Advertisements

ಸುಧಾಮೂರ್ತಿ ಅಮ್ಮ ಅವರ ಮನೆ ಹೇಗಿದೆ ಗೊತ್ತಾ? ನಿಜವಾದ ಅರಮನೆ! ಸಂಪಾದನೆ ಮಾಡಿರುವ ಅಸ್ತಿ ಎಷ್ಟು ಗೊತ್ತಾ?

News

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅಮ್ಮ ಈ ಹೆಸರನ್ನು ಕರ್ನಾಟಕದಲ್ಲಿ ಕೇಳದವರಿಲ್ಲ ಇವರು ಬರಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲೆ ತಮ್ಮ ಸಹಾಯ ಗುಣದ ಮೂಲಕ ಗುರುತಿಸಿಕೊಂಡಿದ್ದಾರೆ. ಹಾಗಾದರೆ ಇವರ ಮನೆ ಹೇಗಿದೆ ಮತ್ತು ಇವರು ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟು ನೋಡಿ ಸುಧಾಮೂರ್ತಿ ಅವರು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರೂ ಕೂಡ ತಮ್ಮ ಇಷ್ಟದಂತೆ ಬರಹಗಾರ್ತಿ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪದವಿಯ ವಿದ್ಯಾರ್ಥಿಗಳಿಗೆ ಬೋಧನೆ ಕೂಡ ಮಾಡಿದ್ದಾರೆ. ಇವರು ದೇಶ, ವಿದೇಶಗಳಿಂದ ತಮ್ಮ ಸಾಧನೆಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಗಳಿಸಿದ್ದಾರೆ.

[widget id=”custom_html-3″]

Advertisements

ಅದರಲ್ಲೂ ಪ್ರಮುಖವಾಗಿ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ. ಸುಧಾಮೂರ್ತಿ ಅಮ್ಮ ಮತ್ತು ನಾರಾಯಣ ಮೂರ್ತಿಯವರು ಸೇರಿ ಇನ್ಫೋಸಿಸ್ ಫೌಂಡೇಶನ್ ಅನ್ನುವ ಚಾರಿಟಬಲ್ ಟ್ರಸ್ಟ್ ನ್ನು ಶುರು ಮಾಡಿದರು. ಆ ಟ್ರಸ್ಟ್ ಮೂಲಕ ಇದುವರೆಗೂ ಲಕ್ಷಾಂತರ ಜನಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ ದೊಡ್ಡ ಪ್ರಮಾಣದಲ್ಲಿ ಅವರು ಸಹಾಯ ಮಾಡಿದ್ದರು. ಬಟ್ಟೆ ಹಾಗು ಆಹಾರವನ್ನು ಪೂರೈಕೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಪ್ರವಾಹಕ್ಕೆ ತುತ್ತಾಗಿದ್ದ ಜಾಗದಲ್ಲಿ 2300 ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಶಾಲೆಗಳಿಗೆ 70 ಸಾವಿರಕ್ಕೂ ಹೆಚ್ಚು ಗ್ರಂಥಾಲಯಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 16000 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ.

[widget id=”custom_html-3″]

ಸುಧಾಮೂರ್ತಿ ಅವರು ಇದುವರೆಗೂ ರಾಜ್ಯ ಮತ್ತು ದೇಶದ ಎಲ್ಲ ರೀತಿಯ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಇತ್ತೀಚೆಗೆ ನಮ್ಮ ದೇಶದಲ್ಲಿ ವಕ್ಕರಿಸಿರುವ ಮಹಾಮಾರಿ ಕಾಯಿಲೆ ನಿಯಂತ್ರಣಕ್ಕೆ ನೂರು ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಸುಧಾಮೂರ್ತಿ ಅಮ್ಮ ಅವರು ಒಟ್ಟಾರೆಯಾಗಿ 775 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಸುಧಾಮೂರ್ತಿಯವರ ಬಳಿ ಕೋಟ್ಯಾಂತರ ರೂಪಾಯಿ ಹಣ ಇದ್ದರೂ ಕೂಡ ಅವರು ಎಂದಿಗೂ ದುಂದುವೆಚ್ಚ ಮಾಡಿದವರಲ್ಲ. ಅವರ ಬಳಿ ಕೆಲವೇ ಕೆಲವು ಸೀರೆಗಳಿವೆ ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು ಅವರಿಗೆ ಎಂದಿಗೂ ಇಷ್ಟ ವಿಲ್ಲವಂತೆ..

[widget id=”custom_html-3″]