Advertisements

ತನ್ನ ಕಾಲೇಜಿನ ಟೀಚರ್ ಮದುವೆಗೆ ಬಂದ ವಿದ್ಯಾರ್ಥಿ ಒಬ್ಬ ಸ್ಟೇಜ್ ಮೇಲೆ ಏನ್ ಮಾಡ್ದಾ ಗೊತ್ತಾ? ಎಲ್ಲರೂ ಶಾಕ್!

Kannada Mahiti

ಸಮಯ ಸಂದರ್ಭ ನೋಡದೇ ನಾವು ಮಾಡುವ ಕೆಲಸಗಳು ಕೆಲವೊಮ್ಮೆ ನಗೆ ಪಾಠಲಿಗೆ ದಾರಿ ಮಾಡುತ್ತವೆ.. ಇಂತಹದ್ದೇ ಒಂದು ಕೆಲಸವನ್ನು ಇಂಜನಿಯರಿಂಗ್ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮಾಡಿದ್ದು ನೋಡಿ ಒಂದು ಕ್ಷಣ ಎಲ್ಲರೂ ಬೆ’ರಗಾಗುವಂತೆ ಮಾಡಿದ್ದಾನೆ.. ಇದು ದೊಡ್ಡ ನ್ಯೂಸ್ ಅಲ್ಲದೇ ಇರಬಹುದು. ಆದರೆ ವಿಭಿನ್ನ ಅನ್ನುವ ಕಾರಣಕ್ಕೆ ನಿಮ್ಮ ಮುಂದೆ ತರುತ್ತಿದ್ದೇನೆ.‌ ಕೇರಳದ ಮುಸಲಿಯರ್ ಕಾಲೇಜಿನಲ್ಲಿ ಇಂಜನಿಯರಿಂಗ್ ಮಾಡುತ್ತಿರುವ ಶ್ರೀನಾಥ್ ಮಾಡಿದ ಕೆಲಸಕ್ಕೆ ನಗಬೇಕೋ ಅಥವಾ ಹೊಗಳಬೇಕೋ ಅನ್ನೋ ಚಿಂತೆಗೆ ಜನ ಹೊಳಗಾಗಿದ್ದಾರೆ.. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಗೊತ್ತಾ? ಮುಸಲಿಯರ್ ಕಾಲೇಜಿನ ಉಪನ್ಯಾಸಕರ ಮದುವೆ ನಡೆಯುತ್ತಿತ್ತು.

[widget id=”custom_html-3″]

Advertisements

ಮದುವೆಗೆ ವಿದ್ಯಾರ್ಥಿಗಳು ಬಂದಿದ್ದರು. ಅವರಲ್ಲಿ ಶ್ರೀನಾಥ್ ಕೂಡ ಇದ್ದ.. ಎಲ್ಲರೂ ತಮ್ಮ ಪ್ರೊಪೇಸರ್ ಮದುವೆ ನೋಡಿ ಶುಭಾಶಯ ಹೇಳಿ ಹೋಗಲು ಬಂದಿದ್ದರು ಶ್ರೀನಾಥ್ ಮಾತ್ರ ಬೇರೆ ಕೆಲಸಕ್ಕಾಗಿಯೇ ಬಂದಿದ್ದ.. ಉಪನ್ಯಾಸಕರ ಮದುವೆಯ ರಿಸಪ್ಷನ್ ನಡೆಯುತ್ತಿದ್ದಾಗ ಎಲ್ಲರೂ ಪೋಟೋಗೆ ಪೋಸ್ ಕೊಟ್ಟು ಶುಭಾಶಯ ಹೇಳಿ ಹೋಗುತ್ತಿದ್ದರು. ಹಾಗ ಸ್ಟೇಜ್ ಮೇಲೆ ಬಂದ ಶ್ರೀನಾಥ್ ತನ್ನ ಅಸೈನ್ ಮೆಂಟ್ ರೆಕಾರ್ಡ್ ಬುಕ್ ಕೊಟ್ಟು ಸೈನ್ ಮಾಡಿಕೊಡುವಂತೆ ಉಪನ್ಯಾಸಕರ ಮುಂದೆ ಇಟ್ಟ.. ಇದರಿಂದ ಬೆರಗಾದ ಉಪನ್ಯಾಸಕ ನಗುತ್ತಲೇ ಅಸೈನ್ ಮೆಂಟ್ ಬುಕ್ ಗೆ ಸೈನ್ ಮಾಡಿಕೊಟ್ಟರು. ಇದನ್ನು ನೋಡಿ ನಗು ತಡಿಯಲಾಗದ ಮದುವೆ ಹೆಣ್ಣು ನಗಾಡಿದರೆ ಚೆನ್ನಾಗಿರಲ್ಲ ಎಂದು ಪಾಪ ನಗುವನ್ನು ತುಂಬಾ ಕಂಟ್ರೋಲ್ ಮಾಡಿಕೊಂಡು ಕೈ ಅಡ್ಡ ಇಟ್ಟುಕೊಂಡು ನಗಾಡಿದರು..

[widget id=”custom_html-3″]

ಆದರೆ ಯಾರ ಬಗ್ಗೆ ಆಲೋಚನೆ ಮಾಡದ ಶ್ರೀನಾಥ್ ಮಾತ್ರ ತನ್ನ ಪಾಡಿಗೆ ತಾನು ಸಹಿ ಮಾಡಿಸಿಕೊಂಡು ಪೋಟೋಗೆ ಪೋಸ್ ಕೊಟ್ಟು ಅಲ್ಲಿಂದ ಹೊರಟ. ಮದುವೆ ಆದ ಮೇಲೆ ಹನಿಮೂನ್ ಅದು ಇದು ಅಂಥ ಉಪನ್ಯಾಸಕರು ಕಾಲೇಜ್ ಗೆ ಬರಲ್ಲಾ.. ಅದೇ ರೀತಿ ಕೈಗೆ ಸಿಗಲ್ಲ ಎಂದು ಭಾವಿಸಿ ರೆಕಾರ್ಡ್ ಬುಕ್ ಗೆ ಸಹಿ ಮಾಡಿಸಿಕೊಳ್ಳುವ ಸಲುವಾಗಿಯೇ ಶ್ರೀನಾಥ್ ಮದುವೆಗೆ ಬಂದಿದ್ದನಂತೆ. ಇದನ್ನು ನೋಡಿದ ಅಲ್ಲಿನ ಜನ ಒಂದು ಕ್ಷಣ ನಗು ತಡೆಯಲಾಗದೆ ಮೂಕ ವಿಸ್ಮಿತ ರಾದರು.. ಇದೆಲ್ಲದರ ಮಧ್ಯೆ ಯಾವುದೇ ಮುಜುಗರ ಮಾಡಿಕೊಳ್ಳದೇ ತನ್ನ ವಿದ್ಯಾರ್ಥಿ ಅಸೈನ್ ಮೆಂಟ್ ರೆಕಾರ್ಡ್ ಗೆ ಸೈನ್ ಮಾಡಿದ  ಉಪನ್ಯಾಸಕರ ವಿನಯವನ್ನು ಮೆಚ್ಚಿಕೊಳ್ಳಲೇ ಬೇಕು.