Advertisements

ತಂದೆ ಕೊಡಿಸಿದ ಹೊಸ ಕಾರನ್ನು ಡ್ರೈವ್ ಮಾಡಿಕೊಂಡು ಹೋದ ಮಗಳು.. ನಂತರ ಗದ್ದೆಯ ಬಳಿ ಎಂತಹ ಸ್ಥಿತಿಯಲ್ಲಿ ಸಿಕ್ಕಳು ಗೊತ್ತಾ?

Kannada Mahiti

ಇಂದಿನ ಮಕ್ಕಳು ಅಪ್ಪ ಅಮ್ಮನ ಮಾತಿಗೆ ಬೆಲೆ ಕೊಡುವುದೇ ಕಡಿಮೆಯಾಗಿದೆ. ತಮ್ಮ ಆಸೆ ಕನಸುಗಳನ್ನು ಮಾತ್ರ ಈಡೇರಿಸಿಕೊಳ್ಳುವತ್ತ ಮಾತ್ರ ಗಮನವಿರುತ್ತದೆ. ತಂದೆತಾಯಿಗಳ ಮನಸ್ಸು ನೋಯಿಸುವುದು ಸರಿಯೇ? ಎಂಬ ಪ್ರಶ್ನೆ ಒಮ್ಮೆ ಮೂಡಿದ್ದರೂ ಆಗುವ ಆದಷ್ಟು ಅನಾಹುತಗಳನ್ನು ತಪ್ಪಿಸಬಹುದು. ಆದರೆ ಮಕ್ಕಳು ತಂದೆ-ತಾಯಿಯ ಮನಸ್ಸನ್ನು ನೋಯಿಸುತ್ತದೆ ಎಂಬುದನ್ನು ಅರಿಯುವುದಿಲ್ಲ. ಆದರೆ ತಂದೆ ತಾಯಿ ಮಾತ್ರ ಮಕ್ಕಳ ಖುಷಿಯಲ್ಲಿಯೇ ತಮ್ಮ ನಗು, ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಮಕ್ಕಳು ತಾವು ಹಾಳಾಗಿ ಪಾಲಕರನ್ನು ನೋವಿನ ಕೂಪದಲ್ಲಿ ಪಾತಾಳಕ್ಕೆ ತಳ್ಳುತ್ತಾರೆ.. ಇದಕ್ಕೆ ಒಂದು ನಿದರ್ಶನ ಎಂದರೆ ತನುಶ್ರೀ. ತನುಶ್ರೀ ಅವರ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ತಂದೆ ತಾಯಿಗಳು ಶ್ರೀಮಂತರಾಗಿದ್ದರು. ತನುಶ್ರೀ ಕೂಡ ತಂದೆ, ತಾಯಿಯ ಅಚ್ಚುಮೆಚ್ಚಿನ ಮುದ್ದಿನ ಮಗಳಾಗಿದ್ದವಳು. ಈಕೆಗೆ ಕಾಲಕ್ಕೆ ತಕ್ಕಂತೆ ತಂದೆ ಎಲ್ಲಾ ರೀತಿಯ ಸ್ವಾತಂತ್ರವನ್ನು ನೀಡಿದ್ದರು. ತಾಯಿ ಕೂಡ ಇವಳಿಗೆ ಎಲ್ಲದಕ್ಕೂ ಸಪೋರ್ಟ್ ಮಾಡುತ್ತಿದ್ದರು. ಇದೇ ಇವಳ ಪಾಲಿಗೆ ಮುಳುವಾಯಿತೊ ಏನೋ? ತನುಶ್ರೀ ಈಗಿನ ಕಾಲದ ಹುಡುಗಿ ಅಲ್ಲವೇ, ಸಹಜವಾಗಿ ಕಾರ್ ಡ್ರೈವಿಂಗ್ ಬೈಕ್ ರೈಡಿಂಗ್ ಮಾಡುತ್ತಿದ್ದಳು..

