Advertisements

ಅಣ್ಣಾವ್ರ ಕುಟುಂಬವನ್ನ ಎದುರು ಹಾಕಿಕೊಂಡಿದ್ರಾ ಸುದೀಪ್, ದರ್ಶನ್! ಅಂದು ಶಿವಣ್ಣ ಸುದೀಪ್ ಅಷ್ಟೇಕಷ್ಟೇನಾ?

Cinema

ಸ್ಯಾಂಡಲ್ವುಡ್ನನಲ್ಲಿ ದರ್ಶನ್ ಸುದೀಪ್ ಎಂದರೆ ಅಪಾರ ಅಭಿಮಾನಿಗಳನ್ನು ಹಚ್ಚಿಕೊಂಡ ಅಚ್ಚುಮೆಚ್ಚಿನ ನಟರು. ಇವರು ಮೊದ ಮೊದಲು ತುಂಬಾ ಕ್ಲೋಸ್ ಆಗಿದ್ದವರು. ಆದ್ರೆ ತೀರಾ ಇತ್ತೀಚಿಗೆ ಇವರಿಬ್ಬರ ನಡುವೆ ಬಿರುಕು ಮೂಡಿದೆ. ಯಾಕೆ? ಕಾರಣವಾದ್ರೂ ಏನು? ಅಷ್ಟೇ ಅಲ್ಲಾ ದೊಡ್ಡಮನೆ ಕುಟುಂಬವನ್ನು ಇವರಿಬ್ಬರೂ ಎದುರು ಹಾಕಿಕೊಂಡಿದ್ರಾ? ಇದಕೆಲ್ಲ ಉತ್ತರ ಈ ಲೇಖನದಲ್ಲಿದೆ ಇದನ್ನು ಪೂರ್ಣವಾಗಿ ಓದಿ. ಕನ್ನಡ ಸಿನಿಮಾದಲ್ಲಿ ಜೋಡೆತ್ತು ಎಂದೇ ಹೆಸರುವಾಸಿಯಾದ ನಟರು ಸುದೀಪ್ ಹಾಗೂ ನಟ ದರ್ಶನ್. ಇವರಿಬ್ಬರು ಕುಚಕು ಗೆಳೆಯರು. ಅದೇನೇ ಆದ್ರು, ಸುಖ ದುಃಖದಲ್ಲಿ ಭಾಗಿಯಾದವರು. ಅದು ಯಾಕೋ ಗೊತ್ತಿಲ್ಲ. ಇವರಿಬ್ಬರ ನಡುವೆ ಇದೀಗ ಕುಡದಂತ ಬಿರುಕು ಮೂಡಿದೆ. ಇದಕ್ಕೆ ಕಾರಣವಾದ್ರೂ ಏನು ಅಂತ ನೋಡೋದಾದ್ರೆ, ಇವರಿಬ್ಬರ ನಡುವೆ ಮೂಡಿದ ಹೇಳಿಕೆಯ ಎಂದರೆ ತಪ್ಪಾಗಲಾರದು. ನಟ ಸುದೀಪ್ ಅವರ ಮೊದಲ ಚಿತ್ರ ‘ ಸ್ಪರ್ಶ್ ‘. ಇದು ಆಗ್ಲೇ ತುಂಬಾ ಹೆಸರು ಮಾಡಿತು. ತದ ನಂತ್ರ ‘ ಕಿಚ್ಚ ‘ ಚಿತ್ರ ಬಾಕ್ಸ್ ಆಫಿಸ್ ಕೊಳ್ಳೆ ಹೊಡಿಯೋದರ ಜೊತೆಗೆ ಕಿಚ್ಚ ಎಂಬ ಬಿರುದು ಕೂಡಾ ಬಂತು.

