Advertisements

ಯಾವ ಸಿನಿಮಾಗೂ ಕಮ್ಮಿಇಲ್ಲ ಸುಂದರ್ ಪಿಚ್ಚೈ ಲವ್ ಸ್ಟೋರಿ.. ಇವರ ಮಕ್ಕಳು ಹೇಗಿದ್ದಾರೆ ಗೊತ್ತಾ?

Inspire Kannada Mahiti

ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಅಂದರೆ ಅದು ಸುಂದರ್ ಅವರು ಮಾತ್ರ ಸಾಧಾರಣ ಕುಟುಂಬದಲ್ಲಿ ಹುಟ್ಟಿ ಬೆಳೆದು ಇಂದು ಈ ಹಂತಕ್ಕೆ ಬೆಳೆದಿರುವ ಸುಂದರ್ ಅವರ ಯಶಸ್ಸಿನ ಹಿಂದೆ ಅವರ ಹೆಂಡತಿಯ ಪಾತ್ರವೂ ಕೂಡ ಇದೆ.. ಇಂತಹ ಜೋಡಿಯ ಲೌವ್ ಕಹಾನಿ ಯಾವ ಸಿನಿಮಾಗು ಕಡಿಮೆ ಇಲ್ಲದಾಗಿದೆ. ಆಗಾದ್ರೆ ಸುಂದರ್ ಹಾಗು ಅಂಜಲಿ ಅವರ ಪ್ರೀತಿ ಜೀವನದ ಬಗ್ಗೆ ತಿಳಿದುಕೊಳ್ಳೋಣ.. 1972 ರಲ್ಲಿ ಚೆನ್ನೈ ನಲ್ಲಿ ಹುಟ್ಟಿದ ಸಿಇಒ ಸುಂದರ್ ಅವರು ವಿಶ್ವದಲ್ಲೇ ಅತಿ ಪ್ರಸಿದ್ಧ ಗೂಗಲ್ ಸಿಇಒ ಆಗಿ ವೃತ್ತಿ ಜೀವನದ ಜೊತೆಗೆ ವೈವಾಹಿಕ ಜೀವನದಲ್ಲೂ ಯಶಸ್ಸಿಯಾಗಿದ್ದಾರೆ.

[widget id=”custom_html-3″]

Advertisements

ಪ್ರೀತಿಸಿದಾಕೆಯನ್ನೇ ಕೈ ಹಿಡಿದು ಈಗ ಇಬ್ಬರು ಮುದ್ದಾದ ಮಕ್ಕಳ ಜೊತೆ ನೆಮ್ಮದಿಯಾಗಿದ್ದು ಸರಳ ಜೀವನವನ್ನ ನಡೆಸುತ್ತಿದ್ದಾರೆ.. ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರ್ ಹಾಗು ಮಧ್ಯಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಂಜಲಿ ಅವರು ಮೊದಲು ಬೇಟಿಯಾಗಿದ್ದು ತಮ್ಮ ಬ್ಯಾಚುಲರ್ ಡಿಗ್ರಿ ಐಐಟಿ ವಿದ್ಯಾಭ್ಯಾಸ ಮಾಡುವಾಗ.. ಕನಕಪುರದಲ್ಲಿ ಡಿಗ್ರಿ ಓದುವಾಗ ಪರಿಚಯವಾಗ್ತಾರೆ. ಕ್ಲಾಸ್ ಮೇಟ್ ಆಗಿದ್ದರಿಂದ ಪರಿಚಯವಾಗಿ, ಪರಿಚಯ ಸ್ನೇಹವಾಗಿ ಒಡನಾಟ ಬೆಳೆದು ನಂತರ ಪರಸ್ಪರ ಪ್ರೀತಿ ಮಾಡಲು ಆರಂಭಿಸುತ್ತಾರೆ.. ಆಗಿನ ಕಾಲದಲ್ಲಿ ಪೋನ್ ಮಾಡಿ ಮಾತನಾಡುವುದು ಕಷ್ಟವಾಗಿರ್ತಿತ್ತು.

[widget id=”custom_html-3″]

ಈಗಾಗಿ ಅಂಜಲಿ ಅವರ ಹಾಸ್ಟೆಲ್ ಮುಂದೆ ಓಡಾಡಿಕೊಂಡು ಅಂಜಲಿ ಅವರನ್ನು ಕರೆಯಿರಿ ಅಂತಾ ಅವರ ಸ್ನೇಹಿತರಿಗೆ ಹೇಳಿದ್ರೆ ಅವರು ಜೋರಾಗಿಯೇ ಅಂಜಲಿ ಸುಂದರ್ ಬಂದಿದ್ದಾರೆ ನೋಡಿ‌ ಅಂದಿದ್ರಂತೆ.. ಇನ್ನೂ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಆರು ತಿಂಗಳು ಒಬ್ಬರಿಗೊಬ್ಬರು ಸಂಪರ್ಕದಲ್ಲಿಯೇ ಇರಲಿಲ್ಲವಂತೆ. ಮಾಸ್ಟರ್ಸ್ ಡಿಗ್ರಿ ಮಾಡಲು ಸುಂದರ್ ಅಮೇರಿಕಾಗೆ ಹೋಗ್ತಾರೆ.. ಆಗ ಅಂಜಲಿ ಅವರ ಜೊತೆ ಮಾತಾನಾಡಲು ಅಂತರಾಷ್ಟ್ರೀಯ ಕರೆ ಮಾಡೋಕೆ ದುಡ್ಡಿಲ್ಲದ ಸ್ಥಿತಿ.. ಆದ್ರು ಇವರ ಪ್ರೀತಿ ಕಡಿಮೆ ಆಗಲಿಲ್ಲ.

[widget id=”custom_html-3″]

ನಂತರ ಅಂಜಲಿ ಅವರು ಅಮೇರಿಕಾಗೆ ಹೋಗ್ತಾರೆ.. ಇನ್ನೂ ವಿದ್ಯಾಭ್ಯಾಸ ಮುಗಿದ ನಂತರ ಮನೆಯವರನ್ನು ಒಪ್ಪಿಸಿ ಮದುವೆ ಆಗ್ತಾರೆ. ಈಗ ಈ ಜೋಡಿಗೆ ಕಾವ್ಯ ಹಾಗು ಕಿರಣ್ ಎಂಬ ಮುದ್ದಾದ ಮಕ್ಕಳಿದ್ದಾರೆ.. ಗೂಗಲ್ ನಲ್ಲಿ ಇವರ ಯಶಸ್ಸು ಕಂಡು ಟ್ವೀಟರ್ ಹಾಗು ಮೈಕ್ರೋಸಾಫ್ಟ್ ಕಂಪನಿಗಳು ಇವರಿಗೆ ಆಫರ್ ಕೊಟ್ಟಾಗ ಅಂಜಲಿ ಅವರು ಗೂಗಲ್ ನಲ್ಲೆರ ಉಳಿದುಕೊಳ್ಳಲು ಹೇಳಿದ್ರಂತರ. ಅದೇ ಈಗ ಸುಂದರ್ ಅವರ ಯಶಸ್ಸು ಜೀವನಕ್ಕೆ ಕಾರಣವಾಗಿದೆ.. ಇದೆಲ್ಲವನ್ನ ಸ್ವತಃ ಸುಂದರ್ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.