Advertisements

ಬ್ರಿಟನ್ ದೇಶದ ಮುಂದಿನ ಪ್ರಧಾನಿಯಾಗಲಿದ್ದಾರೆ ಸುಧಾಮೂರ್ತಿಯವರ ಅಳಿಯ ?

News

ನಮಸ್ತೇ ಸ್ನೇಹಿತರೇ, ರಾಜ್ಯದ ಜನಗಳು ಕಷ್ಟದಲ್ಲಿದ್ದಾಗ ಮೊದಲಿಗರಾಗಿ ಮುಂದೆ ಬಂದು ನಿಲ್ಲುವ ಕೊಡುಗೈ ದಾನಿ, ಸಾವಿರಾರು ಕೋಟಿಗಳ ಯಜಮಾನಿಯಾಗಿದ್ದರು ಇಂದಿಗೂ ಸರಳ ಜೀವನ ನಡೆಸುತ್ತಿರುವ ಐಟಿ ದಿಗ್ಗಜ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾಗಿರುವ ಸುಧಾಮೂರ್ತಿಯವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇನ್ನು NR ನಾರಾಯಣ ಮೂರ್ತಿ ಸುಧಾ ಮೂರ್ತಿ ದಂಪತಿಗೆ ಇಬ್ಬರು ಮಕ್ಕಳಿದ್ದು ಮಗ ರೋಹನ್ ಮೂರ್ತಿ ಹಾಗೂ ಮಗಳು ಅಕ್ಷತಾ ಮೂರ್ತಿ ಎಂದು. ನಾರಾಯಣ ಮೂರ್ತಿ ದಂಪತಿಯ ಮಗಳಾದ ಅಕ್ಷತಾ ಮೂರ್ತಿ ಬ್ರಿಟನ್ ನಲ್ಲಿ ನೆಲಸಿದ್ದು ರಿಷಿ ಸುನಕ್ ಎಂಬುವವರನ್ನ ಮದುವೆಯಾಗಿದ್ದಾರೆ.

Advertisements

ಬ್ರಿಟನ್ ನಲ್ಲೆ ಹುಟ್ಟಿ ಬೆಳೆದಿರುವ ಸುನಕ್ ಈಗ ಬ್ರಿಟಿಷ್ ಸರ್ಕಾರದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೊ’ರೋನಾ ಸೋಂಕಿನ ಬಳಿಕ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕಾರ್ಯವೈಖರಿಯಿಂದ ಅವರ ಜನಪ್ರಿಯತೆ ಬಿದ್ದು ಹೋಗಿದೆ. ಅವರು ಸೋಂಕಿನ ಅವಧಿಯಲ್ಲಿ ತೆಗೆದುಕೊಂಡು ನಿರ್ಧಾರಗಳಿಂದ ತುಂಬಾ ಟೀಕೆ ಎದುರಿಸುತ್ತಿದ್ದಾರೆ. ಆದರೆ ಇದೆ ಸಮಯದಲ್ಲಿ ಹಣಕಾಸು ಸಚಿವರಾಗಿ ನಾರಾಯಣ ಮೂರ್ತಿ ಅಳಿಯ ಸುನಕ್ ಅವರ ಕಾರ್ಯವೈಖರಿಯಿಂದಾಗಿ ತುಂಬಾ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೋಂಕಿನ ಸಮಯದಲ್ಲಿ ತಮ್ಮ ಕೆಲಸ ಕಳೆದುಕೊಂಡ ಎಷ್ಟೋ ಜನರಿಗೆ ಭಾರೀ ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡುವ ಮೂಲಕ ಮೆಚ್ಚುಗೆಗೆಪಾತ್ರರಾಗಿದ್ದಾರೆ ಸುಧಾಮೂರ್ತಿಯವರ ಅಳಿಯ. ಇನ್ನು ನ್ಯೂಯಾರ್ಕ್ ಟೈಮ್ಸ್ ಕೊಟ್ಟಿರುವ ವರದಿ ಪ್ರಕಾರ ಸುನಕ್ ಮುಂದಿನ ದಿನಗಳಲ್ಲಿ ಬ್ರಿಟನ್ ನ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ. ಇನ್ನು ಬೋರಿಸ್ ಜಾನ್ಸನ್ ತಾನು ಪ್ರಧಾನಿಯಾಗಿದ್ದರೂ ಅವರು ಮಾಡಲಾರದ ಕೆಲಸಗಳನ್ನ ಸುನಕ್ ಮಾಡಿ ತೋರಿಸುತ್ತಿದ್ದು, ಇದರಿಂದ ಸುನಕ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಲುವಿನಲ್ಲಿ ಸುನಕ್ ಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳು ಇವೆ ಎಂದು ಹೇಳಲಾಗಿದ್ದು ಮುಂದಿನ ಬ್ರಿಟನ್ ಪ್ರಧಾನಿ ಇವರೇ ಎಂದು ಅಲ್ಲಿನ ಸಮೀಕ್ಷೆಗಳಿಂದ ತಿಳಿದು ಬಂದಿದೆ.