Advertisements

ತೊಟ್ಟಿದ್ದ ಬಟ್ಟೆ ನೋಡಿ ಸುಧಾಮೂರ್ತಿಯವರಿಗೆ ಅವಮಾನ ಮಾಡಿದ ಯುವತಿ ! ಬಳಿಕ ನಡೆದಿದ್ದೇನು ಗೊತ್ತಾ ?

Kannada Mahiti

ಜೀವನದಲ್ಲಿ ಒಮ್ಮೆಯಾದರೂ ನೀವು ಅವಮಾನವನ್ನು ಅನುಭವಿಸುತ್ತೀರಿ. ಅದು ನಿಮ್ಮ ಸಂಬಂಧಿಗಳಿಂದ ಇರಬಹುದು ಅಥವಾ ಸ್ನೇಹಿತರು, ಸಹದ್ಯೋಗಿಗಳ, ಮೇಲಾಧಿಕಾರಿಗಳು ಅಪರಿಚಿತರು ಇರಬಹುದು. ಆಗ ನೀವು ಅವರಿಗೆ ಹೇಗೆ ಪ್ರತಿಕ್ರಿಯೆ ನೀಡಿದಿರಿ? ಆ ಅವಮಾನದಿಂದ ನಿಮ್ಮ ಮನಸಿನ ಮೇಲೆ ಯಾವ ಪರಿಣಾಮ ಬೀರಿತು? ನೆನಪಿದೆಯೇ?..ಯಾರಾದರೂ ನಮಗೆ ಅವಮಾನ ಮಾಡಿದಾಗ ನಾವು ಏನು ಮಾಡಬೇಕು ಎಂದು ತಿಳಿದುಕೊಳ್ಳುವ ಮೊದಲು ಈ ಕತೆ ಕೇಳಿ..ಒಮ್ಮೆ ಏರ್ಪೋರ್ಟ್ ನಲ್ಲಿ ವಿಐಪಿಗಳು ನಿಲ್ಲುವ ಸರತಿ ಸಾಲಿನಲ್ಲಿ ಒಂದು ಸಾಧಾರಣ ಸೀರೆ ಉಟ್ಟು ಕೈಯಲ್ಲಿ ಒಂದು ಕೈ ಚೀಲ ಹಿಡಿದು ವಯಸ್ಸಾದ ಸಾಮಾನ್ಯ ಮಹಿಳೆಯೊಬ್ಬರು ನಿಂತಿರುತ್ತಾರೆ. ಇದನ್ನು ಗಮನಿಸಿದ ಒಬ್ಬ ವಿದ್ಯಾವಂತ ಯುವತಿ ನೋಡಿ ಈ ಸರತಿ ಸಾಲು ನಿಮಗಲ್ಲ, ಇದು ವಿಐಪಿ ಗಳಿಗಾಗಿ. ನಿಮ್ಮಂಥ ಸಾಮಾನ್ಯ ಜನರು ಬೇರೆಯ ಸಾಲಿನಲ್ಲಿ ನಿಂತುಕೊಳ್ಳಬೇಕು ಎಂದು ಹೇಳುತ್ತಾಳೆ.

