Advertisements

ತಂದೂರಿ ಚಿಕನ್ ಬಗ್ಗೆ ಕೇಳಿದ್ದೀರಿ..ಆದ್ರೆ ನೀವು ತಂದೂರಿ ಚಾಯ್ ಬಗ್ಗೆ ಕೇಳಿದ್ದೀರಾ !

Aduge

ಸ್ನೇಹಿತರೆ, ನೀವು ತಂದೂರಿ ರೊಟ್ಟಿ, ತಂದೂರಿ ಕೋಳಿ ಬಗ್ಗೆ ಕೇಳಿರುತ್ತೀರಿ..ಆದರೆ ತಂದೂರಿ ಚಹಾ ಬಗ್ಗೆ ಕೇಳಿದ್ದೀರಾ ! ಮಣ್ಣಿನ ಲೋಟಗಳನ್ನು ಬಿಸಿ ಬಿಸಿ ಕೆಂಡಗಳಿಂದ ಕುದಿಯುತ್ತಿರುವ ತಂದೂರ್ ಒಳಗೆ ಹಾಕಲಾಗುತ್ತದೆ. ಮಣ್ಣಿನ ಲೋಟಗಳು ಬಿಸಿ ಆದ ನಂತರ ಅದನ್ನು ಹೊರಗೆ ತೆಗೆದು, ಅದರ ಒಳಗೆ ಬಿಸಿ ಬಿಸಿ ಚಹಾವನ್ನು .ಹಾಕಲಾಗುತ್ತದೆ ಬಳಿಕ ಇದನ್ನು ಬೇರೆ ಮಣ್ಣಿನ ಲೋಟಕ್ಕೆ ಹಾಕಿ ವಿತರಿಸಲಾಗುತ್ತದೆ. ತಂದೂರಿಗೆ ಚಹಾ ಹಾಕಿದ ಮೇಲೆ ಅದರ ರುಚಿ ಮೊದಲಿಗಿಂತ ನಾಲ್ಕು ಪಟ್ಟು ದುಪ್ಪಟಾಗುತ್ತದೆ.

ಚಹಾಕ್ಕೆ ಮಣ್ಣಿನ ರುಚಿ ಮತ್ತು ಪರಿಮಳ ಸೇರಿ ಸಾಮಾನ್ಯ ಟೀ ಗಿಂತ ಹೆಚ್ಚು ಸೊಗಸು ಸಿಗುತ್ತದೆ. ತಂದೂರಿ ಚಹಾದ ಐಡಿಯಾ ಮೊದಲು ಆರಂಭವಾದದ್ದು ಪುಣೆಯ ಅಮೋಲ್ ರಸ್ದೆಯೊ ಅವರಿಂದ.. ಅಮೋಲ್ ಅವರು ಪುಣೆಯಲ್ಲಿ ಚಾಯ್ ಲಾ ಚಹಾ ಅಂಗಡಿಯನ್ನು ನಡೆಸುತ್ತಿದ್ದಾರೆ. ತಂದೂರಿ ಚಹಾ ಅನ್ನು ತಯಾರಿಸುವ ಬಗ್ಗೆ ಅಮೋಲ್ ಗೆ ಅವರ ಅಜ್ಜಿಯಿಂದ ಮಾಹಿತಿ ಸಿಕ್ಕಿತ್ತು. ಅಜ್ಜಿಯೂ ಅಮೋಲ್ ಬಾಲ್ಯದಲ್ಲಿದ್ದಾಗಲೇ ಅವರಿಗೆ ಮಣ್ಣಿನ ಲೋಟದಲ್ಲಿ ಅರಸಿನ ಹಾಕಿದ ಹಾಲನ್ನು ಕುಡಿಯಲು ಕೊಡುತ್ತಿದ್ದರಂತೆ.

ಇನ್ನು ಈ ಹಾಲನ್ನು ಮಣ್ಣಿನ ಪಾತ್ರೆಯಲ್ಲಿ ಕಟ್ಟಿಗೆಗೆ ಬೆಂಕಿ ಹಾಕಿ ಕುದಿಸಿ ಕೊಡಲಾಗುತ್ತಿತ್ತಂತೆ. ಈಗ ಇದೇ ಉಪಾಯ ಅನುಸರಿಸಿರುವ ಅಮೋಲ್ ಅವರು ಪುಣೆಯಲ್ಲಿ ತಂದೂರಿ ಚಹಾವನ್ನು ಆರಂಭಿಸಿದ್ದಾರೆ. ಈಗ ಇದು ದೇಶದ ಎಲ್ಲ ಮೂಲೆಗೆ ತಲುಪಿದೆ. ತಂದೂರಿ ಚಹಾದ ರುಚಿ ಮಾತ್ರವಲ್ಲ ಇದನ್ನು ಮಾಡುವ ವಿಧಾನವೂ ಕೂಡ ವಿಭಿನ್ನವಾಗಿದೆ. ಇನ್ನು ತಂದೂರಿ ಚಹಾವನ್ನು ತಯಾರಿಸುವ ವಿಧಾನ ನೆಟ್ಟಿಗರು ತುಂಬಾ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.