Advertisements

ತಾಯಿಯ ಒಡವೆ ಅಡವಿಟ್ಟು ಕರೋಡ್ ಪತಿ ಕಾರ್ಯಕ್ರಮಕ್ಕೆ ಬಂದಿದ್ದ ಈ ಬಡ ಹುಡುಗ ಗೆದ್ದ ಹಣ ಎಷ್ಟು ಗೊತ್ತಾ ?

Entertainment

ನಮಸ್ತೇ ಸ್ನೇಹಿತರೇ, ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ ರವರು ನಡೆಸಿಕೊಡುವ ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಕೋನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಎಷ್ಟೋ ಸ್ಪರ್ಧಿಗಳ ಅದೃಷ್ಟವನ್ನೇ ಬದಲಿಸಿ ಹೊಸ ಬದುಕನ್ನ ನೀಡಿದೆ. ಹೌದು, ವಿದ್ಯೆ ಬುದ್ದಿ ಯಾರಪ್ಪನ ಸ್ವತ್ತು ಅಲ್ಲ. ಬುದ್ದಿಯೊಂದಿದ್ದರೆ ಸಾಕು ಬಡವ ಕೂಡ ರಾತ್ರಿ ಕಳೆದು ಬೆಳಗಾಗುವುದರೊಳಗೆ ಲಕ್ಷಾಧಿಪತಿ, ಕೋಟ್ಯಧಿಪತಿ ಆಗಬಲ್ಲ. ಬಾಲಿವುಡ್ ನ ಲೆಜೆನ್ಡ್ ನಟ ಅಮಿತಾ ಬಚ್ಚನ್ ಅವರ ಎದುರಾಗಿ ಹಾಟ್ ಸೀಟ್ ನಲ್ಲಿ ಕುಳಿತು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಲಕ್ಷ, ಕೋಟಿ ಗೆಲ್ಲುವುದಿದೆಯೆಲ್ಲಾ..ಅದು ಅದ್ಭುತವೇ ಸರಿ. ಅದರಲ್ಲೂ ಹಳ್ಳಿಯೊಂದರ ಬಡ ರೈತ ಕುಟುಂಬದಿಂದ ಬಂದ ಹುಡುಗನೊಬ್ಬ ಕೋಟಿ ಗೆಲ್ಲುವ ಪ್ರಶ್ನೆಯನ್ನ ಎದುರಿಸುತ್ತಾನೆ ಎಂದರೆ, ಆತನ ಬುದ್ದಿಗೆ ಹ್ಯಾಟ್ಸಾಪ್ ಎನ್ನಲೇ ಬೇಕು.

Advertisements

ಹೌದು, ಮೊನ್ನೆ ತಾನೇ ನಡೆದ ಕೋನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ನಟ ಅಮಿತಾ ಬಚ್ಚನ್ ಅವರ ಎದುರಾಗಿ ಹಾಟ್ ಸೀಟ್ ನಲ್ಲಿ ಕುಳಿತಿದ್ದು ಉತ್ತರಪ್ರದೇಶದ ಹಳ್ಳಿಯೊಂದರ ಬಡ ಕುಟುಂಬದಿಂದ ಬಂಡ ತೇಜ್ ಬಹಾದ್ದೂರ್ ಸಿಂಗ್ ಎಂಬ ಹುಡುಗ. ಈತ ಕಾರ್ಯಕ್ರಮದಲ್ಲಿ ಅಮಿತಾ ಬಚ್ಚನ್ ರವರು ಕೇಳಿದ ಪ್ರಶ್ನೆಗಳಿಗೆ ಅದ್ಭುತವಾಗಿ ಉತ್ತರ ಕೊಟ್ಟಿದ್ದಲ್ಲದೆ, ಈ ಶೋ ನೋಡಿದ ಎಷ್ಟೋ ಮಂದಿಗೆ ಸ್ಫೂರ್ತಿದಾಯಕವಾಗಿದ್ದಾನೆ ಈ ಹುಡುಗ. ತಾನು IAS ಮಾಡಿ ಉನ್ನತ ಉದ್ದೆಯನ್ನೇರಬೇಕೆಂಬ ಕನಸನ್ನ ಹೊಂದಿರುವ ಈ ಪ್ರತಿಭಾವಂತ ಹುಡುಗ ತೋಟದಲ್ಲಿ ಕೆಲಸ ಮಾಡುತ್ತಾನೆ.

