Advertisements

2 ವರ್ಷದ ಹಿಂದೆ ತನ್ನ ಹುಡುಗ ಕೊಟ್ಟ ಲಾಕೇಟ್! ಅದರಲ್ಲಿ ಏನಿದೆ ಎಂದು ನೋಡಿ ಶಾಕ್ ಆದ ಪ್ರೇಯಸಿ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರೇಮಿಗಳು ತಮ್ಮ ಪ್ರೀತಿಯನ್ನು ತೋರ್ಪಡಿಸಲು ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾರೆ.. ಇದೇ ರೀತಿ ಒಬ್ಬ ಪ್ರಿಯಕರ ತನ್ನ ಪ್ರೇಯಸಿಗೆ ಒಂದು ಲಾಕೇಟ್ ಅನ್ನು ಕೊಟ್ಟ ಆದರೆ ನಾವು ಊಹಿಸಿದಷ್ಟು ಸಾಮಾನ್ಯ ಲಾಕೇಟ್ ಆಗಿರಲಿಲ್ಲ. ಅದರಲ್ಲಿ ಏನೋ ಒಂದನ್ನು ಇಟ್ಟಿದ್ದ ಆ ಪ್ರೀಯತಮ.. ಆದರೆ ಆ ವಿಷಯ ಆಕೆಗೆ ಗೊತ್ತಿರಲಿಲ್ಲ. ಲಾಕೇಟ್ ನಲ್ಲಿ ಏನಿತ್ತು ಗೊತ್ತಾ? ಆಸ್ಟ್ರೇಲಿಯಾಗೆ ಸೇರಿದ ಟೆರ್ರಿ ತನ್ನ ಪ್ರೇಯಸಿ ಹ್ಯಾನಾಗೆ ಏನಾದರು ವಿಶೇಷವಾದ ಉಡುಗೊರೆಯನ್ನು ಕೊಡಬೇಕು ಎಂದುಕೊಂಡ ಆಗ ತನ್ನ ಕೈಯಿಂದ ಸುಂದರವಾದ ಲಾಕೇಟ್ ಅನ್ನು ಕೆತ್ತನೆ ಮಾಡಿ ಅದನ್ನು ಆಕೆಗೆ ಉಡುಗೊರೆಯಾಗಿ ಕೊಟ್ಟಿದ್ದ.. ಆ ಲಾಕೇಟ್ ಅನ್ನು ಹ್ಯಾನಾ ಪ್ರತಿದಿನ ಕೊರಳಿಗೆ ಹಾಕಿಕೊಳ್ಳುತ್ತಿದ್ದಳು.‌

Advertisements

ಈಗೆ ಸುಮಾರು 2 ವರ್ಷ ಕಳೆದೇ ಹೋಯಿತು.‌. ಹ್ಯಾನಾ ಲಾಕೇಟ್ ಅನ್ನು ಪ್ರತಿದಿನ ಧರಿಸುತ್ತಿದ್ದಳು. ಆದರೆ ಆ ಲಾಕೇಟ್ ನಲ್ಲಿ ಏನಿದೆ ಎಂದು ಆಕೆ ಯಾವತ್ತೂ ಊಹಿಸಿರಲಿಲ್ಲ.. ಒಂದು ದಿನ ಇಬ್ಬರೂ ರಜೆಗಳ ಪ್ರವಾಸಕ್ಕೆ ಹೋಗಿದ್ದರು. ಆಗ ಟೆರ್ರಿ ನಾವಿಬ್ಬರು ಮದುವೆ ಆಗೋಣ್ವಾ ಎಂದು ಹ್ಯಾನಾಗೆ ಪ್ರಪೋಸ್ ಮಾಡಿದನು.. ಇದನ್ನು ಕೇಳಿ ಸಂತಸಗೊಂಡ ಹ್ಯಾನಾ ನೀನು ಈಗೆ ಮಾತುಗಳಲ್ಲೇ ಪ್ರಪೋಸ್ ಮಾಡ್ತಿಯಾ ಎಂದು ಕೇಳಿದಳು. ಆಗ ಹತ್ತಿರ ಬಂದ ಟೆರ್ರಿ ಹ್ಯಾನಾ ಕೊರಳಿನಲ್ಲಿ ಇದ್ದ ಲಾಕೇಟ್ ತೆಗೆದುಕೊಂಡು ಅದನ್ನು ಕಲ್ಲಿಗೆ ಜೋರಾಗಿ ಹೊಡೆದು ಅದನ್ನು ಓಪನ್ ಮಾಡಿದ..

ಅದರಲ್ಲಿದ್ದ ವಜ್ರದ ಉಂಗುರವನ್ನು ತೆಗೆದುಕೊಂಡು ತನ್ನ ಪ್ರೇಯಸಿ ಹ್ಯಾನಾಗೆ ಪ್ರಪೋಸ್ ಮಾಡಿದ. ಅದನ್ನು ನೋಡಿದ ಹ್ಯಾನಾ ಒಂದು ಕ್ಷಣ ಆಶ್ಚರ್ಯ ಚಕಿತಳಾದಳು.. ಎರಡು ವರ್ಷ ತಾನು ಧರಿಸದ್ದ ಲಾಕೇಟ್ ನಲ್ಲಿ ಒಂದು ಡೈಮಂಡ್ ರಿಂಗ್ ಇತ್ತು ಎಂದು ಆಕೆಗೆ ನಂಬಲಾಗಲಿಲ್ಲ. ಟೆರ್ರಿಯ ಪ್ರಪೋಸ್ ಅನ್ನು ಸ್ವೀಕರಿಸಿದ ಹ್ಯಾನಾ ಆತನನ್ನು ಬಿಗಿಯಾಗಿ ಅಪ್ಪಿಕೊಂಡಳು ಟೆರ್ರಿ ನನಗೆ ಯಾವಾಗ ಪ್ರಪೋಸ್ ಮಾಡ್ತಾನೆ ಎಂದು ಹ್ಯಾನಾ ಒಂದು ವರ್ಷದಿಂದ ಕಾಯುತ್ತಿದ್ದಳಂತೆ.. ಆದರೆ ಆತನ ಪ್ರೇಮ ನಿವೇದನೆ ಎರಡು ವರ್ಷದಿಂದ ಆಕೆಯ ಕೊರಳಿನಲ್ಲೇ ಇತ್ತೆಂದು ಆಕೆಗೆ ಗೊತ್ತೇ ಇರಲಿಲ್ಲ. ಟೆರ್ರಿಯ ಬುದ್ದಿವಂತಿಕೆಯನ್ನು ನೋಡಿ ತನ್ನನ್ನು ತಾನು ಮರೆತ ಹ್ಯಾನಾ ಸಂತೋಷದಿಂದ ಕಣ್ಣೀರು ಹಾಕಿದಳಂತೆ..