Advertisements

ನಂತ್ರ ‘ವಾಲಿ ‘, ಮೈ ಆಟೋಗ್ರಾಫ್, ಕೋಟಿಗೊಬ್ಬ ಹೀಗೆ ಸಾಲು ಸಾಲು ಸಿನಿಮಾ ನೀಡಿ ಹಿಟ್ಟ ಆದ್ರು. ಇತ್ ತಂದೆ ಜೊತೆಗೆ ಲೈಟ್ ಮ್ಯಾನ್ ಆಗಿ, ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದರು. ನಂತ್ರ ‘ಮೆಜೆಸ್ಟಿಕ್ ‘ ಚಿತ್ರದ ಮೂಲಕ ಸ್ಯಾಂಡಲವುಡ್ ಗೆ ಎಂಟ್ರಿ ಕೊಟ್ರು. ನಂತ್ರ ಇವರು ‘ಕರಿಯ’, ‘ಸಾರಥಿ ‘ ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದ್ರು. ಇದೆ ಸಮಯದಲ್ಲಿ ದರ್ಶನ ಮತ್ತು ಸುದೀಪ್ ನಡುವೆ ಸಣ್ಣ ಮನಸ್ತಾಪಗಳನ್ನು ಮಾಧ್ಯಮಗಳು ಹುಟ್ಟಿ ಹಾಕಿದವು.
ಹೌದು… ಒಮ್ಮೆ ನಟ ಸುದೀಪ್ ಅವರ ಮಾತನ್ನು ಎತ್ತಿ ಹಿಡಿದರೆ, ಮತ್ತೊಮ್ಮೆ ದರ್ಶನ ಹೇಳಿಕೆಯನ್ನು ವತ್ತಿ ವತ್ತಿ ತೋರಿಸಿ ಇಬ್ಬರ ನಡುವೆ ವೈಮನಸ್ಸು ಮೂಡಲು ಕಾರಣವಾಯಿತು. ಇದೆ ಸಂದರ್ಭದಲ್ಲಿ ದರ್ಶನ ಹೆಂಡತಿ ಜೊತೆಗೆ ಜಗಳವಾಗಿ ದೊಡ್ಡ ಸುದ್ದಿ ಆದ್ರು. ಇದೆ ಸಮಯದಲ್ಲಿ ‘ಸಾರಥಿ ‘ ಚಿತ್ರದ ಪ್ರಚಾರಕ್ಕೆ ಸುದೀಪ್ ನಿಂತ್ರು. ಅವರಿಗೆ ಧೈರ್ಯ ಹೇಳಿದ್ರು. ಅವರ ಸಂಕಷ್ಟ್ದಲ್ಲಿ ಪಾಲ್ಗೊಂಡರು. ತದನಂತ್ರ ಸುದೀಪ್ ಅಭಿನಯದ ಕನ್ನಡ ಚಿತ್ರ ಹುಚ್ಚ. ಈ ಚಿತ್ರದ ಪ್ರಚಾರಕ್ಕೆ ನಟ ದರ್ಶನ್ ಕೂಡ ಹೋಗುತ್ತಾರೆ ಅಂದಿನಿಂದ ಇಲ್ಲಿಯವರೆಗೂ ಇಬ್ಬರೂ ಕೂಡ ಕುಚುಕು ಸ್ನೇಹಿತರಾಗುತ್ತಾರೆ.

