Advertisements

ಎಷ್ಟೇ ಭಯಂಕರವಾದ ಹಲ್ಲು ನೋವಿದ್ರೂ ಇವೆರಡು ವಸ್ತು ಇಟ್ಟರೆ ಸಾಕು !

Health

ಪ್ರಿಯ ಓದುಗರೇ ನಿಮ್ಮೆಲ್ಲರಿಗೂ ನಮಸ್ಕಾರ. “ಕಾಯಿಲೆ ಮನುಷ್ಯನಿಗೆ ಬಾರದೇ, ಮರಕ್ಕೆ ಬರುತ್ತಾ” ಅನ್ನೋ ಗಾದೆ ಮಾತು ಕೇಳಿರುತ್ತೀವಿ. ಹೌದು ರೋಗ ಮನುಷ್ಯರಿಗೆ ಬರೋದು. ಈ ಜ್ವರ, ಕೆಮ್ಮು, ನೆಗಡಿ ಈ ತರ ಸಣ್ಣ ಪುಟ್ಟ ಕಾಯಿಲೆಗಳನ್ನಾ ಮಾತ್ರೆ ನುಂಗಿ ಕಡಿಮೆ ಮಾಡಿಕೊಳ್ಳಬಹುದು. ಆದರೆ ಈ ಹಲ್ಲು ಇದಿಯಲ್ಲಾ, “ದೇವ್ರೇ, ಈ ನೋವು ಶತ್ರುಗೂ ಬೇಡ ಅಂತೇನಿಸುತ್ತೆ” ರಾತ್ರಿ ನಿದ್ದೆ ಬರೋಲ್ಲ,
ಹೊಟ್ಟಿಗೆ ಮುದ್ದೆ ಸೇರೋಲ್ಲ. ಈ ಅನುಭವ ಬಹುಶಃ ನಿಮ್ಮ ಅನುಭವಕ್ಕೂ ಸಹಾ ಬಂದಿರುತ್ತೆ.

Advertisements

ಈ ಹಲ್ಲು ನೋವಿಗೆ ಕೆಲವೊಮ್ಮೆ ಎಂತಾ ಗುಳಿಗೆ ತೆಗೆದುಕೊಂಡರು ಸಹಾ ನೋವು ವಾಸಿ ಆಗೋಲ್ಲ. ಇದಕ್ಕೆ ನಮ್ಮ ಹಿರಿಯರು ಮನೆಮದ್ದುಗಳನ್ನು ಸಹಾ ಮಾಡಿದ್ದಾರೆ. ಕೆಲ ಮನೆಮದ್ದುಗಳು ನಮ್ಮ ಅನೇಕ ರೋಗಗಳನ್ನು ಬೇಗನೆ ವಾಸಿ ಮಾಡಿಬಿಡುತ್ತವೆ. ಅದೇ ತರ ಹಲ್ಲುನೋವಿಗೂ ಸಹಾ ಮನೆಮದ್ದುಗಳು ಇದೆ. ನಾನು ನಿಮಗೆ ಹಲ್ಲುನೋವಿಗೆ ಎರಡು ಮನೆಮದ್ದುನ್ನು ಹೇಳುತ್ತೇನೆ ನೋಡಿ.
ಏನಪ್ಪಾ! ಅದು ಅಂತಾ ಮನೆಮದ್ದು ಅಂದುಕೊಂಡ್ರಾ ತುಂಬಾನೇ ಸಿಂಪಲ್ ಪ್ರಿಯ ಸ್ನೇಹಿತರೇ.

1) ಅಡುಗೆಗೆ ಸಾಮಾನ್ಯವಾಗಿ ಬಳಸುವ ಲವಂಗವನ್ನು ತೆಗೆದುಕೊಂಡು ಅದಕ್ಕೆ ಪುಡಿ ಉಪ್ಪನ್ನು ಸವರಿ ಹಲ್ಲು ನೋವಿರುವ ಜಾಗಕ್ಕೆ ಅದನ್ನಾ ಇಟ್ಟುಕೊಂಡರೆ ಬಹುಬೇಗ ಹಲ್ಲುನೋವು ಕಡಿಮೆಯಾಗುತ್ತದೆ. ನೀವು ಇದನ್ನು ಒಂದು ನಾಲ್ಕೈದು ಬಾರಿ ಮಾಡಿ ನೋಡಿ, ನಿಮ್ಮ ಅನುಭವಕ್ಕೆ ಇದು ಭಾಸವಾಗುತ್ತದೆ.

2)ಕರ್ಪೂರವನ್ನು ಸಹಜವಾಗಿಯೇ ನೋಡಿರುತ್ತೀರಾ, ಕರ್ಪುರವನ್ನು ತೆಗೆದುಕೊಳ್ಳಿ, ಅದನ್ನು ಪುಡಿ ಮಾಡಿ, ಅದರ ಜೊತೆಗೆ ಬೆಲ್ಲವನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಿ ಆ ಎರಡನ್ನು ಮಿಕ್ಸ್ ಮಾಡಿ, ಹಲ್ಲು ನೋವಿರುವ ಜಾಗಕ್ಕೆ ಇದನ್ನು ಇಟ್ಟಿಕೊಂಡು ಲಾಲಾರಸ(ಉಗಳು) ಇದನ್ನು ಹೊರಉಗಿಯಿರಿ. ನೀವು ಈ ರೀತಿ ಎರಡು ಬಾರಿ ಮಾಡುವುದರಿಂದ ಹಲ್ಲು ನೋವು ಬಹುಬೇಗ ಶಮನವಾಗುತ್ತದೆ. ನೀವು ಒಮ್ಮೆ ಇದನ್ನು ಮಾಡಿ ನೋಡಿ,ಹಲ್ಲುನೋವಿನಿಂದ ಮುಕ್ತರಾಗಿ..ಧನ್ಯವಾದಗಳು.