Advertisements

90 ರ ದಶಕದಲ್ಲಿ ಮಿಂಚಿದ ನಟಿ ಸುಮನ್ ನಗರ್ಕರ್ ಈಗ ಎಲ್ಲಿದ್ದಾರೆ.. ಮಾಡುವ ಕೆಲಸ ಏನು ಗೊತ್ತಾ?

Cinema

ಬೆಳದಿಂಗಳ ಬಾಲೆ ಸಿನಿಮಾದ ನಟಿ ಸುಮನ್ ನಗರ್ಕರ್ ಈಗೇನು ಮಾಡ್ತಿದ್ದಾರೆ ಗೊತ್ತಾ? ಸುಮನ್ ಅವರ ಗಂಡ ಇವರೇ ನೋಡಿ..
ಸುಮನ್ ನಗರ್ಕರ್ ಅಂದ ತಕ್ಷಣ ಬೆಳೆದಿಂಗಳ ಬಾಲೆ ಸಿನಿಮಾ ನೆನಪಿಗೆ ಬರುತ್ತದೆ. ಕನ್ನಡದ ಹೆಸರಾಂತ ಕಲಾವಿದರಲ್ಲಿ ಹಿರಿ ನಟಿಯರಲ್ಲಿ ಸುಮನ್ ನಗರ್ಕರ್ ಅವರು ಸಹ ಒಬ್ಬರು. ಇವರು ರಾಘವೇಂದ್ರ ರಾಜಕುಮಾರ್ ಅವರ ಕಲ್ಯಾಣ ಮಂಟಪ ಅನ್ನೋ ಸಿನಿಮಾದ ಮುಖೇನ ಕನ್ನಡ ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಸುಮನ್ ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ಗುರುತಿಸಿಕೊಂಡಿದ್ದು ನಿಷ್ಕರ್ಷ ಸಿನಿಮಾದ ಮುಖೇನ. ಎಸ್ ಸಾಹಸಸಿಂಹ ವಿಷ್ಣುವಿರ್ಧನ್ ಅವರ ಅಭಿನಯದ, ಸುನಿಲ್ ಕುಮಾರ್ ದೇಸಾಯಿಯವರು ಆಕ್ಷನ್ ಕ’ಟ್ ಹೇಳಿದ ನಿಷ್ಕರ್ಷ ಸಿನಿಮಾದಲ್ಲಿ ಫುಲ್ ಟೈಮ್ ಹಿರೋಯಿನ್ ಆಗಿ ಕಾಣಿಸಿಕೊಂಡ್ರು.

[widget id=”custom_html-3″]

Advertisements

ಗಾಂಧಿನಗರದಲ್ಲಿ ನಿಷ್ಕರ್ಷ ಸಿನಿಮಾದ ಬಳಿಕ ಸುಮನ್ ಅವರ ಛಾಪೇ ಬದಲಾಯಿತು. ಅವರ ಬ್ಯುಟಿಫುಲ್ ಪರ್ಫಾಮೆನ್ಸ್ಗೆ ಸಾಕಷ್ಟು ಸಿನಿಮಾಗಳು ಸಹ ಸುಮನ್ ಅವರನ್ನು ಹುಡುಕಿಕೊಂಡು ಬಂತು. ನಂತರ ಹೂ ಮಳೆ, ಅಮ್ಮವರ ಗಂಡ, ಹೀಗೇ ಸಾಕಷ್ಟು ಸಿನಿಮಾಗಳಲ್ಲಿ ಸುಮನ್ ಬ್ಯುಸಿಯಾದ್ರು. ಬಳಿಕ ಅನಂತ್‌ನಾಗ್ ಅವರಿಗೆ ಜೋಡಿಯಾಗಿ ಬೆಳೆದಿಂಗಳ ಬಾಲೆ ಸಿನಿಮಾದಲ್ಲಿ ನಾಯಕನಟಿಯಾಗಿ ಅಭಿನಯಿಸಿದ್ರು. ಈ ಸಿನಿಮಾದ ಕಥಾ ಹಂದರ ಅಂದಿನ ಯುವ ಮನಸ್ಸುಗಳನ್ನು ಕದ್ದಿದ್ದು ಸುಳ್ಳಲ್ಲ, ಪರಿಶುದ್ಧ ಮನಸ್ಸಿಂದ ಪ್ರೀತಿ ಮಾಡುವ ನಾಯಕ ನಾಯಕಿಯ ಜೋಡಿ ವೀಕ್ಷಕರನ್ನು ಮೋಡಿ ಮಾಡಿದ್ದು ನಿಜ. ಇಲ್ಲಿಂದ ಸುಮನ್ ಅವರು ಬೆಳೆದಿಂಗಳ ಬಾಲೆ ಅಂತಾನೇ ಪ್ರಖ್ಯಾತಿ ಪಡೆದ್ರು. ಬಳಿಕ ನಮ್ಮೂರ ಮಂದಾರ ಹೂವೆ ಸಿನಿಮಾದಲ್ಲಿ ಸಹ ಬಣ್ಣ ಹ’ಚ್ಚಿ ಒಳ್ಳೆಯ ಹೆಸರು ಮಾಡಿದ್ರು.

