Advertisements

ದೇಸಿ ಚಹಾ ಮಾಡಿ 200 ಕೋಟಿ ಸಂಪಾದನೆ ಮಾಡಿದ ಅಮೇರಿಕಾದ ಮಹಿಳೆ.. ಆಕೆ ಮಾಡಿದ ಸಖತ್ ಪ್ಲಾನ್ ಏನು ಗೊತ್ತಾ?

Kannada Mahiti

ಭಾರತದ ದೇಸಿ ಚಾ ಇಂದ ಇವತ್ತು ಬ್ರಿಟಿಷ್ ಮಹಿಳೆಯೊಬ್ಬರು ಕೋಟ್ಯಾಧಿಪತಿಯಾಗಿದ್ದಾರೆ. ನೀವು ಅಂದುಕೊಳ್ತಾ ಇರಬಹುದು ನಾವು ಕುಡಿಯುವ ಎಂಟು ಹತ್ತುರೂಪಾಯಿ ಚಾದಿಂದ ಈ ಮಹಿಳೆ ಕೋಟ್ಯಾಧಿಪತಿ ಹೇಗಾದ್ರಪ್ಪ ಅಂತ, ಆ ಇಂಟ್ರೆಸ್ಟಿಂಗ್ ಕಥೆಯನ್ನು ನಾವು ಹೇಳ್ತೀವಿ.. ಹೌದು ಆಕೆಯ ಹೆಸರು ಬ್ರುಕೆಡ್ಡಿ ಅಂತ ದೂರದ ಅಮೇರಿಕಾದ ಮಹಿಳೆ ಆಕೆ. ಒಮ್ಮೆ ಬೇರೆ ಬೇರೆ ಕೆಲಸದ ನಿಮಿತ್ತ ಹಾಗೂ ಭಾರತವನ್ನು ಸುತ್ತುವ ಸಲುವಾಗಿ ನಮ್ಮ ದೇಶಕ್ಕೆ ಎಂಟ್ರಿ ಕೊಡ್ತಾರೆ. ಆಗ ಬರೋಬ್ಬರಿ ನಾಲ್ಕು ವರ್ಷಗಳ ನಮ್ಮ ದೇಶದಲ್ಲಿಯೇ ವಾಸವಿದ್ದರು. ಆ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದ ವಿವಿಧ ಪ್ರೇಕ್ಷಣೀಯ ಸ್ಥಳಗಳು ಬ್ರುಕೆಡ್ಡಿಯನ್ನು ಆಕರ್ಷಿಸುತ್ತದೆ. ನಮ್ಮ ಸಂಸ್ಕçತಿ ಸಂಪ್ರದಾಯ ವಿಶಿಷ್ಟ ಅನಿಸುತ್ತದೆ..

[widget id=”custom_html-3″]

Advertisements

ಇವುಗಳೆಲ್ಲವುಗಳ ಮಧ್ಯೆಯೇ ಬ್ರು ಕೆಡ್ಡಿ ಅವರು ಚಾ ಕುಡಿಯುವ ಅಭ್ಯಾಸ ಬೆಳೆಸಿಕೊಳ್ತಾರೆ, ಅದರಲ್ಲೂ ಶುಂಠಿ ಟೀ ಅಂದ್ರೆ ಸಾಕು ಬ್ರುಕೆಡ್ಡಿ ಅವರಿಗೆ ಬಲು ಅಚ್ಚುಮೆಚ್ಚು. ನಾಲ್ಕು ವರ್ಷಗಳ ಬಳಿಕ ತನ್ನ ಕೆಲಸವನ್ನೆಲ್ಲಾ ಮುಗಿಸಿ ತನ್ನ ದೇಶಕ್ಕೆ ಬ್ರುಕೆಡ್ಡಿ ಹಿಂತಿರುಗುತ್ತಾರೆ. ಭಾರತದಲ್ಲಿ ಕಳೆದ ಸುಮಧುರ ನೆನಪುಗಳನ್ನು ಮರೆಯಲು ಸಾಧ್ಯವಾಗಲಿಲ್ಲ, ಎಲ್ಲವುದಕ್ಕಿಂತ ಹೆಚ್ಚಾಗಿ ಭಾರತದ ದೇಸಿ ಚಹವನ್ನು ಮರೆಯಲಿಕ್ಕೆ ಆಗಲಿಲ್ಲ, ಚಾ ಕುಡಿಯದಿದ್ರೆ ದಿನವೇ ಮುಂದೆ ಹೋಗಲ್ಲ ಅನ್ನೋವಷ್ಟರಮಟ್ಟಿಗೆ ಬ್ರುಕೆಡ್ಡಿಯವರು ಅಡಿಕ್ಟ್ ಆಗಬಿಟ್ಟಿದ್ರು, ಆಗ ಆಕೆ ಒಂದು ಉಪಾಯವನ್ನು ಮಾಡ್ತಾರೆ. ಭಾರತದಿಂದ ಟೀ ಪೌಡರ್ ತರಿಸಿಕೊಂಡು ಅಮೇರಿಕಾದಲ್ಲಿಯೇ ಒಂದು ಚಿಕ್ಕ ಹೋಟೆಲ್ ಒಂದನ್ನು ತೆಗೆಯುತ್ತಾರೆ.

[widget id=”custom_html-3″]

ಭಕ್ತಿ ಅಂತ ಹೋಟೆಲ್‌ಗೆ ಹೆಸರಿಟ್ಟು ನಿತ್ಯವೂ ಟೀಯನ್ನು ಮಾಡಿ ಕೊಡ್ತಾಯಿದ್ದರು. ನಮ್ಮ ದೇಸಿ ಚಹದ ರುಚಿಗೆ ಅಮೇರಿಕನ್ನರು ಫಿದಾ ಆದ್ರು, ನಿತ್ಯವೂ ಭಕ್ತಿ ಹೋಟೆಲ್ ಅಲ್ಲಿ ಕಡ್ಡಾಯವಾಗಿ ಒಂದು ಕಪ್ ಟೀ ಕುಡಿಯಲಿಕ್ಕೆ ಶುರು ಮಾಡಿದ್ರು, ಇದರಿಂದ ದಿನಕಳೆದಂತೆ ಬ್ರೂ ಕೆಡ್ಲಿ ಅವರು ಕೋಟ್ಯಾಧಿಪತಿಯಾಗ್ತಾ ಹೋದರು. 220 ಕೋಟಿಗಳ ಒಡತಿಯಾಗಿದ್ದಾರೆ. ಹಾಗಂತ ಕೋಟಿಗಳಿಸಿದ ಹಿನ್ನಲೆಯನ್ನು ಬ್ರೂ ಕೆಡ್ಲಿ ಅವರು ಮರೆಯಲಿಲ್ಲ, ಆ ಕಾರಣಕ್ಕೆ ಈಗಲೂ ಭಾರತಕ್ಕೆ ಪ್ರತಿ ವರ್ಷ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸ್ತಾಯಿದ್ದಾರೆ. ಜೊತೆಗೆ ಒಂದು ಸಂಸ್ಥೆಯನ್ನು ಮಾಡಿ ಆ ಸಂಸ್ಥೆಯ ಮುಖಾಂತರ ಬಡವರು, ದಿಕ್ಕಿಲ್ಲದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುತ್ತಿದ್ದಾರೆ.