Advertisements

ಹುಚ್ಚ ಅಂದುಕೊಂಡು ಹತ್ತಿರಕ್ಕೆ ಹೋದ ವ್ಯಕ್ತಿ! ಮುಂದೆ ನಡೆದಿದ್ದು ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ನಾವು ರಸ್ತೆಯ ಮೇಲೆ ಹೋಗುವಾಗ ತುಂಬಾ ಜನ ಹುಚ್ಚರಂತಿರುವ ವ್ಯಕ್ತಿಗಳನ್ನು ನೋಡಿರುತ್ತೇವೆ.. ಆದರೆ ಅವರಿಗೆ ಯಾವುದೇ ಸಹಾಯವನ್ನು ಮಾಡದೇ ನಾವು ಸುಮ್ಮನೆ ಹೋಗುತ್ತೇವೆ.. ಆದರೆ ಇಲ್ಲೊಬ್ಬ ವ್ಯಕ್ತಿ ಒಬ್ಬ ಹುಚ್ಚನ ಬಳಿ ಹೋಗುತ್ತಾನೆ. ಆದರೆ ಅಲ್ಲಿ ನಡೆದಿದ್ದೇನು ಎಂಬುದನ್ನ ನೀವು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.. ಒಬ್ಬ ವ್ಯಕ್ತಿ ಒಂದೇ ಜಾಗದಲ್ಲಿ ಆರು ತಿಂಗಳಿನಿಂದ ಕೂತಿರುತ್ತಾರೆ.. ಆ ದಾರಿಯಲ್ಲಿ ಇತನನ್ನು ಹುಚ್ಚ ಅಂದುಕೊಂಡು ಕೇವಲ ಒಂದು ಅಥವಾ ಎರಡು ರೂಪಾಯಿಯನ್ನು ಸಹಾಯ ಮಾಡಿ ಹೋಗಿಬಿಡುತ್ತಿದ್ದರು.. ಆದರೆ ಸುನಿಲ್ ಎಂಬುವ ವ್ಯಕ್ತಿ ಹುಚ್ಚನ ಬಳಿ ಹೋಗಿ ಅವರ ಕಷ್ಟವನ್ನು ಕೇಳುತ್ತಾನೆ.

Advertisements

ಆದರೆ ಆ ಹುಚ್ಚ ಮಾತನಾಡುವ ಮಾನಸಿಕ ಸ್ಥಿರತೆ ಇರಲಿಲ್ಲ.. ಅದಕ್ಕೆ ಸುನಿಲ್ ಅವರು ಆತನ ಜೊತೆ ಒಂದು ಸೆಲ್ಪಿಯನ್ನು ತೆಗೆದುಕೊಂಡು ಪೇಸ್ಬುಕ್ ನಲ್ಲಿ ಈ ರೀತಿ ಅಪ್ಲೋಡ್ ಮಾಡುತ್ತಾರೆ. ಈ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆ.. ಈತನ ಕುಟುಂಬಸ್ತರು ಯಾರಾದರೂ ಇದ್ದರೆ ಕೂಡಲೇ ನನಗೆ ಕರೆ ಮಾಡಿ ಎಂದು ಪೋನ್ ನಂಬರ್ ಹಾಕುತ್ತಾರೆ.. ನಂತರ ಈ ಪೋಸ್ಟ್ ವೈರಲ್ ಆಗಿ ಮರುದಿನವೇ ಮಾನಸಿಕ ಅಸ್ವಸ್ಥನ ಮಾವನಾದವರು ಫೋನ್ ಮಾಡುತ್ತಾರೆ. ಆಗ ತಿಳಿದುಬಂದಿದ್ದೇನೆಂದರೆ ಈ ವ್ಯಕ್ತಿಯ ಹೆಸರು ಪಪ್ಪು ಯಾದವ್ ಈತ ಮೂಲತಃ ಉತ್ತರ ಪ್ರದೇಶವರಾಗಿದ್ದು ಶ್ರೀಮಂತ ಕುಟುಂಬಕ್ಕೆ ಸೇರಿದವರು..

ಆದರೆ ಇವರ ತಂದೆ ತಾಯಿ ತೀರಿಕೊಂಡ ಮೇಲೆ, ಮನೆ ಬಿಟ್ಟು ಹೋಗಿದ್ದಾನೆ ಎಂದು ಪಪ್ಪು ಯಾದವ್ ಅವರ ಮಾವ ತಿಳಿಸಿದ್ದಾರೆ.. ನಂತರ ಈತನನ್ನು ಊರಿಗೆ ಕರೆದುಕೊಂಡು ಹೋದರು ಮತ್ತು ಸುನಿಲ್ ಅವರಿಗೆ ತುಂಬಾ ಧನ್ಯವಾದಗಳನ್ನು ತಿಳಿಸುತ್ತಾರೆ.. ನಾವು ಪೇಸ್ಬುಕ್ ಮತ್ತು ಕೆಲವೊಂದು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಆಗುತ್ತದೆ ಎಂದು ಅಂದುಕೊಳ್ಳುತ್ತೇವೆ.. ಆದರೆ ಇದು ಒಳ್ಳೆಯದಕ್ಕೂ ಕೂಡ ಬಳಸಬಹುದೆಂದು ತೋರಿಸಿಕೊಟ್ಟಿದ್ದಾರೆ ಸುನಿಲ್ ಅವರು. ಅಷ್ಟೇ ಅಲ್ಲದೆ ಯಾರೋ ದಾರಿಯಲ್ಲಿ ಕುಳಿತಿದ್ದ  ಮಾನಸಿಕ ಅಸ್ವಸ್ಥತೆಯ ವ್ಯಕ್ತಿಯನ್ನು ಅವರ ಮನೆಯವರ ಜೊತೆ ಸೇರಿಸಿದ ಸುನಿಲ್ ಅವರಿಗೆ ಒಂದು ಹ್ಯಾಂಡ್ಸಪ್ ಹೇಳಲೇ ಬೇಕು.. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನುಅನಿಸಿಕೆಯನ್ನು ತಿಳಿಸಿ.