ಈ ಹಿಂದೆ ಮಂಡ್ಯ ಸಂಸದೆ ಸುಮಲತಾ ಅವರಿಗೆ ಕೊರೊ,ನಾ ಸೊಂ,ಕು ತಗುಲಿತ್ತು, ಈಗ 21 ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಸಂಪೂರ್ಣವಾಗಿ ಸುಮಲತಾ ಅವರು ಆರೋಗ್ಯವಾಗಿದ್ದಾರೆ. ಮೂರು ವಾರದ ಹಿಂದೆ ಸಬೆಯಲ್ಲಿ ಬಾಗಿಯಾಗಿದ್ದರು ತದನಂತರ ಸುಮಲತಾ ಅವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಜೆ.ಪಿ ನಗರದ ನಿವಾಸದಲ್ಲೇ ಕ್ವಾರಂಟೈನ್ ಆಗಿ ಸುಮಲತಾ ಅವರು ಟ್ರೀಟ್ ಮೆಂಟ್ ಪಡೆಯುತಿದ್ದರು. ಎರಡು ದಿನದ ಹಿಂದೆ ಕೊವಿಡ್ ಟೆಸ್ಟ್ ಮಾಡಿದ್ದು ವರದಿಯಲ್ಲಿ ಸುಮಲತಾ ಅವರಿಗೆ ನೆಗೆಟಿವ್ ಎಂದು ಬಂದಿದೆ.

ಇನ್ನೂ ಅಭಿಷೇಕ್ ಅವರು ಸಹ ಅಮ್ಮನ ಪೊಟೊವನ್ನು ಜಾಲತಣದಲ್ಲಿ ಹಂಚಿಕೊಂಡು ಆರೋಗ್ಯದ ಮಾಹಿತಿಯನ್ನು ತಿಳಿಸಿದ್ದಾರೆ. ಅಮ್ಮನ ಪೊಟೊವೊಂದನ್ನು ಅಂಚಿಕೊಂಡ ಅಭಿಷೇಕ್ ಅವರು ಅಮ್ಮ ಚೇತರಿಸಿಕೊಂಡಿದ್ದಾರೆ. ಅಮ್ಮ ಬೇಗ ಗುಣಮುಖವಾಗಲೆಂದು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾಗಳು. ಗಾಡ್ ಬ್ಲೆಸ್ ಯು ಆಲ್. ಕೊರೊನಾ ಯಾರಿಗೆ ಬೇಕಾದರೂ ಬರಬಹುದು. ದಯವಿಟ್ಟು ಮಾಸ್ಕ್, ಸ್ಯಾನಿಟೈಸರ್, ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಕೈಗಳನ್ನು ಚೆನ್ನಾಗಿ ವಾಷ್ ಮಾಡಿಕೊಳ್ಳಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುಮಲತಾ ಅವರು ಸಹ ಟ್ಟಿಟ್ ನಲ್ಲಿ ಈ ರೀತಿ ತಿಳಿಸಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ, ಕೊವಿಡ್ ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದು, ಪರೀಕ್ಷೆಯ ನಂತರ ನಾನೀಗ ಕೊವಿಡ್ 18 ನೆಗೆಟಿವ್ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ವೈದ್ಯರ ಸಲಹೆಯಂತೆ ನಾಲಕ್ಕು ವಾರದ ವಿಶ್ರಾಂತಿ ಪಡೆದು, ನಿಮ್ಮೆಲ್ಲರ ಸೇವೆಗೆ ಮರಳಿ ಬರಲು ಕಾಯುತ್ತಿದ್ದೇನೆ.