Advertisements

ಸುಧಾಮೂರ್ತಿ ಅವರ 2 ಮಕ್ಕಳು, ಮೊಮ್ಮಕ್ಕಳು ಈಗ ಹೇಗಿದ್ದಾರೆ! ಮಾಡುತ್ತಿರುವ ಕೆಲಸ ಏನು ಗೊತ್ತಾ? ಅಳಿಯ ಹಣಕಾಸು ಸಚೀವ..

Inspire Kannada Mahiti

ನಮಸ್ತೆ ಸ್ನೇಹಿತರೆ, ಸುಧಾಮೂರ್ತಿ ಅಮ್ಮನವರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲೂ ಕೂಡ ಚಿರ ಪರಿಚಿತರು.. ಒಂದು ರೀತಿಯಲ್ಲಿ ಇಂದಿನ ಮದರ್ ತೆರೇಸಾ ಅಂತಲೇ ಕರೆಯಬಹುದು. ಈಗಿನ ಯುವ ಜನತೆಗೆ ರೋಲ್ ಮಾಡೆಲ್ ಆಗಿರುವ ಇವರನ್ನ ಕರ್ನಾಟಕದ ಜನತೆ ಪ್ರೀತಿಯಿಂದ ಸುಧಾ ಅಮ್ಮ ಅಂತ ಕರೆಯುತ್ತಾರೆ.. ಹೆಸರಿಗೆ ತಕ್ಕಂತೆ ಮಾತೃ ಸ್ವರೂಪಿಯೇ ಹೌದು. ಬಡವರಿಂದ ಹಿಡಿದು ಭಿಕ್ಷುಕರು, ದೇವ ದಾಸಿಯವರವರೆಗೂ ಇವರ ಸಹಾಯ ಅಸ್ತ ಸದಾ ಚಾಚಿಕೊಂಡಿರುತ್ತದೆ.. ಇನ್ಫೋಸಿಸ್ ಫೌಂಡೇಶನ್ ಮೂಲಕ ಭಾರತದ ಯಾವುದೇ ಭಾಗದಲ್ಲಿ ಪ್ರಾಕೃತಿಕ ವಿಕೋ’ಪಗಳು ಸಂಭವಿಸಿದರೆ ಅಲ್ಲಿಗೆ ಸುಧಾಮ್ಮ ಸಹಾಯದೊಂದಿಗೆ ಹಾಜರಾಗಿ ಬಿಡ್ತಾರೆ.

Advertisements

ಸಜ್ಜನಿಕೆಯೆ ಸಾಕಾರ ಮೂರ್ತಿ, ಮಾತೃ ಹೃದಯಿ ಮತ್ತು ಅಷ್ಟೇ ಸರಳ ಉಡುಗೆ ತೊಡುಗೆನ್ನು ತೊಡುವ ಸುಧಾಮ್ಮ ಕನ್ನಡಿಗರ ಕಣ್ಮಣಿ ಅಂತಲೇ ಹೇಳಬಹುದು.. ಇವರ ಇಬ್ಬರು ಮಕ್ಕಳು ಮತ್ತು ಮೊಮ್ಮಕ್ಕಳು ಹೇಗಿದ್ದಾರೆ ಎನ್ನುವುದನ್ನು ನೋಡೊಣ. ಸುಧಾಮೂರ್ತಿ ಅಮ್ಮ ಅವರು 1950 ರಲ್ಲಿ ಹಾವೇರಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಈಗ ಇವರಿಗೆ 70 ವರ್ಷ ವಯಸ್ಸಾಗಿದೆ.. ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರು ಮೊದಲು ಟೆಲ್ಕೊ ಕಂಪನಿಯಲ್ಲಿ ಬೇಟಿಯಾದರು. ಇವರಿಬ್ಬರಿಗೆ ರೋಹನ್ ಮತ್ತು ಅಕ್ಷತಾ ಮೂರ್ತಿ ಎನ್ನುವ ಇಬ್ಬರು ಮಕ್ಕಳಿದ್ದಾರೆ.. ರೋಹನ್ ಅವರು ಪಿ ಎಚ್ ಡಿ ಮಾಡಿದ್ದು ಬರೋಬ್ಬರಿ 3500 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ರೋಹನ್ ಮೂರ್ತಿಯವರು 2011 ರಲ್ಲಿ TVS ಕಂಪನಿಯ ಓನರ್ ಮಗಳಾದ ಲಕ್ಷ್ಮಿ ವೀಣು ಅವರನ್ನ ಮದುವೆಯಾಗಿದ್ದರು..

ಆದರೆ 2015 ರಲ್ಲಿ ಪರಸ್ಪರ ಒಪ್ಪಿಗೆಯಿಂದ ಡೈವರ್ಸ್ ಪಡೆದಿದ್ದಾರೆ. ಈಗ 2019 ರಲ್ಲಿ ಅಪರ್ಣ ಕೃಷ್ಣನ್ ಎನ್ನುವವರನ್ನ ರೋಹನ್ ಮದುವೆ ಆಗಿದ್ದಾರೆ.. ಸುಧಾಮೂರ್ತಿ ಅಮ್ಮನವರ ಮಗಳ ಹೆಸರು ಅಕ್ಷತಾ ಮೂರ್ತಿ. ಇವರ ಗಂಡ ರಿಶೀದ್ ಸುನಾಕರ್. ಇವರು ಬ್ರಿಟನ್ನಿನ ಹಣಕಾಸು ಸಚೀವರಾಗಿ ಕೆಲಸ ಮಾಡುತ್ತಿದ್ದಾರೆ.. ಇವರಿಬ್ಬರು ಅಮೇರಿಕಾದಲ್ಲಿ ಓದುತ್ತಿದ್ದಾಗ ಪ್ರೀತಿ ಮಾಡಿದ್ದರು. ಮತ್ತೆ ಮನೆಯಲ್ಲಿ ತನ್ನ ಪ್ರೀತಿಯ ಬಗ್ಗೆ ತಿಳಿಸಿ ತಂದೆ ತಾಯಿಯ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದಾರೆ.. ಈ ಜೋಡಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಸಧ್ಯಕ್ಕೆ ಸುಧಾ ಮೂರ್ತಿ ಅಮ್ಮನವರು ಇನ್ಫೋಸಿಸ್ ಫೌಂಡೇಶನ್ ಎನ್ನುವ ಎಂಜಿಒ ಓಪನ್ ಮಾಡಿಕೊಂಡು ವಿದ್ಯಾಭ್ಯಾಸ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ ಹಾಗು ಕಲಿಕೆ ಉತ್ತೇಜನವನ್ನ ನೀಡುತ್ತಿದ್ದಾರೆ. ಸುಧಾಮೂರ್ತಿ ಅಮ್ಮನವರ ಬಗ್ಗೆ ನೀವ್ ಏನ್ ಹೇಳಲು ಇಷ್ಟಪಡುತ್ತೀರಾ..