Advertisements

ನಿಮ್ಮೊದೊಂದೆ ಜಿಲ್ಲಾಧಿಕಾರಿನಾ ಇಲ್ಲಿ ಯಾಕೆ ನಿಂತಿದ್ದೀಯಾ ಎಂದು ಕಸ ಗುಡಿಸುವ ಮಹಿಳೆಗೆ ಅವಮಾನ ಮಾಡಿದ್ರು.. ಆದರೆ ಈಗ ಈ ಮಹಿಳೆ ಏನಾಗಿದ್ದಾರೆ ಗೊತ್ತಾ?

Kannada Mahiti

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಇವೆ.. ಅವಮಾನಗಳನ್ನ ಮೆಟ್ಟಿ ನಿಂತಾಗ ಮಾತ್ರ ಸಾಧನೆಯ ಮೆಟ್ಟಿಲು ಏರಲು ಸಾಧ್ಯವಾಗೋದು. ಇದೇ ರೀತಿ ಅವಮಾನನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡ ಈ ಮಹಿಳೆ ಸಾಧನೆ ಇಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.‌ ಇವರ ಹೆಸರು ಆಶಾ.. ಗಂಡನಿಂದ ವಿಚ್ಚೇದನ ಪಡೆದು ಇಬ್ಬರು ಮಕ್ಕಳ ಜೊತೆಗಿರುವ ಇವರು. ತಮ್ಮ ಹಾಗು ಮಕ್ಕಳ ಜೀವನಕ್ಕಾಗಿ ಜೋತ್ಪುರ ಮಹಾನಗರ ಪಾಲಿಕೆಯಲ್ಲಿ ಬೀದಿ ಸ್ವಚ್ಚಗೊಳಿಸುವ ಕಾರ್ಯ ಮಾಡ್ತಿದ್ರು.‌. ಆದರೆ ಅಷ್ಟೇ ಜೀವನ ಅಂಥ ಸುಮ್ಮನಾಗದ ಆಶಾ ಅವರು ಬೀದಿ ಗುಡಿಸುವ ಕೆಲಸ ಮಾಡುವಾಗ ನಿಮ್ಮೊದೊಂದೆ ಜಿಲ್ಲಾಧಿಕಾರಿನಾ ಇಲ್ಲಿ ಯಾಕೆ ನಿಂತಿದ್ದೀಯಾ..

[widget id=”custom_html-3″]

Advertisements

ಎಂದು ಅವಮಾನ ಮಾಡಿದವರ ಮುಂದೆ ತಲೆ ಎತ್ತಿ ನಿಂತಿದ್ದಾರೆ.. ಎಂಟು ವರ್ಷಗಳ ಹಿಂದೆ ಗಂಡನಿಂದ ದೂರವಾದ ಆಶಾ ಅವರಿಗೆ ಇಬ್ಬರು ಮಕ್ಕಳ ಜವಾಬ್ದಾರಿ  ಹೆಗಲಿಗೆ ಬೀಳುತ್ತದೆ. ಮಕ್ಕಳನ್ನ ಸಾಕುವುದರ ಜೊತೆ ಜೊತೆಗೆ ತಮ್ಮ ಪದವಿಯನ್ನು ಮುಗಿಸಿಕೊಂಡ ಆಶಾ ನಂತರ ನಾಗರಿಕಾ ಸೇವಾ ಪರೀಕ್ಷೆ ಮುಗಿಸಿದ್ದಾರೆ.. ಫಲಿತಾಂಶ ಬರೋದು ತಡವಾದ ಕಾರಣ ಮಕ್ಕಳನ್ನ ಸಾಕಲು ಕೆಲಸ ಯಾವುದಾದರೇನು ಶ್ರದ್ಧೆ, ತಾಳ್ಮೆ ಇರಬೇಕು ಅಂಥ ಕಸ ಕುಡಿಸುವ ಕೆಲಸಕ್ಕೆ ಸೇರಿದ್ದಾರೆ. ಅಲ್ಲಿ ಇವರನ್ನ ಇನ್ನಿಲ್ಲದ ರೀತಿ ಅವಮಾನ ಮಾಡುತ್ತಾರೆ..

[widget id=”custom_html-3″]

ಆದರೆ ಎರಡು ವರ್ಷಗಳ ನಂತರ ನಡೆದದ್ದೇ ಬೇರೆ. ಹೌದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ ಆಶಾ ಅವರು ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಉಪಸಂಗ್ರಹ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.. ಇದರಿಂದ ಆಶಾ ಅವರ ಖುಷಿಗೆ ಪಾರವೇ ಇರಲಿಲ್ಲಾ. ನನ್ನನ್ನ ನಾನ ರೀತಿಯಲ್ಲಿ ಅವಮಾನಿಸಿದರು.. ನಾನು ಎಲ್ಲಾ ಅವಮಾನಗಳನ್ನ ಸಹಿಸಿ ಇಂದು ಜಿಲ್ಲಾಧಿಕಾರಿಯಾಗಿದ್ದೇನೆ.. ನನ್ನ ಸಾಧನೆಗೆ ನನ್ಮ ಅವಮಾನಿಸಿದವರೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಮನಸ್ಸಿದ್ದರೆ ಮಾರ್ಗ ಅಂಥ ಹೇಳೋದು ಇಂತಹರನ್ನ ನೋಡಿದರೆ ನಿಜ ಅನಿಸುತ್ತದೆ.