಾತನಾಡಿದ ಟೀನಾ ಅವರು ನಾನು ಬಾಂಗ್ಲಾದೇಶದ ಮಹಿಳೆ. ನನಗೆ ಏನು ಹೇಳಬೇಕು ಒಂದು ತೋಚುತ್ತಿಲ್ಲ. ಇಲ್ಲಿಯ ಮದುವೆ ಮತ್ತು ಆ ಸಂಪ್ರದಾಯ ನಿಜಕ್ಕೂ ಅದ್ಭುತವಾದ ಅನುಭವ. ಇದೆ ಮೊದಲು ನಾನು ಭಾರತಕ್ಕೆ ಬಂದಿರೋದು. ತುಂಬಾ ಚೆನ್ನಾಗಿ ನಮ್ಮಿಬ್ಬರ ಮದುವೆ ಜರುಗಿದೆ. ಮದುವೆಯೂ ಖುಷಿ ತಂದಿತು ಎಂದು ಮಾತನಾಡಿದ್ದಾರೆ. ಜೊತೆಗೆ ಮಾತು ಮುಂದುವರಿಸಿ ನಾನು 19 ವರ್ಷದವನಿದ್ದಾಗಲೇ ಒಬ್ಬ ವ್ಯಕ್ತಿಯ ಜೊತೆ ಮದುವೆ ಆಗಿದ್ದೆ. ಅಲ್ಲಿ ಬಾಂಗ್ಲಾದೇಶದಲ್ಲಿ ಹೆಚ್ಚು ಸಂಪ್ರದಾಯ ಇದೆ. ಅಲ್ಲಿಯ ಜನರು ಸ*ಲಿಂಗಕಾ’ಮಿಯ ಜನರನ್ನು ತುಂಬಾ ಕೆಟ್ಟದಾಗಿ ನೋಡುತ್ತಾರೆ, ಹಾಗೆ ವಿರೋಧ ವ್ಯಕ್ತಪಡಿಸುತ್ತಾರೆ ಹಾಗಾಗಿ ನಾನು ಆತನಿಂದ ಬೇರ್ಪಟ್ಟು ಆಗ ಖುಷಿಯನ್ನು ಹುಡುಕಿಕೊಂಡು ಹೊರಟೆ, ಆಗ ನನಗೆ ಪರಿಚಯ ಆಗಿದ್ದೇ ಈ ಸುಭಿಕ್ಷ, ಇದೀಗ ಮದುವೆಯಾಗಿದೆ ಖುಷಿಯಾಗುತ್ತದೆ ಎಂದು ಮಾತನಾಡಿದರು…

ಅತ್ತ ಸುಭಿಕ್ಷ ಅವರು ಕೂಡ ಆರಂಭದಲ್ಲಿ ಯುವಕನೊಬ್ಬನ ಜೊತೆ ಡೇಟಿಂಗ್ ನಡೆಸುತ್ತಿದ್ದರಂತೆ, ಅವರ ಮನೆಯವರು ಆಕೆಗೆ ಹಣ್ಣು ಸಂಗಾತಿಯಾಗಬೇಕು ಎನ್ನುವ ಅಂಶವನ್ನು ಆಕೆಯ ಆಸೆಯ ಆರಂಭದಲ್ಲಿ ಅರ್ಥಮಾಡಿಕೊಂಡಿರಲಿಲ್ಲ. ನಂತರ ಅರ್ಥ ಮಾಡಿಸಲು ಸುಭಿಕ್ಷ ಪ್ರಯತ್ನಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಾಗೆ ಅವರ ಅತ್ತಿಗೆ ಮತ್ತು ಸಹೋದರ ಹೇಳಿದ ಹಾಗೆ ಚಿಕಿತ್ಸೆಗೆ ಹೋದಾಗ ನನ್ನಲ್ಲಿರುವ ಸಮಸ್ಯೆ ಏನೆಂದು ಗೊತ್ತಾಯ್ತು, ಆಗ ನಾನು ಇಷ್ಟಪಟ್ಟೆ ಬಾಂಗ್ಲಾದೇಶದ ಮಹಿಳೆ ಟೀನಾ ಅವರನ್ನು ಅವರನ್ನು ಪ್ರೀತಿ ಮಾಡಿದೆ. ಈಗ ಅವರ ಕೈ ಹಿಡಿದಿದ್ದೇನೆ ಎಂದರು. ಹೌದು ಈ ಜೋಡಿ ಮದುವೆ ಬಳಿಕ ಇದೀಗ ಹನಿಮೂನ್ ಮೂಡ್ ನಲ್ಲಿಯೂ ಸಹ ಇದೆಯಂತೆ. ಹನಿಮೂನ್ ಗೂ ತೆರಳಲಿದೆ ಈ ಜೋಡಿ ಎಂದು ತಿಳಿದುಬಂದಿದೆ. ಹೌದು ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಏನೇ ಇರಲಿ ಈ ಜೋಡಿಗೆ ಶುಭ ಕೋರಿ ಧನ್ಯವಾದಗಳು…