Advertisements

ಬಾಲಿವುಡ್ ಇತಿಹಾಸದಲ್ಲೇ ಒಬ್ಬ ನಟನ ಸಾ’ವಿ’ಗೆ ದೇಶಕ್ಕೆ ಮರುಗಿದ್ದು ಈತನಿಗೆ ಮಾತ್ರ.. ಚಿಕ್ಕ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡ ಈತ ದೊಡ್ಡ ಸ್ಟಾರ್ ನಟನಾಗಿದ್ದು ಹೇಗೆ ಗೊತ್ತಾ?

Cinema

ಸುಶಾಂತ್ ಸಿಂಗ್ ರಜಪೂತ್.. ಪುಟ್ಟ ಕಂಗಳಲ್ಲಿ ಸಾವಿರ ಕನಸು ಹೊತ್ತು ಬಾಲಿವುಡ್ ಅಂಗಳಕ್ಕೆ ಬಂದ ಅದ್ಭುತ ಕಲಾವಿದ. ಆಡಿಯನ್ಸ್ ಫೆವರೇಟ್ ಎಸ್‌ಎಸ್‌ಆರ್‌ನ ಸಿನಿ ಪಯಣದ ಕಥೆ ಕೇಳಿ ಬಿಹಾರದ ಪಾಟ್ನಾದ ಪುಟ್ಟ ಹಳ್ಳಿಯೊಂದರಲ್ಲಿ ಉತ್ತರ ಭಾರತದ ಪ್ರತಿಷ್ಠಿತ ರಜಪೂತ್ ಮನೆತನದಲ್ಲಿ ಹುಟ್ಟಿದ ಹುಡುಗ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನಾಲ್ಕು ಜನ ಅಕ್ಕಂದಿರಿದ್ದರು. ಕೃಷ್ಣ ಕುಮಾರ್ ಹಾಗೂ ಉಷಾ ದಂಪತಿಗಳ ಕಿರಿಯ ಪುತ್ರ ಸುಶಾಂತ್ ಸಿಂಗ್ ರಜಪೂತ್. ಬಹಳ ಅಮ್ಮನನ್ನು ಪ್ರೀತಿಸುತ್ತಿದ್ದ ಸುಶಾಂತ್ ಹದಿನಾರು ವರ್ಷವಿರುವಾಗಲೇ ಅಮ್ಮನನ್ನು ಕಳೆದುಕೊಳ್ತಾರೆ. ಯಾವ ವಯಸ್ಸಿನಲ್ಲಿ ಅಮ್ಮನ ಅವಶ್ಯಕತೆಯಿತ್ತೋ ಅದೇ ವಯಸ್ಸಿನಲ್ಲಿ ಅಮ್ಮ ಉ’ಸಿರಾಟ ನಿ’ಲ್ಲಿಸಿರುವುದು ಸುಶಾಂತ್ ಪಾಲಿಗೆ ಜೀರ್ಣಿಸಿಕೊಳ್ಳಲಾಗಲಿಲ್ಲ.

[widget id=”custom_html-3″]

Advertisements

ಇದರಿಂದ ಸ್ವಲ್ಪ ಮಟ್ಟಿಗೆ ಸುಶಾಂತ್ ಮಂಕಾಗಿದ್ರು ಅದೆಲ್ಲ ನೋವಿನಿಂದ ಹೊರಬಂದು ತಾನೊಬ್ಬ ಅಸ್ಟ್ರೊನೆಟ್ ಆಗಬೇಕೆಂಬ ಮಹದೆತ್ತರದ ಕನಸು ಕಂಡು ಆ ಕನಸಿಗೆ ಪೂರಕವಾದ ಕೆಲಸ ಮಾಡುತ್ತಿದ್ರು. ಆದರೆ ಮನೆಯವರ ಒ’ತ್ತಾಯಕ್ಕೆ ಮಣಿದು ಸುಶಾಂತ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಾರೆ. ಇನ್ನೇನು ಇಂಜಿನಯರಿಂಗ್ ಕೋರ್ಸ್ ಮುಗಿದೇ ಹೋಯ್ತು ಅನ್ನುವಾಗ ಕೊನೆಯ ವರ್ಷದಲ್ಲಿ ಸಿನಿಮಾ ರಂಗದತ್ತ ಸುಶಾಂತ್ ವಾಲ್ತಾರೆ. ಬಾಲಾಜಿ ಟೆಲಿಫಿಲಂ ವತಿಯಿಂದ ಸುಶಾಂತ್‌ ಗೆ ಆಫರ್ ಸಹ ಬರುತ್ತದೆ. ಇನ್ನೇನು ಎರಡೇ ಎರಡು ತಿಂಗಳು ಆದ್ರೆ ಇಂಜಿನಯರಿಂಗ್ ಕಂಪ್ಲೀಟ್ ಆಗುತ್ತೆ. ಈ ಸಮಯದಲ್ಲಿ ಏನಪ್ಪ ಮಾಡೋದು ಅಂತ ಯೋಚಿಸುತ್ತಿದ್ದ ಎಸ್‌ಎಸ್‌ಆರ್ ಧೃಢ ಸಂಕಲ್ಪ ಮಾಡಿಬಿಟ್ಟಿದ್ರು.

[widget id=”custom_html-3″]

ನನ್ನ ಜೀವನ ಸಿನಿಮಾದಲ್ಲಿ ಮುಂದುವರಿಬೇಕು ಅಂತ ನಿಶ್ಚಯಿಸಿ ಬಾಂಬೆಗೆ ಬರ‍್ತಾರೆ. ಆದರೆ ನೀರೀಕ್ಷಿಸಿದ ಅವಕಾಶ ಸಿಗದೇ ಬದುಕಿಗಾಗಿ ಡ್ಯಾನ್ಸ್ ಮಾಡಲಿಕ್ಕೆ ಶುರು ಮಾಡ್ತಾರೆ. ಹಾಗೆ ಮಕ್ಕಳಿಗೆ ಡ್ಯಾನ್ಸ್ ಟೀಚಿಂಗ್ ಹೇಳಿಕೊಡಲಿಕ್ಕೆ ಶುರು ಮಾಡ್ತಾರೆ. ಬಹುತೇಕ ಸಿನಿಮಾಗಳಲ್ಲಿ ಹಿನ್ನಲೆ ನೃತ್ಯಗಾರನಾಗಿಯೂ ಹೆಜ್ಜೆ ಹಾಕಿದ್ದಾರೆ. ಬಳಿಕ ಸುಶಾಂತ್‌ಗೆ ಕಿಸ್ ದೇಶ್ ಮೇ ಹೈ ಮೇರಾ ದಿಲ್ ಎನ್ನುವ ಸೀರಿಯಲ್‌ನಲ್ಲಿ ಪೋಷಕ ನಟನಾಗಿ ಅಭಿನಯಿಸುವ ಅವಕಾಶ ಸಿಗುತ್ತೆ. ಈ ಧಾರವಾಹಿಯಲ್ಲಿ ಸುಶಾಂತ್ ಅಭಿನಯಕ್ಕೆ ಮನಸೋತು ಏಕ್ತಾಕಪೂರ್ ಅವರು ಪವಿತ್ರಾ ರಿಶ್ತಾ ಧಾರವಾಹಿಯಲ್ಲಿ ಹಿರೋ ಆಗಿ ಅಭಿನಯಿಸುವ ಅವಕಾಶ ಕಲ್ಪಿಸಿಕೊಡ್ತಾರೆ.

[widget id=”custom_html-3″]

ಈ ಧಾರವಾಹಿ ಝೀ ಟಿವಿಯಲ್ಲಿ ಪ್ರಸಾರವಾಗ್ತಾಯಿದ್ದು ಸಖತ್ ಹಿಟ್ ಆಗುತ್ತದೆ. ಅಂಕಿತಾ ಹಾಗೂ ಸುಶಾಂತ್ ಅವರ ಜೋಡಿ ಬಾಲಿವುಡ್ ಅಂಗಳದಲ್ಲಿ ಮೋಡಿ ಮಾಡ್ತದೆ. ಕಿರುತೆರೆಯ ಪ್ರೇಕ್ಷಕರ ಮನಸ್ಸಲ್ಲಿ ಕಮಾಲ್ ಮಾಡಿದ ಈ ಜೋಡಿ ಅನೇಕ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಸಹ ಭಾಗವಹಿಸಿದ್ರು. ಇವರಿಬ್ಬರ ಮಧ್ಯೆ ಮಧುರ ಪ್ರೇಮ ಸಹ ಅಂಕುರವಾಗಿತ್ತು. ಈ ಮಧ್ಯೆ ಸುಶಾಂತ್ ಅವರಿಗೆ ಸಿನಿಮಾಗಳಲ್ಲಿ ಆಫರ್ ಬರುತ್ತದೆ. ಅದನ್ನು ಸ್ವೀಕರಿಸಿ ಸುಶಾಂತ್ ಧಾರವಾಹಿ ಬಿಟ್ಟು ಕಾಯಿ ಪೂಚೆ ಅನ್ನೋ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ. ಮೊದಲ ಸಿನಿಮಾದಲ್ಲಿಯೇ ಬಾಲಿವುಡ್ ಅಂಗಳದಲ್ಲಿ ಒಳ್ಳೆ ಹೆಸರನ್ನು ಸುಶಾಂತ್ ಮಾಡ್ತಾರೆ. ಫಿಲ್ಮ್ ಫೇರ್ ಅವಾರ್ಡ್ಗೆ ಸಹ ಸುಶಾಂತ್ ನೋಮಿನಿಯಾಗ್ತಾರೆ.

[widget id=”custom_html-3″]

ಬಳಿಕ ಪಿಕೆಯಲ್ಲಿಯೂ ಸಹ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ತಾರೆ. ನಂತರ ಎಂಎಸ್ ದೋನಿಯವರ ಬಯೋಪಿಕ್ ಮಾಡಿ ಅದರಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್‌ನ್ನು ಧೂಳಿಪಟ ಮಾಡ್ತಾರೆ. ಇದಾದ ಬಳಿಕ ರಾಬ್ಟ, ಕೇದಾರ್‌ನಾಥ್, ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ತಾರೆ. ಸಿನಿರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಮುಂಬೈನ ಬಾಂದ್ರಾದ ತನ್ನ ನಿವಾಸದಲ್ಲಿ ನೇ’ಣು ಬಿ’ಗಿದ ಸ್ಥಿತಿಯಲ್ಲಿ ನಿರ್ಜಿವ ಹೆ’ಣ’ವಾಗಿ ಸುಶಾಂತ್ ಕಂಡುಬಂದಿದ್ದು ನಿಜಕ್ಕೂ ಯಾರು ಊಹಿಸಿಕೊಳ್ಳಲಾಗದ ಕ್ರೂ’ರ ಸತ್ಯ.

ಮಾನಸಿಕ ಖಿ’ನ್ನ’ತೆಯಿಂದ, ಬಾಲಿವುಡ್ ಬಿಗ್ ಮಂದಿಗಳು ಸುಶಾಂತ್‌ರನ್ನು ತುಳಿಯುವ ಪ್ರಯತ್ನ ಮಾಡಿದ್ದಕ್ಕೆ ಸುಶಾಂತ್ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ. ಅವಕಾಶಗಳಿಂದ ವಂ’ಚಿ’ತರಾಗಿ ಸುಶಾಂತ್ ಸಾ’ವಿ’ಗೆ ಶರಣಾಗಿದ್ದಾರೆ. ಇಲ್ಲ ಇದು ಕೊ’,ಲೆ ಹೀಗೆ ಹತ್ತು ಹಲವು ಅಭಿಪ್ರಾಯಗಳು ಸುಶಾಂತ್ ಸಾ’ವಿ’ನ ಹಿಂದೆ ಸುತ್ತುತ್ತಲೇಯಿದೆ. ಸುಶಾಂತ್ ಧೈ’ವಾಧೀ’ನರಾಗಿ ಒಂದು ವರುಷವೇ ಕಳೆದರೂ ಇನ್ನು ಸತ್ಯಾಸತ್ಯತೆ ತಿಳಿಯದೇ ಇರುವುದು ಬೇಸರದ ಸಂಗತಿ. ತಾಯಿ ವಿಯೋಗವನ್ನೇ ಸಹಿಸಿಕೊಂಡು ಆತ್ಮಸ್ಥೈರ್ಯದಿಂದ ಕನಸಿನ ಬೆನ್ನತ್ತಿದ್ದ ಹುಡುಗ ಅದು ಹೇಗೆ ಆ’ತ್ಮ’ಹ’ತ್ಯೆಗೆ ಶರಣಾದ ಎನ್ನುವುದೇ ನಿಗೂ’ಢ ಪ್ರಶ್ನೆಯಾಗಿ ಉಳಿದಿದೆ..