Advertisements

ಈ ಚಿಕ್ಕ ಕೆಲಸ ಮಾಡಿ ರಾಶಿ ರಾಶಿ ತೆಂಗಿನಕಾಯಿ ಬೆಳೆಯಿರಿ.. ಒಳ್ಳೆ ದುಡ್ಡು ಮಾಡಬಹುದು!

Kannada Mahiti

ಪ್ರಿಯ ವೀಕ್ಷಕರೆ ಮೊದಲಿನಿಂದಲೂ ಆರೋಗ್ಯದ ದೃಷ್ಟಿಯಿಂದ ಎಳೆನೀರಿಗೆ ಎಲ್ಲಿಲ್ಲದ ಬೇಡಿಕೆ.‌ ವರ್ಷದ ಮೂರು ಕಾಲವು ಇದರ ಬೇಡಿಕೆಗೆನು ಬರವಿಲ್ಲ. ಬೇಸಿಗಯಲ್ಲು ಏಳೆನೀರಿನ ಕಾಯಿಯಿಂದ ಅಧಿಕ ಲಾಭ ಗಳಿಸಬಹುದಾಗಿದೆ. ಇನ್ನು ಮರದಲ್ಲಿ ಕಾಯಿಯನ್ನು‌ ಹೆಚ್ಚಾಗುವಂತೆ ಮಾಡುವುದು ಹೇಗೆ ಅಂತೀದಿರಾ ಇಲ್ಲಿದೆ‌ ನೋಡಿ ಆ ಕಂಪ್ಲೀಟ್ ಸ್ಟೋರಿ.. ತಂಗಿನ ಮರ ನೆಟ್ಟ ತಕ್ಷಣ ಕಾಯಿಯಾಗಿ ಬಿಡುವುದಿಲ್ಲ.. ಅದು ಚಿಕ್ಕದಿರುವಾಗಲೇ ಅನೇಕ‌ ರೋಗ ಭಾದೆಗಳಿಗೆ ತುತ್ತಾಗುತ್ತದೆ. ಅದನ್ನು ಸೂಕ್ತವಾದ ಕ್ರಮಗಳ‌ ಮೂಲಕ ಸರಿಯಾಗಿ ಬೆಳೆಸಬಹುದಾಗಿದೆ. ಬಹುವಾರ್ಷಿಕ ಬೆಳೆಯಾದ ತೆಂಗಿನ ಸಸಿ ನೆಡುವಾಗ ಉತ್ತಮ ತಳಿಯ ಬೀಜದಿಂದ ಸಿದ್ಧಪಡಿಸಿದ ತೆಂಗಿನ ಸಸಿಯನ್ನು ನಾಟಿ ಮಾಡಬೇಕು.

[widget id=”custom_html-3″]

Advertisements

ಅದಕ್ಕೆ ಸಮಯಕ್ಕೆ ಸರಿಯಾಗಿ ಪೋಷಕಾಂಶ ಹಾಗು ನೀರು ‌ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ‌ ನೀರು ಹಾಗೂ ಪೋಷಕಾಂಶಗಳು ಕಡಿಮೆಯದರೆ ಮರದಲ್ಲಿ‌ ಹರಳು ಉದರುವ ಸಮಸ್ಯೆ ಕಾಣಿಸಿಕೊಂಡು ಇದರಿಂದ ಅಚಾನಕ್ಕಾಗಿ ತೆಂಗಿನ ಕಾಯಿಗಳ ಇಳುವರಿ ಹೆಚ್ಚು ಕುಸಿತ ಕಂಡುಬರುತ್ತದೆ. ಇನ್ನು ಮರವನ್ನು ಸಂಪೂರ್ಣ ಸಾವಯವ ಭೂಮಿ ಉತ್ತಮವಾಗಿರುತ್ತದೆ. ಈ ಮರದ ಬೇರುಗಳು ಸಡಿಲವಾಗಿರುವುದರಿಂದ ಆಗಾಗ ಮಣ್ಣನ್ನು ತಿರುವು ಹಾಕುದನ್ನು ತಪ್ಪದೆ ಮಾಡಬೇಕು. ಮೂರು ವರ್ಷ ಮೇಲ್ಪಟ್ಟ ‌ಮರಗಳಿದ್ದರೆ ಅವುಗಳಿಗೆ ಮೂರರಿಂದ ನಾಲ್ಕು ಅಡಿ ಮಣ್ಣು ಸಡಿಲಗೊಳಿಸಬೇಕು.

[widget id=”custom_html-3″]

ಇದರಿಂದಾಗಿ ಗಾಳಿ ಮತ್ತು ಬೆಳಕು ಮರದ ಬೆರುಗಳಿಗೆ ಸಿಗುತ್ತದೆ. ಮರದ ಬುಡಕ್ಕೆ ಗೊಬ್ಬರ ಹಾಗು ಅಡುಗೆಗೆ ಬಳಸುವ ಉಪ್ಪನ್ನು ಎರಡರಿಂದ ಮೂರು ಕೆಜಿಯಷ್ಟು ಹಾಕಬೇಕು. ಇದರಿಂದ ಮರದ ಬುಡವು ಸದಾ ತೇವಾಂಶದಿಂದ ಕೊಡಿದ್ದು ಕಾಯಿಗಳು, ಮರ ಬೆಳೆಯುವಲ್ಲಿ ಸಹಾಯ ಮಾಡುತ್ತದೆ. ಎಂಟು ದಿನಗಳಿಗೊಮ್ಮೆ ನೀರು ಬಿಟ್ಟು ಆ ನೀರು ಮರದ ಬುಡದಲ್ಲಿ ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಈ‌ ಮೇಲಿನ‌ ಕ್ರಮಗಳನ್ನು ಪಾಲಿಸುವುದರಿಂದ ತೆಂಗಿನ ಕೃಷಿಯಲ್ಲಿ ‌ಹೆಚ್ಚು ಲಾಭ ಗಳಿಸಬಹುದಾಗಿದೆ..