Advertisements

45 ವರ್ಷ ವಯಸ್ಸಾದರೂ ಚಿರಯವ್ವನೆಯಂತೆ ಕಾಣುವ ಕನ್ನಡದ ನಟಿ ಈಗೇನು ಮಾಡುತ್ತಿದ್ದಾರೆ ನೋಡಿ

Cinema

ನಮಸ್ತೇ ಸ್ನೇಹಿತರೇ, ಸ್ಯಾಂಡಲ್ವುಡ್ ನಲ್ಲಿ ಕೆಲವು ನಟಿಯರಿದ್ದಾರೆ. ಎಷ್ಟೇ ವರ್ಷ ಆದರೂ ತಮ್ಮ ಸೌಂದರ್ಯವನ್ನು ಮಾತ್ರ ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ. ಬಣ್ಣದಲೋಕಕ್ಕೆ ಕಾಲಿಟ್ಟು 20 ವರ್ಷವಾದರೂ ಇನ್ನೂ ಸಹ ಚಿರಯವ್ವನೆಯಂತೆ ಕಂಗೊಳಿಸುತ್ತಿದ್ದಾರೆ. ಹೌದು, ನಟ ಶಂಕರ್ ನಾಗ್ ಅಭಿನಯದ CBI ಶಂಕರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿಗೆ ಈಗ 45 ವರ್ಷ. ಆ ನಟಿಯೇ ಸುಮನ್ ರಂಗನಾಥ್. ಆದ್ರೆ ಅವರನ್ನ ನೋಡಿದ್ರೆ..ಇವರಿಗೆ 45 ವರ್ಷ ಆಗಿದೆಯಂತ ನೀವು ನಂಬೋದೆ ಇಲ್ಲ..

Advertisements

1989ರಲ್ಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಮನ್ ರಂಗನಾಥ್ ಈಗಲೂ ಸಹ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಬ್ಯೂಟಿ ಅಂತಲೇ ಕರೆಸಿಕೊಳ್ಳುತ್ತಾರೆ. ತುಮಕೂರಿನಲ್ಲಿ 1974ರಂದು ಇವರ ಜನನವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸುಮನ್ ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು,ಭೋಜಪುರಿ ಹಾಗೂ ಬಂಗಾಳಿ ಭಾಷೆಗಳಲ್ಲೂ ಸಹ ನಟಿಸಿದ್ದಾರೆ. ಇನ್ನು ಬಾಲಿವುಡ್ ಚಿತ್ರರಂಗದ ನಿರ್ಮಾಪಕ ಬಂಟಿವಾಲಿಯ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದ ನಟಿ ಸುಮನ್ ವೈಯುಕ್ತಿಕ ಕಾರಣಗಳಿಂದಾಗಿ 2007ರಲ್ಲಿ ವಿ’ಚ್ಛೇದನ ಪಡೆದುಕೊಳ್ಳುತ್ತಾರೆ.

ಕಳೆದ ವರ್ಷ ಜುಲೈನಲ್ಲಿ ಸೈಲಂಟಾಗಿ ಸಜನ್ ಎಂಬುವವರ ಜೊತೆ ಎರಡನೇ ಮದುವೆಯಾಗಿ ತಮ್ಮ ಜೀವನದ ಮತ್ತೊಂದು ಪುಟ ಶುರು ಮಾಡಿರುವ ನಟಿ ಸುಮನ್ ಕನ್ನಡದ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಎರಡನೆಯ ಪತಿ ಸಜನ್ ಅವರು ಬೆಂಗಳೂರಿನ ಆಹಾರ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು 45ವರ್ಷ ಆಗಿದ್ದರೂ ಸಹ ಚಿರ ಯವ್ವನೆಯಾಗಿ ಕಂಗೊಳಿಸುತ್ತಿರುವ ನಟಿ ಸುಮನ್ ರಂಗನಾಥ್ ರವರನ್ನು ಎಲ್ಲರೂ ಕೇಳುವ ಪ್ರಶ್ನೆ ಒಂದೇ..ನಿಮಗೆ ಇಷ್ಟು ವಯಸ್ಸಾಗಿದ್ದರೂ ನಿಮ್ಮ ಸೌಂದರ್ಯ ಮಾತ್ರ ಕುಂದಿಲ್ಲ..ಇದರ ರಹಸ್ಯವೇನೆಂದು ?

ಸುಮನ್‌ ಅವರು ಎಲ್ಲೇ ಹೋದರೂ ಇದೇ ಪ್ರಶ್ನೆ ಅವರಿಗೆ ಎದುರಾಗುತ್ತದೆಯಂತೆ. ಇದಕ್ಕೆ ಅವರೇಳಿರುವ ಉತ್ತರ ನಾನು ಸರಿಯಾದ ಸಮಯಕ್ಕೆ ಊಟ, ನಿದ್ರೆ ತಪ್ಪದೇ ಮಾಡುತ್ತೇನೆ. ಪ್ರತೀ ದಿನ ಯೋಗ ಮಾಡುವುದು ನನ್ನ ಅಭ್ಯಾಸ..ಇವೆಲ್ಲವೂ ನನ್ನ ಸೌಂದರ್ಯದ ಹಿಂದಿರುವ ಗುಟ್ಟು ಎಂದು ಹೇಳಿದ್ದಾರೆ.