ಇನ್ನು ಇದೆ ಕಾರ್ಯಕ್ರಮದಲ್ಲಿ ತೇಜ್ ಬಹಾದ್ದೂರ್ ಸಿಂಗ್ ತನ್ನ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದು ಎಲ್ಲರ ಕಣ್ಣಂಚಿನಲ್ಲಿ ಕಣ್ಣೀರು ತರಿಸುವಂತಿತ್ತು. ನನ್ನ ತಾಯಿ ನನ್ನ ಜೊತೆಯಾಗಿ ಕೋನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕೆ ಬರುವ ಸಲುವಾಗಿ ಟಿಕೆಟ್ ಗೆ ಹಣ ಇಲ್ಲದ ಕಾರಣ ಅದಕ್ಕಾಗಿ ತನ್ನ ಒಡವೆಯನ್ನ ಗಿರವಿ ಇಟ್ಟಿದ್ದಾಳೆ. ಇನ್ನು ಈಗ ಆಕೆ ಧರಿಸಿರುವ ಒಡವೆ ನನ್ನ ತಾಯಿಯದ್ದಲ್ಲ ಎಂದು ಕಣ್ಣೀರು ಹಾಕುತ್ತಾ ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾನೆ. ಆದರೆ ತೇಜ್ ಬಹಾದ್ದೂರ್ ಸಿಂಗ್ ಆರ್ಥಿಕವಾಗಿ ಬಡವನೇ ಹೊರತು, ಆತ ಬುದ್ದಿಯಿಂದ ಶ್ರೀಮಂತ.

ಹೌದು, ಆತನಿಗೆ ಆತನ ಬುದ್ದಿ, ಪ್ರತಿಭೆ ಮೋಸ ಮಾಡಲಿಲ್ಲ. ಇನ್ನು ಅಮಿತಾ ಬಚ್ಚನ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ ಅದ್ಭುತವಾಗಿ ಆಡಿದ ತೇಜ್ ಒಂದು ಕೋಟಿಯ ಪ್ರಶ್ನೆಯ ಹಂತಕ್ಕೆ ಹೋಗಿದ್ದು, ಅದಕ್ಕೆ ಉತ್ತರ ಕೊಡಲು ಗೊಂದಲ ಮೂಡಿದ ಕಾರಣ, ಆಟದಿಂದ ಕ್ವಿಟ್ ಆಗಿದ್ದು ಬರೋಬ್ಬರಿ 50 ಲಕ್ಷದ ಬಹುಮಾನದ ಹಣವನ್ನ ತನ್ನದಾಗಿಸಿಕೊಂಡಿದ್ದಾರೆ. ಬಡ ರೈತ ಕುಟುಂಬದಿಂದ ಬಂದ ಈ ಹುಡುಗನ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗುವಂತದ್ದಾಗಿದೆ. ಇನ್ನು ಒಂದು ಕೋಟಿಗಾಗಿ ಕೇಳಿದ್ದ ಪ್ರಶ್ನೆ ಇದೆ ನೋಡಿ. ೧೮೫೭ರಲ್ಲಿ ನಡೆದ ಪ್ರಥಮ ಸ್ವಂತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಂಗಲ್ ಪಾಂಡೆ ಸೇರಿದ್ದ ರೆಜಿಮೆಂಟ್ ಯಾವುದು ? ಇದಕ್ಕೆ ಉತ್ತರವಾಗಿ ಈ ನಾಲ್ಕು ಆಯ್ಕೆಗಳನ್ನ ಕೊಡಲಾಗಿತ್ತು. ೧. 5th ಲೈಟ್ ಇನ್‌ಫ್ಯಾಂಟ್ರಿ ೨. 20th ಬೆಂಗಾಲ್ ನೇವಿ ಇನ್‌ಫ್ಯಾಂಟ್ರಿ ೩. ಪೂನಾ ಹಾರ್ಸ್‌ ನಾಲ್ಕನೆಯದಾಗಿ 34th ಬೆಂಗಾಲ್ ನೇವಿ ಇನ್‌ಫ್ಯಾಂಟ್ರಿ. ಇನ್ನು ಒಂದು ಕೋಟಿಯ ಪ್ರಶ್ನೆಗೆ ಉತ್ತರ 34th ಬೆಂಗಾಲ್ ನೇವಿ ಇನ್‌ಫ್ಯಾಂಟ್ರಿ ಆಗಿತ್ತು.