[widget id=”custom_html-3″]

ಸಿನಿಮಾರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾಗಲೇ ವೈವಾಹಿಕ ಜೀವನಕ್ಕೆ ಸುಮನ್ ಅವರು ಕಾಲಿಡ್ತಾರೆ. ಗುರುದೇವ್ ನಾಗರಾಜ್ ಎಂಬುವವರನ್ನು ಮದುವೆಯಾಗಿ ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿಯೇ ಸೆ’ಟ್ಲ್ ಆಗ್ತಾರೆ. ಸರಿಸುಮಾರು ಹದಿನೈದು ವರ್ಷಗಳ ಕಾಲ ಸುಮನ್ ಅವರು ಕನ್ನಡ ಸಿನಿರಂಗದಿಂದ ದೂರ ಉಳಿದ್ರು. ಯಾವೊಂದು ಚಿತ್ರಗಳಲ್ಲಿಯೂ ಸಹ ಇವರು ಕಾಣಿಸಿಕೊಂಡಿರಲಿಲ್ಲ. ಅಮೇರಿಕಾದಲ್ಲಿಯೇ ಗಂಡನೊಂದಿಗೆ ನೆಲಸಿದ್ದ ಸುಮನ್ ಸುಖ ಸಂಸಾರವನ್ನು ನಡೆಸ್ತಿದ್ರು.

[widget id=”custom_html-3″]

ಬಿಡುವಿನ ವೇಳೆಯಲ್ಲಿ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಸಂಗೀತ ತರಬೇತಿಯನ್ನು ಸಹ ನೀಡುತ್ತಿದ್ದರು. ಇನ್ನು ಇತ್ತೀಚಿಗೆ ಸುಮನ್ ನಗರ್ಕರ್ ಅವರು ಕನ್ನಡ ಚಿತ್ರಗಳಿಗೆ ಮತ್ತೆ ಬಣ್ಣ ಹ’ಚ್ಚಿ’ದ್ದಾರೆ. ಕಿರುತೆರೆಯ ಸ್ಟಾರ್ ಕಲಾವಿದನೆಂದೇ ಗುರುತಿಸಿಕೊಂಡಿದ್ದ ಅ’ಗ್ನಿಸಾಕ್ಷಿಯ ಸಿದ್ದಾರ್ಥ್ ಪಾತ್ರಧಾರಿಯಾದ ವಿಜಯಸೂರ್ಯ ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ, ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೆಶಿಸಿದ ಇಷ್ಟಕಾಮ್ಯ ಸಿನಿಮಾದಲ್ಲಿ ಸುಮನ್ ಅವರು ಬಣ್ಣ ಹಚ್ಚಿದ್ರು. ಮೃತ್ಯುಂಜಯ ಹಾಗೇ ಬೇರೆ ಬೇರೆ ಸಿನಿಮಾಗಳಲ್ಲಿ ಈಗ ಸುಮನ್ ಅವರು ಬ್ಯುಸಿಯಾಗಿದ್ದಾರೆ.