Advertisements

ಕಾಲೇಜಿನಲ್ಲಿ ಕೇಳಬಾರದ ಪ್ರಶ್ನೆನ ಟೀಚರ್ ಕೇಳಿದಾಗ.! ಸೈಕಾಲಜಿ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತಾ.?

News

ಪ್ರಿಯ ಓದುಗರೆ, ಈ ಜೀವನ ಮೂರು ದಿನದ ನಂಟು. ಇದರಲ್ಲಿ ಯಾರ್ಯಾರೋ ಬಂದು ಇದ್ದು ಮತ್ತೆ ಯಾರ್ಯಾರು ಹೋಗುತ್ತಾರೆ. ಆದರೆ ಬದುಕಿನ ಕೊನೆಯ ಕಾಲದಲ್ಲಿ ನಮ್ಮೊಂದಿಗೆ ಇರುವವರು ಯಾರು ಗೊತ್ತಾ? ಅದನ್ನು ಒಬ್ಬ ಸೈಕಾಲಜಿ ವಿದ್ಯಾರ್ಥಿಗೆ ಅವರ ಶಿಕ್ಷಕರು ಕೇಳಿದಾಗ ಆ ವಿದ್ಯಾರ್ಥಿ ನೀಡಿದ ಉತ್ತರ ಏನು ಗೊತ್ತಾ? ವಿದ್ಯಾರ್ಥಿಯ ಉತ್ತರ ಕೇಳಿದ ಶಿಕ್ಷಕರಿಗೂ ಅದು ಸರಿ ಎನಿಸಿತು. ಹಾಗಾದರೆ ವಿದ್ಯಾರ್ಥಿ ನೀಡಿದ ಉತ್ತರವಾದರೂ ಏನು ಬನ್ನಿ ಈ ಲೇಖನದಲ್ಲಿ ಹೇಳತೀವಿ ಇದನ್ನು ಕೊನೆಯವರೆಗೂ ಓದಿ. ಈ ಘಟನೆ ನಡೆದಿದ್ದು ಚೈನೈನ ಒಂದು ಸೈಕಾಲಜಿ ಕಾಲೇಜಿನಲ್ಲಿ. ಆಶಾ ಎಂಬ ವಿದ್ಯಾರ್ಥಿನಿಗೆ ಸೈಕಾಲಜಿ ಶಿಕ್ಷಕರು ನಿನಗೆ ಇಷ್ಟವಾದ ಮೂವತ್ತು ಜನರ ಹೆಸರನ್ನು ಬೋರ್ಡ್ ಮೇಲೆ ಬರೆಯಲು ಹೇಳುತ್ತಾರೆ. ಆಶಾ ಕೂಡ ತನಗೆ ಇಷ್ಟವಾದ ತಂದೆ ತಾಯಿ, ಕುಟುಂಬಸ್ಥರು,ಫ್ರೆಂಡ್ಸು ಎಲ್ಲ 30 ಜನರ ಹೆಸರುಗಳನ್ನು ಬೋರ್ಡ್ ಮೇಲೆ ಬರೆಯುತ್ತಾಳೆ.

Advertisements

ತದನಂತರ ಶಿಕ್ಷಕರು ಇದರಲ್ಲಿ ನಿನಗೆ ಅವಶ್ಯಕತೆ ಇಲ್ಲದ ಐದು ಜನರ ಹೆಸರನ್ನು ಅಳಿಸಿ ಹಾಕು ಎಂದಾಗ. ಆಶಾ ತನಗೆ ಅವಶ್ಯಕತೆ ಇಲ್ಲದ ಐದು ಜನರ ಹೆಸರನ್ನು ಹಾಕುತ್ತಾಳೆ. ಹೀಗೆ ಮತ್ತೆ ಐದು ಐದು ಜನರ ಹೆಸರನ್ನು ಅಳಿಸಲು ಹೇಳಿದಾಗ ಆಶಾ ಅಳಿಸುತ್ತ ಅಳಿಸುತ್ತ ಕೊನೆಗೆ 4 ಜನರ ಹೆಸರನ್ನು ಉಳಿಸುತ್ತಾಳೆ. ಆಗ ವಿದ್ಯಾರ್ಥಿಗಳಿಗೆಲ್ಲ ಅರ್ಥವಾಗುತ್ತದೆ ಸೈಕಾಲಜಿಯ ಒಂದು ಪಾಠವಾಗಿದೆ. ಇದರಲ್ಲಿ ಯಾರ್ಯಾರ ಅಭಿಪ್ರಾಯ ಏನೇನು ಎಂಬುದು ಈಗ ಅರ್ಥವಾಗುತ್ತದೆ ಎನ್ನುವುದು. ಕೊನೆಗೆ ಆಶಾ ತನ್ನ ತಂದೆ, ತಾಯಿ, ಗಂಡ ಮತ್ತು ಮಗನ ಹೆಸರನ್ನು ಮಾತ್ರ ಉಳಿಸಿರುತ್ತಾಳೆ. ಶಿಕ್ಷಕರು ಮತ್ತೆ ಅದರಲ್ಲಿ ಇಬ್ಬರ ಹೆಸರನ್ನು ತೆಗೆಯಲು ಹೇಳುತ್ತಾರೆ.