[widget id=”custom_html-3″]

Advertisements

ತಂದೆಯ ಬಳಿ ಹೊಸ ಕಾರ್ ಕೊಡಿಸುವಂತೆ ಪೀಡಿಸಿದಳು. ಇದಕ್ಕೆ ಒಪ್ಪಿದ ತಂದೆ ಖುಷಿಯಿಂದಲೇ ತನುಶ್ರೀಗೆ ಹೊಸ ಕಾರೊಂದನ್ನು ನೀಡುತ್ತಾರೆ.. ತಂದೆಯ ಉಡುಗೂರೆಗೆ ತನುಶ್ರೀ ಹಿಗ್ಗಿದ್ದಳು. ಅವಳ ಖುಷಿಗೆ ಪಾರವೇ ಇರಲಿಲ್ಲ. ಮಗಳು ಕೇಳಿದ್ದನ್ನು ಯಾವುದು ಇಲ್ಲ ಎನ್ನದ ತಂದೆ ಎಲ್ಲವನ್ನು ಕೊಡಿಸುತ್ತಿದ್ದರು. ಹೀಗೆ ಒಂದು ದಿನ ಕಾರನ್ನು ತಾನೇ ಡ್ರೈವ್ ಮಾಡಿಕೊಂಡು ಸ್ನೇಹಿತರೊಂದಿಗೆ ಆಚೆ ಹೋಗುತ್ತಾಳೆ ತನುಶ್ರೀ. ಆದರೆ ಸಂಜೆಯಾದರೂ ಮನೆಗೆ ಮರಳಿ ಬರುವುದಿಲ್ಲ. ತಂದೆ ತಾಯಿಗೆ ಆತಂಕ ಶುರುವಾಗುತ್ತದೆ. ಮಗಳು ಹೇಳುವುದಕ್ಕೂ ಆಗದ ಸ್ಥಿತಿಗೆ ತಲುಪಿ ಪ್ರಾಣ ಕಳೆದುಕೊಂಡಿದ್ದಳು.
ಹೌದು ಸ್ನೇಹಿತರೊಂದಿಗೆ ತನ್ನ ಸ್ವಂತ ಕಾರನ್ನು ತಾನೊಬ್ಬಳೆ ಡ್ರೈವ್ ಮಾಡಿಕೊಂಡು ಹೋದ ತನುಶ್ರೀ ಚಾಮರಾಜನಗರದ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗೆ ಇಳಿದಿದ್ದಳು. ಜೊತೆಗೆ ಸ್ನೇಹಿತರ ಕಾರಿನೊಂದಿಗೆ ರೇಸ್ ಆಡುತ್ತಿದ್ದಳು. ಪೂರ್ಣವಾಗಿ ಡ್ರೈವಿಂಗ್ ಬರದ ತನುಶ್ರೀ ಸ್ನೇಹಿತರ ಕಾರನ್ನು ಹಿಂದಿಕ್ಕಲ್ಲೆಂದು ಅತಿ ವೇಗವಾಗಿ ಚಲಿಸಿದಳು. ಅತಿಯಾದ ಅವಸರ ಅ’ಪಾ’ಯಕ್ಕೆ ಹಾದಿ ಎನ್ನುವಂತೆ ತನುಶ್ರೀ ತನ್ನ ಕಾರಿನ ವೇಗದ ಮಿತಿಯನ್ನು ಮೀರಿದ್ದಳು.

