Advertisements

ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಕಾಲೇಜಿನಲ್ಲಿ ಪಾಠ ಹೇಳಿಕೊಡುತ್ತಿರುವ ತಂದೆ! ಕಾರಣ ಏನು ಗೊತ್ತಾ? ಕಣ್ಣೀರು ಬರುತ್ತೆ..

Kannada Mahiti

ಈ ಫೋಟೋ ನೋಡ್ತಾಯಿದ್ರೆ ಏನು ಅನಿಸುತ್ತೆ ಹೇಳಿ.. ಆಳವಾಗಿ ನೋಡಿದಾಗ ಕರುಳು ಕಿವುಚುತ್ತೆ, ಚಿಂತನೆ ಮಾಡಿದಾಗ ಯಾಕೀತರ ಈ ಪುಣ್ಯಾತ್ಮ ಮಗುವನ್ನು ಎತ್ತಿಕೊಂಡಿದ್ದಾನೆ ಅನಿಸುತ್ತೆ, ಎಲ್ಲವುಕ್ಕಿಂತ ಹೆಚ್ಚಾಗಿ, ಆ ಮಗುವನ್ನು ಎಷ್ಟು ಆರೈಕೆ ಮಾಡ್ತಾನಪ್ಪ ಅನಿಸುತ್ತೆ. ಅಂದಹಾಗೇ ಈ ಫೋಟೋವನ್ನು ಶೇರ್ ಮಾಡಿದ್ದು ಅವನೀಶ್ ಶರಣ್ ಎನ್ನುವ ಐಎಎಸ್ ಅಧಿಕಾರಿ. ಈ ಫೋಟೋವನ್ನು ಹಂಚಿಕೊಂಡಿದ್ದು, ತಂದೆಯ ವಾತ್ಸಲ್ಯದ ಬಗೆಗೆ ಗುಣಗಾನ ಮಾಡ್ತಿದ್ದಾರೆ. ಅಷ್ಟಕ್ಕೂ ಈ ಫೋಟೋದ ಕತೆಯನ್ನು ಹೇಳ್ತೀವಿ ಕೇಳಿ.. ಈ ಎಳೆಯ ಕಂದ ಹುಟ್ಟಿದ ಕ್ಷಣವೇ ತನ್ನ ತಾಯಿ ಪ್ರೀತಿಯಿಂದ ವಂ’ಚಿ’ತವಾಗಿದೆ.

[widget id=”custom_html-3″]

Advertisements

ಎದೆಗಪ್ಪಿ ಆರೈಕೆ ಮಾಡುವ ನಿಷ್ಕಲ್ಮಶ ಪ್ರೀತಿ ಈ ಮಗುವಿಗೆ ಸಿಕ್ಕಿಲ್ಲ, ಹುಟ್ಟಿದಾಗ ಬೊಟ್ಟಿಡಲು, ಕಂದನನ್ನು ನಾನಾ ರೀತಿಯಿಂದ ಗುಣಗಾನ ಮಾಡಲು ತನ್ನ ಕಂದವನ್ನೇ ದೇವರ ಮಗು ಅಂತ ಬಣ್ಣಿಸಲು, ತನ್ನ ಮಗುವಿನ ಸೌಂದರ್ಯ ಕಂಡು ಊರ ದೃಷ್ಠಿ ತಾಗದಿರಲಿ ಅಂತ ದೃಷ್ಟಿ ತೆಗೆಯುವಂತಹ ತಾಯಿಯ ಪ್ರೀತಿ ಈ ಮಗುವಿಗೆ ಲಭ್ಯವಾಗಿಲ್ಲ. ಹೌದು ತನ್ನಮ್ಮನನ್ನು ನೋಡುವ ಭಾಗ್ಯವೂ ಈ ಎಳೆ ಕಂದನಿಗೆ ಸಿಕ್ಕಿಲ್ಲ. ಇದೇ ಕಾರಣಕ್ಕೆ ಈ ಮಗುವಿನ ತಂದೆ ತನ್ನ ಪುಟ್ಟ ಕಂದನನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದಾನೆ..

[widget id=”custom_html-3″]

ತನ್ನ ಎಳೆಯ ಕಂದನಿಗೆ ತಂದೆಯೂ ತಾನೇ ಆಗಿ, ತಾಯಿಯೂ ತಾನೇ ಆಗಿ, ಬಿದ್ದಾಗ ಎತ್ತಿ ಮುದ್ದಾಡಿಸುವವನು ತಾನೇ ಆಗಿ ಎಲ್ಲ ಪ್ರೀತಿಯನ್ನು ತಾನೇ ಧಾರೆ ಎರೆಯುತ್ತಿರುವ ಆದರ್ಶ ತಂದೆಯೀತ. ಅಂದಹಾಗೇ ಈತ ವೃತ್ತಿಯಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ, ಇತ್ತ ತನ್ನ ಮಗುವನ್ನು ನೋಡಿಕೊಳ್ಳುತ್ತಾ, ಎರಡು ಕೆಲಸವನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದಾರೆ. ಅಂದಹಾಗೇ ಈತ ತರಗತಿಯಲ್ಲಿ ಸಹ ಮಗುವನ್ನ ನೋಡಿಕೊಂಡಿರೋದ್ರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯೂ ಆಗುತ್ತಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಏನೇ ಹೇಳಿ ಮಗುವನ್ನು ಇಟ್ಟುಕೊಂಡು, ತರಗತಿಯಲ್ಲಿ ಪಾಠ ಮಾಡುತ್ತಾ, ಎರಡು ಕೆಲಸವನ್ನು ಒಟ್ಟೊಟ್ಟಿಗೆ ಮಾಡೊದಂದ್ರೆ ತಮಾಷೆ ಮಾತೇ ಅಲ್ಲಾ.