ಆಗ ಆಶಾ ಮನಸ್ಸು ಭಾರವಾಗಿಸಿಕೊಂಡು, ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ತಂದೆ ತಾಯಿಯ ಹೆಸರನ್ನು ಅಳಸಿ ಹಾಕುತ್ತಾಳೆ. ಕೊನೆಗೆ ಶಿಕ್ಷಕರು ಉಳಿದ ಎರಡು ಹೆಸರಲ್ಲಿ ಮತ್ತೆ ಒಂದನ್ನು ಅಳಿಸಲು ಹೇಳುತ್ತಾರೆ. ಆಗ ಭಾರದ ಮನಸ್ಸಿನಿಂದ ಮತ್ತೆ ಆಶಾ ತನ್ನ ಮಗನ ಹೆಸರನ್ನು ಅಳಿಸಿ ಗಂಡನ ಹೆಸರನ್ನು ಮಾತ್ರ ಇಟ್ಟುಕೊಳ್ಳುತ್ತಾಳೆ. ಆಗ ಶಿಕ್ಷಕರು ಆಶಾಗೆ ಕೇಳುತ್ತಾರೆ ಯಾಕೆ ನೀನು ಗಂಡನ ಹೆಸರನ್ನು ಆಯ್ದುಕೊಂಡೆ ಎಂದು. ಆಗ ಆಶಾ ಹೇಳುತ್ತಾಳೆ, ನನ್ನ ತಂದೆ ತಾಯಿ ನನಗೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಂಡಿದ್ದಾರೆ. ಅವರು ನನ್ನೊಂದಿಗೆ ಇರುವುದಿಲ್ಲ. ಇನ್ನೂ ಮಗ ಕೂಡಾ ವಿದ್ಯಾಭ್ಯಾಸ ಎಂದು, ಮದುವೆ ಆದ ಮೇಲೆ ಹೆಂಡತಿಯೊಂದಿಗೆ ಬೇರೆ ಮನೆ ಮಾಡಿಕೊಂಡು ಹೋಗುತ್ತಾನೆ. ಆದ್ರೆ ಗಂಡ ಯಾವಾಗಲು ನನ್ನೊಂದಿಗೆ ಇರುತ್ತಾನೆ. ನನ್ನ ಬದುಕಿನ ಉದ್ದಕ್ಕು ನಮಗಾಗಿ ದುಡಿದು, ಕೊನೆಗೂ ನಮಗಾಗಿಯೇ ಬದುಕುವ ಏಕೈಕ ಜೀವ ಅದು ಗಂಡ ಮಾತ್ರ. ಆದ್ದರಿಂದ ನಾನು ಗಂಡನನ್ನು ಆಯ್ದುಕೊಂಡೆ ಎಂದಳು. ಕೊನೆಗಾಲದಲ್ಲಿ ನನಗೆ ಅವರು, ಅವರಿಗೆ ನಾನು ಎಂದಾಗ ಆಶಾಳ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ಇದೆ ಮಾತು ಪುರುಷರಿಗೂ ಕೇಳಿದರು ಆತ ಕೂಡಾ ಹೆಂಡತಿಯನ್ನು ಆರಸಿಕೊಳ್ಳುತ್ತಾನೆ. ಇದೆ ನಿಜವಾದ ಸ್ಥಿತಿ.