Advertisements

600 ಸಿನಿಮಾದಲ್ಲಿ ನಟಿಸಿದ ಟೆನ್ನಿಸ್ ಅವರಿಗೆ ಏನಾಯ್ತು.. ಯಾಕೆ ನಟಿಸ್ತಿಲ್ಲ ಗೊತ್ತಾ?

Cinema

ಹಾಸ್ಯ ದಿಗ್ಗಜ ಟೆನಿಸ್ ಕೃಷ್ಣ ಅವರು ನಡೆದ ಬಂದು ಹಾದಿಯ ಕಿರು ಚಿತ್ರಣ. ಕೃಷ್ಣ ಆಗಿದ್ದವರು ಟೆನಿಸ್ ಕೃಷ್ಣ ಆಗಿದ್ದು ಹೇಗೆ ಗೊತ್ತಾ? ಹಾಸ್ಯ ನಟರಲ್ಲಿ ಮುಂಚೂಣಿಯಲ್ಲಿ ಕಾಣಿಸ್ತಿದ್ದ ಟಿನಿಸ್ ಕೃಷ್ಣ ಅವರು ಮೂರು ದಶಕಗಳ ಕಾಲ ಚಿತ್ರರಂಗವನ್ನು ತನ್ನ ಹಾಸ್ಯ ಪ್ರಜ್ಞೆ ಮೂಲಕ ಕಚಕುಳಿ ಕೊಟ್ಟವರು. ಇವರು ಮೂಲತಃ ಬೆಂಗಳೂರಿನವರೇ ಆಗಿದ್ದರು. ಸಾಮಾನ್ಯವಾದ ಮಧ್ಯಮ ಕುಟುಂಬದಲ್ಲಿ ಜನಿಸಿ ಎಲ್ಲರಂತೆ ಸಾವಿರ ಕನಸುಗಳನ್ನು ಹೊತ್ತು ಬೆಳೆದವರು. ಶಾಲಾ ದಿನಗಳಲ್ಲಿಯೇ ಮನೆಯಿಂದ ಮೆಜೆಸ್ಟಿಕ್‌ಗೆ ನಡೆದುಕೊಂಡು ಹೋಗುವಾಗ ಮಾಸ್ಟರ್ ಹಿರಣ್ಣಯ್ಯನವರ ಅಭಿನಯ ಶೈಲಿಯನ್ನು ನೋಡಿ ನಿಬ್ಬೆರಗಾಗಿದ್ರು ಕೃಷ್ಣ. ಹಿರಣ್ಣಯ್ಯ ಅವರ ಅಭಿನಯವನ್ನು ನೋಡ್ತಾ ನೋಡ್ತಾ ದಿನಕಳದಂತೆ ತಾನು ಅವರಂತೆ ಒಬ್ಬ ಅದ್ಭುತ ಕಲಾವಿದನಾಗಬೇಕು ಎಂಬ ಮಹತ್ತರ ಆಸೆ ಬೆಳೆಸಿಕೊಳ್ತಾರೆ.

[widget id=”custom_html-3″]

Advertisements

ಹೀಗೆ ಒಂದು ದಿನ ತನ್ನ ತಂದೆ ಶ್ಯಾಮಣ್ಣ ಅವರ ಬಳಿ ತನ್ನ ಆಸೆ ಕನಸುಗಳನ್ನು ಹೇಳಿಕೊಳ್ತಾರೆ. ಆಗ ಸುಮ್ಮನೆ ಓದೋ ಕಡೆ ಗಮನಕೊಡು ಅಂತ ಶ್ಯಾಮಣ್ಣ ಅವರು ಬೈದು ಬುದ್ದಿ ಹೇಳ್ತಾರೆ. ಆದರೆ ಇಲ್ಲಿಗೆ ಕೃಷ್ಣ ಅವರ ಕಲಾವಿದನಾಗಬೇಕೆಂಬ ಕನಸು ನಿಲ್ಲುವುದಿಲ್ಲ ಬದಲಾಗಿ ಹೆಮ್ಮರವಾಗ್ತಾ ಹೋಯಿತು. ಪಿಯುಸಿ ದಿನಗಳಲ್ಲಿ ಹಾಗೋ ಹೀಗೋ ಹೇಗೋ ಕಷ್ಟಪಟ್ಟು ಹಿರಣ್ಣಯ್ಯ ಅವರ ಕಲಾತಂಡವನ್ನು ಸೇರಿಕೊಳ್ತಾರೆ. ಅಭಿನಯವನ್ನು ಕಲಿತು ಬಳಿಕ ಅಪರೂಪದ ಕತೆ ಎನ್ನುವ ಸಿನಿಮಾದಲ್ಲಿ ಸಹಾಯಕ ನಿರ್ದೆಶಕನಾಗಿ ಸಿನಿಲೋಕಕ್ಕೆ ಪದಾರ್ಪಣೆ ಮಾಡ್ತಾರೆ. ಅದಾದ ಬಳಿಕ ಹೃದಯ ಪಲ್ಲವಿ ಎಂಬ ಸಿನಿಮಾಕ್ಕೆ ಸಹ ಸಹಾಯಕ ನಿರ್ದೆಶಕರಾಗಿ ಕೆಲಸ ಮಾಡ್ತಾರೆ.

[widget id=”custom_html-3″]

ಈ ಸಿನಿಮಾದಲ್ಲಿ ಡಬ್ಬಿಂಗ್ ಸಹ ಮಾಡಿ ಬೇಷ್ ಎನಿಸಿಕೊಳ್ತಾರೆ. ನಂತರ ಸುನೀಲ್ ದೆಸಾಯಿ ಅವರ ತರ್ಕ ಸಿನಿಮಾದಲ್ಲಿಯೂ ಸಹ ಅಭಿನಯಿಸ್ತಾರೆ. ಇನ್ನು ರಾಜ್ ಕಿಶೋರ್ ಅವರು ತ್ರಿನೇತ್ರ ಸಿನಿಮಾಕ್ಕಾಗಿ ಪ್ರಧಾನ ಹಾಸ್ಯ ನಟನ ಪಾತ್ರಕ್ಕೆ ಕಲಾವಿದನನ್ನು ಹುಡುಕುತ್ತಾ ಇರುತ್ತಾರೆ. ಆ ಸ್ಥಾನವನ್ನು ಕೃಷ್ಣ ಅವರು ತುಂಬ್ತಾರೆ. ಜೊತೆಗೆ ಈ ಸಿನಿಮಾ ಬಿಡುಗಡೆ ಆಗೋ ವೇಳೆ, ತನ್ನ ಹೆಸರು ಕ್ಯಾಚಿಯಾಗಿ ಇರುವಂತೆ ಯಾವುದಾದರು ಹೆಸರು ನೀಡಿ ಅಂತ ಕೃಷ್ಣ, ರಾಜ್‌ಕಿಶೋರ್ ಅವರಿಗೆ ಸೂಚಿಸ್ತಾರೆ. ಆ ವೇಳೆ ಒಂದಷ್ಟು ಹೆಸರುಗಳ ಲಿಸ್ಟ್ ಕೊಡಿ ಅಂದಾಗ ಆ ಹೆಸರುಗಳ ಪಟ್ಟಿಯಲ್ಲಿ ಟೆನ್ನಿಸ್ ಕೃಷ್ಣ ಸಹ ಇರುತ್ತದೆ. ಕೃಷ್ಣ ಅವರ ತಂದೆ ