Advertisements

ನಿದ್ದೆ ಕಣ್ಣಲ್ಲಿ ಕಸ ಹಾಕಿದ ಮಹಿಳೆ.. ನಂತರ ಈ ಡ್ರೈವರ್ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಗರಗಳಲ್ಲಿ ಬೆಳಗಿನ ಜಾವ ಆರು ಗಂಟೆಗೆಲ್ಲಾ ಕಸದವರು ಮನೆಯ ಹತ್ತಿರ ಬಂದು ಕಸವನ್ನ ತೆಗೆದುಕೊಂಡು ಹೋಗುತ್ತಾರೆ.. ಅದೇ ರೀತಿ ನಿದ್ರೆಗಣ್ಣಿನಲ್ಲಿ ಕಸ ಹಾಕಿದ ಈ ಮಹಿಳೆ ಕಥೆ ಎಲ್ಲಾ ಕಡೆ ಸುದ್ದಿಯಾಗಿದೆ.. ನಗರಗಳಲ್ಲಿ ಈಗಂತೂ ಪ್ರತಿಯೊಬ್ಬರು ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಣೆ ಮಾಡಿ ಕೊಡುತ್ತಾರೆ.. ಆದರೆ ಹಳ್ಳಿಗಳ ಕಡೆ ಎಲ್ಲವನ್ನೂ ಮಿಕ್ಸ್ ಮಾಡಿ ತೆಗೆದುಕೊಂಡು ಹೋಗುತ್ತಾರೆ.. ನಂತರ ನಾವು ಕೊಟ್ಟ ಕಸವನ್ನು ವಿಲೇವಾರಿ ಮಾಡಿ ಸಂಬಂಧಪಟ್ಟ ವಸ್ತುಗಳನ್ನು ರಿಸೈಕಲ್ ಗೆ ಕಳುಹಿಸುತ್ತಾರೆ.

Advertisements

ಇದೇ ರೀತಿ ಆಂದ್ರಪ್ರದೇಶದ ರಾಜಮಂಡ್ರಿಗೆ ಸೇರಿರುವ ಸ್ವಪ್ನ ಎಂಬ ಮಹಿಳೆಯ ಕಥೆ ಈಗ ಬಹಳ ಸುದ್ದಿಯಾಗಿದೆ.. ಪ್ರತಿದಿನ ಎಂದಿನಂತೆ ಮನೆಯ ಹತ್ತಿರ ಕಸದ ಗಾಡಿ ಬರುತ್ತದೆ‌‌. ಆಕೆ ಕಸವನ್ನು ಹಾಕಿ ಮನೆಗೆ ಬರುತ್ತಾಳೆ.. ನಂತರ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಮಾಡುತ್ತಾ ಮೈಮರೆತುಬಿಡುತ್ತಾರೆ.. ಆಗ ಗಂಡನಿಗೆ ನಾಷ್ಟ ಬಡಿಸುವಾಗ ಎಲ್ಲಿ ಕೈಯಲ್ಲಿ ಇರುವ ಉಂಗುರ ಕಾಣಿಸುತ್ತಿಲ್ಲ ಎಂದಾಗ ಮನೆಯಲ್ಲೇ ಇರಬೇಕು ಎಂದು ಮನೆಯೆಲ್ಲಾ ಹುಡುಕಾಡುತ್ತಾರೆ.. ಎಲ್ಲೂ ಕೂಡ ಉಂಗುರ ಸಿಗದೇ ಹೋದಾಗ ಬೆಳಗ್ಗೆ ಕಸದಲ್ಲಿ ಉಂಗುರ ಹೋಗಿರಬೇಕೆಂದು ಅಂದುಕೊಳ್ಳುತ್ತಾರೆ..

ಆದರೆ ಕಸದವರು ಬೆಳಗ್ಗೆ ಕಸವನ್ನು ತೆಗೆದುಕೊಂಡು ಹೋಗಿರುತ್ತಾರೆ.. ಆಗ ರಾಜಮಂಡ್ರಿಯ ಮುನ್ಸಿಪಲ್ ಕಾರ್ಪೊರೇಶನ್ ಬಳಿ ಹೋಗಿ ಆಕೆಯ ಹಳ್ಳಿಯ ಕಸ ವಿಲೇವಾರಿ ಎಲ್ಲಿ ಮಾಡುತ್ತಾರೆ ಎಂದು ತಿಳಿದುಕೊಂಡು ಅಲ್ಲಿಗೆ ಹೋಗುತ್ತಾರೆ. ಇನ್ನೂ ಅಲ್ಲಿದ್ದ ಒಬ್ಬ ವ್ಯಕ್ತಿಯ ಹತ್ತಿರ ನನ್ನ ಉಂಗುರ ಕಾಣಿಸುತ್ತಿಲ್ಲ.. ನಿಮಗೇನಾದ್ರೂ ಸಿಕ್ಕಿತಾ ಎಂದು ವಿಚಾರಿಸಿದಾಗ.. ಲಕ್ಷ್ಮಣ್ ಎಂಬುವ ಮುನಿಸಿಪಾಲಿಟಿ ಹೌದು ಬೆಳಗ್ಗೆ ನನಗೆ ಒಂದು ಉಂಗುರ ಸಿಕ್ಕಿದೆ ಎಂದು ಹೇಳಿ ಆಕೆಗೆ ಕೊಡುತ್ತಾರೆ..

ನೋಡಿದರಲ್ವಾ ಸ್ನೇಹಿತರೆ ಈ ಕಾಲದಲ್ಲಿ ಕೇವಲ 500 ರೂಪಾಯಿ ಬೆಲೆಬಾಳುವ ವಸ್ತು ಸಿಕ್ಕರೆ ಬಿಡೋದಿಲ್ಲ. ಅಂತದ್ರಲ್ಲಿ ಲಕ್ಷ್ಮಣ್ ಅವರು ಬರೋಬ್ಬರಿ 25 ಸಾವಿರ ರೂಪಾಯಿ ಬೆಲೆಬಾಳುವ ಆರು ಗ್ರಾಂ ಚಿನ್ನದ ಉಂಗುರವನ್ನು ವಾಪಸ್ ಕೊಟ್ಟಿದ್ದಾರೆ.. ಅದಕ್ಕೆ ಹೇಳೋದು ಸ್ನೇಹಿತರೆ ಮುಖ ನೋಡಿ ಮಣೆ ಹಾಕಬಾರದು ಅಂತ.. ಮತ್ತು ನೀವು ಕೂಡ ಒಣ ಕಸ, ಹಸಿ ಕಸವನ್ನು ವಿಂಗಡಿಸಿ ಹಾಕಿ ಆಗ ಮನೆಯೂ ಕೂಡ ಸ್ವಚ್ಚವಾಗಿರುತ್ತದೆ. ನಂತರ ನಮ್ಮ ದೇಶವೂ ಸ್ವಚ್ಚವಾಗಿರುತ್ತದೆ..