Advertisements

ಪುನೀತ್ ಅಪ್ಪಟ ಅಭಿಮಾನಿ ತಾಯಿಗೆ ಸಹಾಯ ಮಾಡಿ ಪ್ರಾಣ ಉಳಿಸಿದ ಸ್ಟಾರ್ ನಟ!

Cinema

ಪ್ರಿಯ ಸ್ನೇಹಿತರೆ ನಗುಮೊಗದ ಸರದಾರ, ಕನ್ನಡಭಿಮಾನಿಗಳ‌ ಪಾಲಿನ‌ ಅಪ್ಪು, ಅಪ್ಪಟ ಅಭಿಮಾನಿಗಳ‌ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ನಮ್ಮನ್ನೆಲ್ಲ ಅಗುಲಿ ಒಂದು ತಿಂಗಳಾಗಿದ್ದರು ಅವರ ಕುರಿತಾದ ವಿಷಯಗಳು ನಮ್ಮ ಕಿವಿಗೆ ಬೀಳುತ್ತಲೆ‌ ಇರ್ತವೆ. ಅವರ ನಗು ಮಾತು ಎಂದೆಂದಿಗೂ ನಮ್ಮ‌ ಮನೆ ಮನದಲ್ಲಿ ಹಚ್ಚ ಹಸಿರು. ಅವರು ಮಾಡಿದ ಸಹಾಯ, ಸಮಾಜ ಸೇವೆ ಎಲ್ಲವು ಎಲೆ‌ ಮರೆಯ ಕಾಯಿಯಂತೆ.. ಅವರಿಲ್ಲದ ಈ ಸಮಯವನ್ನು ನಂಬವುದು ಕೂಡ ಅಸಾಧ್ಯವಾದರು ವಾಸ್ತವತೆ ಸತ್ಯ.. ಇನ್ನು ಅಪ್ಪು ನಡೆಸಿಕೊಂಡ ಅದೆಷ್ಟೊ ಕೆಲಸಗಳನ್ನು ಅವರಿಂತಿರುವ ನಟರು ಒಬ್ಬೊಬ್ಬರೆ ಹೊಣೆಯನ್ನು ತಮ್ಮ‌ ಹೆಗಲಿಗೆರಿಸಿಕೊಳ್ಳುತ್ತಿದ್ದಾರೆ.

[widget id=”custom_html-3″]

Advertisements

1800 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇವೆಯ ಎಲ್ಲ‌ ‌ಖರ್ಚುಗಳನ್ನು ನೋಡಿಕೊಳ್ಳುತಿದ್ದ ಅಪ್ಪು ಈಗ ಅದರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ನಟ ವಿಶಾಲ, ಹಾಗೆ ಅವರ ಗೋ ಶಾಲೆಯ ಹೊಣೆ ಹೊತ್ತಿದ್ದು ಡಿ ಬಾಸ್ ದರ್ಶನ್ ಹೀಗೆ ಅಪ್ಪು ಮಾಡಿದ್ದ ಸಮಾಜ ಕಾರ್ಯಗಳ‌ ಹೊಣೆ ಹೊರುವ ಮೂಲಕ‌ ಸಹಾಯಕ್ಕೆ‌ ಮುಂದಾಗುತ್ತಿರುವುದು ಶ್ಲಾಘನೀಯ. ‌ಈಗ ಅದೇ ರೀತಿ‌ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ ಅವರು ಆ ಸಾಲಿನಲ್ಲಿದ್ದಾರೆ‌. ಕಿಚ್ಚ ಸುದೀಪ ಅವರು ಇದೀಗ ಅಪ್ಪು ಅಭಿಮಾನಿಗೆ ಸಹಾಯ ಮಾಡಿ ಮಾನವಿಯತೆ ಮೆರೆದಿದ್ದಾರೆ. ಅಪ್ಪು ಅಭಿಮಾನಿಯಾಗಿದ್ದ ಬೆನಕ‌ ಅವರಿಗೆ ರಾಜ್ ಕುಟುಂಬ‌ ಮೊದಲಿನಿಂದಲೂ ಸಹಾಯ ಮಾಡುತ್ತಿತ್ತು.

[widget id=”custom_html-3″]

ಇದೀಗ ಬೆನಕ ಅವರ ತಾಯಿಗೆ ರಸ್ತೆ ಅ’ಪಘಾ’ತವಾಗಿದ್ದು, ಚಿಕಿತ್ಸೆಗೆ ಹಣವಿಲ್ಲದಾಗ ಸುದೀಪ್ ಸಹಾಯ ಮಾಡಲು ಮುಂದಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರಿಗೆ ಬೆನಕ‌ ಅಪ್ಪಟ ಅಭಿಮಾನಿ. ಪುನೀತ್ ಯಾವಾಗ್ಲು ಬೆನಕ ಅವರ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರು ಆದರೆ ಈಗ ಅಪ್ಪು ನಮ್ಮ‌ ಮಧ್ಯ ಇಲ್ಲ. ಆದರೂ ಅಪ್ಪು ಅಭಿಮಾನಿಗೆ ಕಿಚ್ಚ ಸುದೀಪ ಚಾರಿಟೆಬಲ್‌ ಸೊಸೈಟಿ ಸಹಾಯ ಮಾಡಿದೆ. ಬೆನಕ‌ ಅವರ ತಾಯಿ ದಾಖಲಗಿರುವ ಆಸ್ಪತ್ರೆಗೆ ತೆರಳಿ ಅವರ ಚಿಕಿತ್ಸೆ ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ಈ ಸೂಸೈಟಿ ಹೊತ್ತಿದೆ. ಅಂತು ಅಪ್ಪು ಅಭಿಮಾನಿಗೆ ಅವರಿಲ್ಲದ‌ ಕೊರಗನ್ನು ಮರೆಮಾಡಿಸಿದ್ದು ಕಿಚ್ಚ ಸುದೀಪ್ ಚಾರಿಟೆಬಲ್ ಸೂಸೈಟಿಗೆ ನಮನ..

[widget id=”custom_html-3″]