[widget id=”custom_html-3″]

ಇದೇ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿತು. ಹೆದ್ದಾರಿಯ ಕೂಣನೂರು ಗೇಟ್ ಬಳಿಯ ರಸ್ತೆ ಬದಿ ಸೇತುವೆಗೆ ಡಿಕ್ಕಿ ಹೊಡೆಯಿತು. ಡಿ’ಕ್ಕಿ ಹೊಡೆದ ರಭಸಕ್ಕೆ ಕಾರು 5, 6 ಪಲ್ಟಿಯಾಗಿ 50 ಮೀಟರ್ ನಷ್ಟು ದೂರ ಹೋಗಿ ಗದ್ದೆಯಲ್ಲಿ ಬಿದ್ದಿತು. ಕಾರಿನಿಂದ ಆಚೆ ಬರಲಾಗದೆ ಕಾರಲ್ಲಿ ಪ್ರಾಣ ಬಿಟ್ಟಿದ್ದಳು ತನುಶ್ರೀ. ಇತ್ತ ತನುಶ್ರೀ ಕಾರು ಬಾರದಿದ್ದಾಗ ಸ್ನೇಹಿತರು ಕರೆ ಮಾಡಿದ್ದಾರೆ. ತನುಶ್ರೀ ಫೋನ್ ಸ್ಥಳೀಯರು ಪಡೆದು ಕರೆ ಸ್ವೀಕರಿಸಿ ನಡೆದ ದು’ರ್ಘ’ಟನೆ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ನೇಹಿತರು ತಮ್ಮಿಂದಲೇ ಈ ದು’ರ್ಘ’ಟನೆ ನಡೆಯಿತೆಂದು ದುಃಖಿತಾರಾಗುತ್ತಾರೆ. ನಂತರ ತನುಶ್ರೀ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಾರಿನಿಂದ ತನುಶ್ರೀ ಯನ್ನು ಹೊರಗೆಳೆಯಲು ಯತ್ನಿಸುತ್ತಾರೆ. ಆದರೆ ಕಾರು ಅತಿಯಾಗಿ ಪಲ್ಟಿಯಾಗಿರುವುದರಿಂದ ತನುಶ್ರೀ ಹೊರಬರದಂತೆ ಸಿಕ್ಕಿಹಾಕಿಕೊಂಡಿದ್ದಳು.

[widget id=”custom_html-3″]

ನಂತರ ಜೆಸಿಬಿಯ ಸಹಾಯದಿಂದ ಪೊಲೀಸರು ಅನುಶ್ರೀಯ ಪಾರ್ಥಿವ ಶರೀರವನ್ನು ಆಚೆ ತೆಗೆಸುತ್ತಾರೆ. ಈ ಕುರಿತು ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರ’ಕ’ರಣ ದಾಖಲಾಗಿದೆ. ಅದೇನೇ ಇರಲಿ, ತನ್ನ ಜೀವನ ಹಾಳು ಮಾಡಿಕೊಳ್ಳುವ ಜೊತೆಗೆ ತನುಶ್ರೀ ತನ್ನ ತಂದೆ ತಾಯಿಯ ಕನಸು, ಆಸೆಗಳನ್ನು ಭಗ್ನಗೊಳಿಸಿದಳು. ತಂದೆ , ತಾಯಿ ನೀಡಿದ ಅತಿಯಾದ ಸ್ವತಂತ್ರ ಕೂಡಾ ಇವಳ ಪಾಲಿಗೆ ಮುಳುವಾಯಿತೇನೋ? ಅತಿ ಆಸೆ ಪಡದೆ ಕಾರನ್ನು ನಿಧಾನವಾಗಿ ಚಲಿಸಿದರೆ ಜೀವವಾದರೂ ಉಳಿಯುತ್ತಿತ್ತೇನೋ?. ಆದರೆ, ಇದೀಗ ಇದ್ದ ಒಬ್ಬ ಮಗಳನ್ನು ಕಳೆದುಕೊಂಡು ತಂದೆ ತಾಯಿ ಜೀವನವಿಡಿ ನೋವಿನಲ್ಲಿ ಕಳೆಯುವಂತಾಯಿತು. ಎತ್ತಿ ಮುದ್ದಾಡಿದ ಕೈಯಿಂದ ಮಕ್ಕಳ ಶ’ವ ಸಂಸ್ಕಾರ ಮಾಡುವ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರದಿರಲಿ ಭಗವಂತ.