Advertisements

ಭಾನುವಾರ ರಾಜ್ಯದಂತ ಸಂಪೂರ್ಣ ಲಾಕ್ ಡೌನ್ ! ಏನ್ ಸಿಗುತ್ತೆ?ಏನ್ ಸಿಗಲ್ಲ?

News

ಕರೋನಾ ಸೋಂಕು ಹಬ್ಬುತ್ತಿರುವ ಹಿನ್ನಲೆಯಲ್ಲಿ, ರಾಜ್ಯಸರ್ಕಾರ ಮೇ 31 ರವರೆಗೆ ಪ್ರತೀ ಭಾನುವಾರದಂದು ಕಂಪ್ಲೀಟ್ ಲಾಕ್ ಡೌನ್ ಘೋಷಣೆ ಮಾಡಿದೆ. ಇನ್ನು ಇಂದು ಸಂಜೆ 7 ಗಂಟೆಯಿಂದಲೇ ಕರ್ಫ್ಯೂ ಜಾರಿಯಾಗಲಿದೆ.

Advertisements

ಹೌದು, ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಇಡೀ ಕರ್ನಾಟಕದಾದ್ಯಂತ ಲಾಕ್ ಡೌನ್ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಜನರು ಅನಾವಶ್ಯಕವಾಗಿ ತಮ್ಮ ಮನೆಗಳಿಂದ ಆಚೆ ಬರದಂತೆ ಪೊಲೀಸ್ ಇಲಾಖೆ ಕೂಡ ಹಲವಾರು ನಿಯಮಗಳನ್ನ ರೂಪಿಸಿದೆ. ಹಾಗಾದ್ರೆ ಭಾನುವಾರ ಲಾಕ್ ಡೌನ್ ಇರುವ ಕಾರಣ ಏನೆಲ್ಲಾ ಸಿಗುತ್ತೆ, ಏನು ಸಿಗೋದಿಲ್ಲ ನೋಡೋಣ ಬನ್ನಿ..

ಭಾನುವಾರ ಏನೆಲ್ಲಾ ಸಿಗಲಿದೆ : ಮಾಮೂಲಿಯಂತೆ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ ಗಳಿಗೆ ಅವಕಾಶ ಇದೆ. ಇನ್ನು ದಿನಸಿ ವಸ್ತುಗಳು, ಹಣ್ಣು ತರಕಾರಿ ಹಾಗೂ ಮಾಂಸದ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ. ಮದುವೆ ಸಮಾರಂಭಗಳು ಇದ್ದರೆ ಹಲವು ಷರತ್ತುಗಳ ಮೇರೆಗೆ ಅವಕಾಶ ನೀಡಲಾಗಿದೆ. ಅನಾರೋಗ್ಯ ಸಮಸ್ಯೆ ಇದ್ದವರು, ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ಹೋಗಬಹುದು.

ಭಾನುವಾರ ಏನೆಲ್ಲಾ ಇರಲ್ಲ : ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದ್ದು, ಯಾವುದೇ ಬಸ್ ಸಂಚಾರ ಇರುವುದಿಲ್ಲ. ದಿನಬಳಕೆಯ ವಸ್ತುಗಳ ಅಂಗಡಿಗಳನ್ನ ಬಿಟ್ಟು, ಕಟಿಂಗ್ ಶಾಪ್, ಚಪ್ಪಲಿ ಅಂಗಡಿ, ಸಲೂನ್, ಬಟ್ಟೆ, ಚಿನ್ನದ ಅಂಗಡಿಗಳು ಬಂದ್ ಇರಲಿದೆ. ಆಟೋ, ಕ್ಯಾಬ್, ಟ್ಯಾಕ್ಸಿ ಗಳು ಓಡಾಡುವಂತಿಲ್ಲ. ವಾಕಿಂಗ್ ಜಾಗಿಂಗ್ ಕೂಡ ಇರೋದಿಲ್ಲ. ಎಲ್ಲಾ ಪಾರ್ಕ್ ಗಳನ್ನ ಬಂದ್ ಮಾಡಲಾಗುತ್ತೆ. ಇನ್ನು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲು ಅವಕಾಶ ಇಲ್ಲ.

ಇನ್ನು ಇದೆಲ್ಲದರ ಜೊತೆಗೆ ಎಣ್ಣೆ ಅಂಗಡಿಗಳು ಕೂಡ ಬಂದ್ ಆಗಲಿವೆ. ಇನ್ನು ಸೋಮವಾರ ಏಳು ಗಂಟೆಯಿಂದ ಮಾಮೂಲಿಯಂತೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಗಳ ಸಂಚಾರ ಮುಂದುವರಿಯಲಿದೆ. ಇನ್ನು ರಾಜ್ಯಾದಂತ ಭಾನುವಾರ ಕಂಪ್ಲೀಟ್ ಆಗಿ ಲಾಕ್ ಡೌನ್ ಇರುವ ಕಾರಣ ಜನರು ಮನೆಯಿಂದ ಆಚೆ ಬರದಂತೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.