Advertisements

ಪುಟಾಣಿ ಆಗಿದ್ದ ಸುದೀಪ್ ಅವರ ಮಗಳು ಈಗ ಹೇಗೆ ಬೆಳೆದಿದ್ದಾರೆ? ಏನು ಕೆಲಸ ಮಾಡ್ತಿದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಿಚ್ಚ ಸುದೀಪ್ ಅವರು ಕೇರಳ ಮೂಲತಃ ಪ್ರೀಯಾರಾಧ ಅವರನ್ನ ಬಹಳ ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರು.. ಈ ದಂಪತಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ. ಸುದೀಪ್ ಪ್ರೀಯ ದಂಪತಿಯ ಮುದ್ದಾದ ಮಗಳ ಹೆಸರು ಸಾನ್ವಿ.. ಇತ್ತೀಚೆಗೆ ಸಾನ್ವಿಯ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಮಗಳ ಹುಟ್ಟುಹಬ್ಬಕ್ಕೆ ವಿಶೇಷವಾದ ಹಾಡನ್ನ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಸುದೀಪ್ ಅವರ ಮಗಳು ಸಾನ್ವಿ ಈಗ ಹೇಗಿದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ ಎಂಬುದನ್ನ ನೋಡೊಣ ಬನ್ನಿ..

Advertisements

ಸುದೀಪ್ ಅವರ ಮಗಳು ಸಾನ್ವಿ ಬೆಂಗಳೂರಿನ ಒಂದು ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ಓದುತ್ತಿದ್ದಾರೆ. ಸಾನ್ವಿ ಅವರಿಗೆ ಮುಂದಿನ ದಿನಗಳಲ್ಲಿ ಫ್ಯಾಷನ್ ಡಿಸೈನ್ ಕಲಿಯುವ ಆಸಕ್ತಿ ಇದೆ.. ಜೊತೆಗೆ ಸಿನಿಮಾ ತಯಾರಿಕೆಯಲ್ಲಿ ಎಡಿಟಿಂಗ್ ಮತ್ತು ಫೋಟೊಗ್ರಾಫ್ ನಲ್ಲಿಯೂ ಕೂಡ ಸಾನ್ವಿ ಅವರಿಗೆ ಆಸಕ್ತಿ ಇದೆ. ಜೊತೆಗೆ ಸಾನ್ವಿ ಯವರು ಚೆನ್ನಾಗಿ ಹಾಡನ್ನು ಹಾಡುತ್ತಾರೆ.. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟೀವ್ ಆಗಿರುವ ಸಾನ್ವಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆಗಿನ ಪೊಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಸಧ್ಯಕ್ಕೆ ಮಹಾಮಾ’ರಿ ಸಮಸ್ಯೆ ಕಾರಣ ಎಲ್ಲೆಡೆ ಆನ್ಲೈನ್ ಕ್ಲಾಸಸ್ ನಡೆಯುತ್ತಿದೆ‌‌‌.. ವಿದ್ಯಾಭ್ಯಾಸದ ಜೊತೆಗೆ ಮ್ಯೂಸಿಕ್ ಮತ್ತು ಡ್ಯಾನ್ಸಿಂಗ್ ವಿಷಯವಾಗಿ ಆನ್ಲೈನ್ ತರಬೇತಿ ಪಡೆಯುತ್ತಿದ್ದಾರೆ. ತಂದೆಯ ಸಿನಿಮಾಗೆ ಸಾನ್ವಿಯವರು ಅತ್ಯತ್ತಮ ವಿಮರ್ಶಕಿ.. ತಂದೆಯ ಸಿನಿಮಾಗಳನ್ನ ವೀಕ್ಷಿಸಿ ಪ್ರಾಮಾಣಿಕವಾದ ಪ್ರತಿಕ್ರಿಯೆ ನೀಡುತ್ತಾರೆ. ಇತ್ತೀಚಿಗೆ ಸುದೀಪ್ ಅವರು ನಟಿಸಿದ ದಿ ವಿಲನ್ ಸಿನಿಮಾವನ್ನ ಕುಟುಂಬದ ಜೊತೆ ಸುದೀಪ್ ಅವರು ನೋಡಿದ್ದಾರೆ.. ಇನ್ನೂ ವಾಸುಕಿ ವೈಭವ್ ಅವರು ಸಾನ್ವಿಗೆ ಬೆಸ್ಟ್ ಪ್ರೇಂಡ್ ಎಂದು ಹೇಳಬಹುದು..