ಎಷ್ಟರಮಟ್ಟಿಗೆ ಎಂದರೆ ಯಾರೊಬ್ಬರೂ ಇವರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಇಬ್ಬರು ನಟರಲ್ಲಿ ಬಾಂಧವ್ಯ ಮೂಡುತ್ತದೆ. ವೇದಿಕೆಗಳನ್ನು ಹಂಚಿಕೊಳ್ಳತ್ತರೆ. ಒಬ್ಬರಿಗೊಬ್ಬರು ಹೆಲ್ಪ್ ಮಾಡುತ್ತಾರೆ. ಸಿನಿಮಾ ಇಂಡಸ್ಟ್ರಿಗೆ ಬರುವ ಹೊಸ ನಟರಿಗೆ ಪ್ರೋತ್ಸಾಹ ಪ್ರೋತ್ಸಾಹ ತುಂಬುವ ಕೆಲಸವನ್ನು ಸಹ ಈ ಇಬ್ಬರು ನಟರು ಮಾಡುತ್ತಾರೆ. ಇದೇ ಸಮಯದಲ್ಲಿ ಕೆಲ ಮಾಧ್ಯಮಗಳು ಹಾಗೂ ಪತ್ರಿಕೆಗಳು ಇವರಿಬ್ಬರು ದೊಡ್ಮನೆ ಎದುರಾಳಿಗಳು ಎಂದು ಬಿಂಬಿಸುತ್ತಾರೆ. ಹಾಗೆ ಕೂಡ ಬರೆಯುತ್ತಾರೆ. ಅದರಂತೆ ಸುದೀಪ್ v/s ಅಪ್ಪು, ಹಾಗೂ ಶಿವಣ್ಣ v/s ದರ್ಶನ ಎನ್ನೋ ತರಾ ಬಿಂಬಿಸಿ ಇಬ್ಬರನ್ನು ಎತ್ತಿ ಕಟ್ಟಲಾಗುತ್ತದೆ. ಇದೆ ವೇಳೆ ಕನ್ನಡ ಡಬ್ಬಿಂಗ್ ವೇಳೆ ಶಿವಣ್ಣ ಮತ್ತು ಸುದೀಪ್ ನಡುವೆ ನಡೆದ ಮಾತಿನ ಚಕಮಕಿ ಇಂದಾಗಿ ಇಬ್ಬರ ನಡುವೆ ಕಲಹಗಳು ಆರಂಭವಾದವು.

ಇದರಲ್ಲಿ ಹೇಳಿದ ಕೆಲ ಹೇಳಿಕೆಯನ್ನು ಅಷ್ಟೇ ಎಡಿಟ್ ಮಾಡಿ ಕೆಲ ಕಿಡಿಗೇಡಿಗಳು ಎರಡು ನಟರ ನಡುವೆ ವೈಷಮ್ಯವನ್ನು ಹುಟ್ಟುಹಾಕಿದರು. ನಟ ಸುದೀಪ್ ಮತ್ತು ದರ್ಶನ ದೊಡ್ಮನೆ ವಿರೋಧಿಗಳು ಎಂದು ಹೇಳಲಾಯಿತು. ಇದಾದ ನಂತ್ರ ಕ್ರಿಕೆಟ್ ಗ್ರೌಂಡ್ ಅಲ್ಲಿ ಕೂಡಾ ಶಿವಣ್ಣ ಮತ್ತು ಸುದೀಪ್ ನಡುವೆ ಮತ್ತೊಮ್ಮೆ ಕ್ಲ್ಯಾಸ್ ಆಯಿತು. ಇದಾದ ನಂತ್ರ ದರ್ಶನ ಮತ್ತು ಸುದೀಪ್ ನಡುವೆ ಟ್ವಿಟ್ ಕಾರಣದಿಂದ ದೊಡ್ಡ ಬಿರುಕು ಮೂಡಿತು. ಇದೆ ಕಾರಣದಿಂದ ಈ ಇಬ್ಬರು ನಟರು ಶಾಶ್ವತವಾಗಿ ದೂರ ಆದ್ರು ಎನ್ನಲಾಗುತ್ತಿದೆ. ಆದ್ರೆ ಸುದೀಪ್ ಮತ್ತು ದರ್ಶನ ನಾವು ದೊಡ್ಡಮನೆ ವಿರೋಧಿಗಳು ಅಲ್ಲ ಎಂದು ಹೇಳಿದ್ದಾರೆ. ಅದೇನೇ ಆಗ್ಲಿ ಇದೀಗ ಈ ವೈಷಮ್ಯ ಹೆಚ್ಚಾಗಿದ್ದು. ಇದಕ್ಕೆ ಬ್ರೇಕ್ ಯಾವಾಗ ಬೀಳುತ್ತೆ ಎಂದು ನೋಡಬೇಕಿದೆ.