ನಮಸ್ತೆ ಸ್ನೇಹಿತರೆ, ಈ ಟ್ಯಾಕ್ಸಿ ಡ್ರೈವರ್ ಮತ್ತು ಈ ಹುಡುಗಿಯ ಕಥೆ ಕೇಳಿದರೆ ನಿಜಕ್ಕೂ ಗ್ರೇಟ್ ಅನ್ನುತ್ತೀರಾ.. ಅಸಲಿಗೆ ಇವರಿಬ್ಬರ ನಡುವೆ ನಡೆದಿದ್ದೇನು ಎಂದು ತಿಳಿದರೆ ನೀವು ನಂಬೋದಿಲ್ಲಾ ಆದರು ಇದು ನೈಜ ಘಟನೆ. ಈ ಟ್ಯಾಕ್ಸಿ ಡ್ರೈವರ್ ಹೆಸರು ರಾಜ್ ವೀರ್, ಈತ ಮೂಲತಃ ಉತ್ತರಪ್ರದೇಶದಲ್ಲಿ ವಾಸ ಮಾಡುತ್ತಿದ್ದಾನೆ.. ಆದರೆ ಜೀವನ ಉಪಯೋಗಕ್ಕಾಗಿ ಡೆಲ್ಲಿಗೆ ಬಂದು ಹಲವು ವರ್ಷಗಳಿಂದ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ದಿನದ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ರಸ್ತೆಯಲ್ಲಿ ಸರಿಸುಮಾರು 50 ಜನರ ಗುಂಪೊಂದು ಸೇರಿರುತ್ತದೆ.

ಇದನ್ನು ನೋಡಿದ ರಾಜ್ ವೀರ್ ಕಾರನ್ನು ನಿಲ್ಲಿಸಿ ಆ ಗುಂಪಿನ ಕಡೆಗೆ ಹೋಗಿ ನೋಡಿದಾಗ ಅಲ್ಲಿ ಒಂದು ಹುಡುಗಿಗೆ ಅ’ಪಘಾ’ತವಾಗಿ ಸಾ’ವಿನಂಚಿನಲ್ಲಿ ನ’ರುಳು’ತ್ತಿದ್ದರು.. ಆದರೆ ಅಲ್ಲಿನ ಜನರು ನಿಂತು ನೋಡುತ್ತಿದ್ದರೆ ಹೊರತು ಯಾರು ಸಹ ಆ ಹುಡುಗಿಗೆ ಸಹಾಯವನ್ನು ಮಾಡಲು ಮುಂದಾಗಿರಲಿಲ್ಲ. ಆಗ ರಾಜ್ ವೀರ್ ಆ ಹುಡುಗಿಯನ್ನು ಎತ್ತಿಕೊಂಡು ಟ್ಯಾಕ್ಸಿಯಲ್ಲಿ ಕೂರಿಸಿ ಡೆಲ್ಲಿಯ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯ ಕಡೆಗೆ ಬರುತ್ತಾರೆ.. ನಂತರ ಅಲ್ಲಿ ಈ ಹುಡುಗಿಯನ್ನು ಚೆಕಪ್ ಮಾಡಿದ ಡಾಕ್ಟರ್ ಆಪರೇಷನ್ ಮಾಡಲೇಬೆಕು ಎಂದು ಹೇಳುತ್ತಾರೆ.

ಒಂದು ಲಕ್ಷ ಹಣವನ್ನು ಕೌಂಟರ್ ನಲ್ಲಿ ಕಟ್ಟಿ ಮೂರು ಬಾಟಲ್ ರ’ಕ್ತ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಏನು ಮಾಡಬೇಕೆಂದು ತಿಳಿಯದ ರಾಜ್ ವೀರ್ ತಕ್ಷಣ ತನ್ನ ಬಳಿ ಇದ್ದ ಟ್ಯಾಕ್ಸಿಯನ್ನು ಮಾರಿ ಹಣ ತಂದು ಕೌಂಟರ್ ನಲ್ಲಿ ಕಟ್ಟಿ ಆ ಹುಡುಗಿಯ ಜೀವವನ್ನು ಕಾಪಾಡಿದ.. ನಂತರ ಅಲ್ಲಿಂದ ಹೊರಟು ಹೋಗುತ್ತಾನೆ. ಆದರೆ ಮೂರು ವರ್ಷಗಳ ನಂತರ ಆ ಹುಡುಗಿ ಈತನ ಮನೆಗೆ ಬಂದು ತನ್ನನ್ನು ಕಾಪಡಿದ ಋಣವನ್ನು ತೀರಿಸಲು ಹತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಒಂದು ಕಾರನ್ನು ಕೊಟ್ಟು..

ನೀ ಕೊಟ್ಟ ಬಿಕ್ಷೆಯೇ ಈ ಜೀವನ ಅಣ್ಣ ಎಂದು ಕಾಲಿಗೆ ಬೀಳುತ್ತಾಳೆ.. ರಾಜ್ ವೀರ್ ಅವರದ್ದು ಎಂತಹ ವ್ಯಕ್ತಿತ್ವ ಅಲ್ಲವೇ, ಯಾರೋ ಗೊತ್ತಿಲ್ಲದ ವ್ಯಕ್ತಿ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾಗ ಹಿಂದೆ ಮುಂದೆ ನೋಡದೆ ತನ್ನ ಜೀವನಕ್ಕೆ ಆದಾರವಾಗಿದ್ದಂತಹ ಕಾರನ್ನು ಅಡವಿಟ್ಟು ಜೀವವನ್ನು ಕಾಪಾಡಿದ್ದಾರೆ ಅಂದರೆ ಇಂತಹ ಮಹಾನ್ ಜನರು ನಮ್ಮಲ್ಲಿ ಇನ್ನೂ ಇದ್ದಾರಾ ಅನಿಸುತ್ತದೆ. ನಿಜಕ್ಕೂ ಇವರಿಗೆ ಹ್ಯಾಟ್ಸಪ್ ಮಾಡಲೇಬೇಕು.