Advertisements

ಆಗ ಆ ಹೆಂಗಸು ಏನೂ ಮಾತನಾಡದೆ ಮುಗುಳ್ನಕ್ಕು ಸುಮ್ಮನಾಗುತ್ತಾರೆ. ನಂತರ ಆ ಯುವತಿ ಕಾರ್ಯಕ್ರಮ ಒಂದರಲ್ಲಿ ವಿದ್ಯಾರ್ಥಿನಿಯಾಗಿ ಭಾಗವಹಿಸುತ್ತಾಳೆ. ಆ ಕಾರ್ಯಕ್ರಮಕ್ಕೆ ಭೋಧನೆ ಮಾಡಲು ಮುಖ್ಯ ಅಥಿತಿಗಳಾಗಿ ಒಬ್ಬ ದೊಡ್ಡ ವ್ಯಕ್ತಿ ಆಗಮಿಸುತ್ತಾರೆ. ಅವರನ್ನು ಕಂಡು ಈ ಯುವತಿ ದಂಗಾಗುತ್ತಾಳೆ. ಏಕೆಂದರೆ ಆ ಮುಖ್ಯ ಅತಿಥಿ ಬೇರೆ ಯಾರೂ ಅಲ್ಲ ವಿಐಪಿ ಸಾಲಿನಲ್ಲಿ ಸರಳವಾದ ಉಡುಗೆ ಕೈಯಲ್ಲಿ ಕೈ ಚೀಲ ಹಿಡಿದು ನಿಂತಿದ್ದ ಆ ಹೆಂಗಸು. ಮತ್ತು ಅವರು ಬೇರೆಯಾರು ಅಲ್ಲ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸುಧಾ ಮೂರ್ತಿ ಅಮ್ಮನವರು. ಆ ಯುವತಿ ಎಲ್ಲರ ಎದುರು ಸುಧಾ ಮೂರ್ತಿಯವರಿಗೆ ಅವಮಾನ ಮಾಡಿದರೂ ಅವರು ಆಕೆಗೆ ಮುಗುಳ್ನಗೆ ಬಿಟ್ಟು ಬೇರೆ ಏನೂ ಪ್ರತ್ಯುತ್ತರ ನೀಡಿರುವುದಿಲ್ಲ. ನಂತರ ಯುವತಿಗೆ ತನ್ನ ತಪ್ಪಿನ ಅರಿವಾಗಿ ಸುಧಾ ಮೂರ್ತಿಯವರನ್ನು ಕ್ಷಮೆ ಯಾಚಿಸಿಸುತ್ತಾಳೆ. ಈ ಘಟನೆಯಿಂದ ನಮಗೆ ತಿಳಿಯಬೇಕಾದ ವಿಷಯ ಏನೆಂದರೆ ಕೆಲವೊಮ್ಮೆ ನಮಗೆ ಅವಮಾನ ಆದರೂ ನಾವು ಅವರಿಗೆ ಪ್ರತಿ ಕ್ರಿಯೆ ನೀಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅವರಿಗೆ ನಮ್ಮ ಬಗ್ಗೆ ತಿಳಿದಿರುವುದಿಲ್ಲ.

ತಿಳುವಳಿಕೆಯ ಕೊರತೆಯಿಂದಾಗಿ ಅವರು ನಮಗೆ ಅಪಮಾನ ಮಾಡಿರುತ್ತಾರೆ. ಕೆಲವೊಮ್ಮೆ ಜನರು ನಮಗೆ ಅಹಂಕಾರ ಗರ್ವದಿಂದ ಅವಮಾನ ಮಾಡುತ್ತಾರೆ. ಆಗ ತಕ್ಷಣಕ್ಕೆ ನಮಗೆ ಪ್ರತ್ಯುತ್ತರ ಕೊಡಲು ಸಾಧ್ಯವಾಗುವುದಿಲ್ಲ. ಸಮಯ ಬಂದಾಗ ಮಾತ್ರವೇ ನಮ್ಮ ಸಾಧನೆ ಮೂಲಕ ಅವರಿಗೆ ಉತ್ತರ ಕೊಡಬೇಕು. ಅವಮಾನ ಮಾಡಿದವರೇ ಸನ್ಮಾನ ಮಾಡುವ ಕಾಲ ಬಂದೇ ಬರುತ್ತದೆ. ಆದರೆ ಕೆಲವರು ಬೇರೆಯರಿಗೆ ಅವಮಾನ ಮಾಡುವುದನ್ನೇ ತಮ್ಮ ಕಾಯಕ ಮಾಡಿಕೊಂಡಿರುತ್ತಾರೆ ಅಂತವರಿಗೆ ಅದೇ ಜಾಗದಲ್ಲಿ ಸರಿಯಾಗಿ ಮಾತಿನ ಮೂಲಕ ಚಾಟಿ ಬೀಸ ಬೇಕಾಗುತ್ತದೆ. ಆದರೆ ಬೇರೆಯವರ ಅಭಿಪ್ರಾಯ ನಮ್ಮ ವ್ಯಕ್ತಿತ್ವ ವ್ಯನ್ನು ನಿರ್ಧರಿಸುವುದಿಲ್ಲ. ಅನೆ ನಡೆಯುವಾಗ ನಾಯಿ ಬೊಗಳುತ್ತವೆ. ಇದರಿಂದ ಅನೆಯ ಘನತೆಗೆ ಧಕ್ಕೆ ಉಂಟಾಗುವುದಿಲ್ಲ. ಇದನ್ನು ಅರಿತು ಅವಮಾನಗಳು ಬೆಲೆ ಕೊಡದೆ ಇರುವುದೇ ಒಳಿತು.