Advertisements

ಅಪ್ಪು ಬಗ್ಗೆ ಕೆಲವು ಕುತೂಹಲ ಮಾಹಿತಿ ಹಂಚಿಕೊಂಡ ಸುಮಲತಾ.. ಏನು ಹೇಳಿದ್ರು ಗೊತ್ತೇ?

Cinema

ದೊಡ್ಮನೆಯ ದ್ರುವ ನಕ್ಷತ್ರ ನಮ್ಮನ್ನ ಅಗಲಿ ಇಷ್ಟು ದಿನ ಕಳೆದ್ರೂ ಸಹ ಆ ಸೂತಕದ ಭಾವ ಇನ್ನೂ ಮನಸ್ಸಿಂದ ಮರೆಯಾಗಿಲ್ಲ, ಚಿಕ್ಕ ವಯಸ್ಸಿಂದ ನಾವು ನೋಡಿಕೊಂಡು ಬಂದ ಅಪ್ಪು ಎಲ್ಲು ಹೋಗಿಲ್ಲ, ಇಲ್ಲೇ ಎಲ್ಲೋ ನಮ್ಮ ಜೊತೆಯೇ ಜೀವಂತವಾಗಿದ್ದಾರೆ ಎಂಬ ಭಾವ ಇನ್ನೂ ಕೂಡ ಮರೆಯಾಗಿಲ್ಲ. ಪುನೀತ್ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶ-ವಿದೇಶಗಳಲ್ಲಿ ಸಿಕ್ಕಾಪಟ್ಟೆ ಪೇಮಸ್.. ಪುನೀತ್ ಅಗಲಿಕೆ ಎಲ್ಲರಲ್ಲೂ ನೋವು ತಂದಿದೆ. ಈ ಬಗ್ಗೆ ಚಿತ್ರಂಗವೇ ದುಖಃ ವ್ಯಕ್ತಪಡಿಸಿತ್ತು. ಶೋಕ ಸಾಗರದಲ್ಲಿ ಮುಳುಗಿತ್ತು.

[widget id=”custom_html-3″]

Advertisements

[widget id=”custom_html-3″]

ಅಪ್ಪು ನಮನ ಕಾರ್ಯಕ್ರಮ ಮಾಡಿದರೂ, ಮನಸ್ಸು ಮಾತ್ರ ಅಪ್ಪುವನ್ನು ಇಂದು ನೆನಸಿಕೊಳ್ಳುತ್ತಿದೆ. ಸದ್ಯ ಅಪ್ಪುವನ್ನು ನೆನಸಿಕೊಂಡು ಸಂಸದೆ ಸುಮಲತಾ ಅಂಬರೀಶ್ ಆಡಿರುವ ಭಾವನಾತ್ಮಕ ಮಾತುಗಳು ಇಂತಿವೆ. ದೊಡ್ಮನೆ ಕುಟುಂಬ ಮತ್ತು ರೆಬಲ್​ ಸ್ಟಾರ್​ ಅಂಬರೀಶ್ ಅವರ ಕುಟುಂಬದ ನಡುವೆ ಉತ್ತಮ ಒಡನಾಟವಿತ್ತು. ರಾಜ್​ಕುಮಾರ್​ ಅವರ ಚಿತ್ರದಲ್ಲಿ ಸುಮಲತಾ ಆಭಿನಯಿಸುತ್ತಿದ್ದಾಗ 4 ವರ್ಷದ ಅಪ್ಪು ಶೂಟಿಂಗ್ ಸೆಟ್​ಗೆ ಬಂದು ನನ್ನ ಜೊತೆ ಆತ್ಮೀಯವಾಗಿರುತ್ತಿದ್ರು. ಅಲ್ಲದೇ ಕಣ್ಣಮುಚ್ಚಾಲೇ ಆಟವಾಡುತ್ತಿದ್ರು ಅಂತಾ ಸುಮಲತಾ ಹೇಳಿಕೊಂಡಿದ್ದಾರೆ. ಇನ್ನು ಚಿಕ್ಕ ವಯಸಿನಲ್ಲಿ ನಾನು ಸುಮಲತಾ ಅವರನ್ನೇ ಮದುವೆಯಾಗುತ್ತಿನಿ ಅಂತ ಪುನೀತ್​ ಹೇಳುತ್ತಿದ್ದ ಎಂಬುದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.

[widget id=”custom_html-3″]

[widget id=”custom_html-3″]

ಅಪ್ಪು ನಟನೆಯ ‘ದೊಡ್ಮನೆ ಹುಡುಗ’ ಚಿತ್ರದಲ್ಲಿ ಅಂಬಿ ಮತ್ತು ಸುಮಲತಾ ಪುನೀತ್​ ಅವರ ಜೊತೆ ಅಭಿನಯಿಸಿದ್ರು. ಇದೀಗ ಸುಮಲತಾ ಅವರು ‘ದೊಡ್ಮನೆ ಹುಡುಗ’ ಚಿತ್ರದ ಪ್ರಮೋಷನ್​ ಇವೆಂಟ್​ ವೇಳೆ ಪುನೀತ್​ ಮತ್ತು ಅಂಬಿ ಒಟ್ಟಿಗೆ ಸೆಲ್ಫಿ ಕ್ಲಿಕಿಸಿಕೊಂಡ ಪೋಟೋವನ್ನು ಹಂಚಿಕೊಂಡು ” ಅಪ್ಪು -ಅಂಬಿ ನೀವಿಬ್ಬರೂ ನಮ್ಮ ಜೊತೆಗಿಲ್ಲ ಎಂಬದನ್ನು ಒಪ್ಪಿಕೊಳ್ಳಲು ನನ್ನ ಹೃದಯದಿಂದ ಸಾಧ್ಯವಾಗುತ್ತಿಲ್ಲ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.