Advertisements

ಸು‌ಮಲತಾ ಅವರ ತಾಯಿ ಯಾರು ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಸುಮಲತಾ ಅಂಬರೀಶ್.. 80, 90 ರ ದಶಕದ ದಕ್ಷಿಣ ಭಾರತದ ಸಿನಿಮಾ ರಂಗದ ಸುಂದರ ಹಾಗೂ ಹೆಸರಾಂತ ನಟಿಯರಲ್ಲಿ ಇವರು ಕೂಡ ಒಬ್ಬರು. ಕನ್ನಡ ಚಿತ್ರರಂಗದ ಖ್ಯಾತ ನಟ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಪ್ರೀತಿಸಿ ಮದುವೆಯಾದರು. ಸುಮಲತಾ ಅಂಬರೀಶ್ ಅವರು ಹಿಂದಿ ಹಾಗು ದಕ್ಷಿಣ ಭಾರತದ ಎಲ್ಲಾ ಭಾಷೆ ಚಿತ್ರಗಳಲ್ಲಿ ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿ ನಟಿಸಿದ್ದಾರೆ.. ಇವರು ನಟಿಸಿದ ಕನ್ನಡದ ಮೊಟ್ಟಮೊದಲ ಚಿತ್ರ ರವಿಚಂದ್ರ. ಡಾ.ರಾಜ್ ಕುಮರ್ ನಾಯಕತ್ವದಲ್ಲಿ ಮೂಡಿ ಬಂದ ಈ ಚಿತ್ರ 1980 ರಲ್ಲಿ ತೆರೆಕಂಡಿತ್ತು.

Advertisements

ನಂತರ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಸುಮಲತಾ ಅಂಬರೀಶ್ ಅವರು ನಟಿಸಿದ್ದಾರೆ.. ಸುಮಲತಾ ಅಂಬರೀಶ್ ಅವರು 1963 ರಲ್ಲಿ ಚೆನ್ನೈನಲ್ಲಿ ಜನಿಸಿದರು. ಇವರು ತಮಿಳುನಾಡಿನಲ್ಲಿ ಹುಟ್ಟಿದರು.. ಬೆಳೆದದ್ದು, ವಿಧ್ಯಾಭ್ಯಾಸ ಮಾಡಿದ್ದು ಮಾತ್ರ ಮುಂಬೈ ಹಾಗು ಆಂಧ್ರಪ್ರದೇಶದಲ್ಲಿ. ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಸಿನಿಮಾ ಹಾಗೂ ರಾಜಕೀಯದಲ್ಲಿ ಸಂಪೂರ್ಣ ಬೆಂಬಲ ನೀಡುತ್ತಿದ್ದರು ಸುಮಲತಾ ಅವರು.. ನಟಿಯಾಗಿ ದಕ್ಷಿಣ ಭಾರತ ಸಿನಿಮಾದಲ್ಲಿ ತುಂಬಾ ಖ್ಯಾತಿ ಪಡೆದಿದ್ದ ಸುಮಲತಾ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡ ನಂತರ ಜನರ ಹೊ’ತ್ತಾಯದ ಮೇರೆಗೆ ರಾಜಕೀಯಕ್ಕೆ ಕಾಲಿಟ್ಟರು..

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡು.. ಲೋಕಸಭಾ ಸದಸ್ಯೆರಾದರು. ಇನ್ನೂ ಇವರ ಬೆನ್ನೆಲುಬಾಗಿ ಸುಮಲತಾ ಅಂಬರೀಶ್ ಅವರ ಮಗ ಅಭಿಶೇಕ್ ಅಂಬರೀಶ್ ಸದಾ ಜೊತೆಯಾಗಿರುತ್ತಾರೆ. ಇನ್ನೂ ಸುಮಲತಾ ಅಂಬರೀಶ್ ಅವರು ಮದನ್ ಮೋಹನ ಹಾಗೂ ತಾಯಿ ರೂಪ ದಂಪತಿಯ ನಾಲ್ಕನೇ ಮಗಳು.. ಇನ್ನೂ ಸುಮಲತಾ ಅವರ ತಾಯಿಯವರು ಕೂಡ ಥೇಟ್ ಸುಮಲತಾ ಅವರಂತೆಯೇ ಇರುವುದನ್ನು ನೀವು ಈ ಪೊಟೊದಲ್ಲಿ ಗಮನಿಸಬಹುದು.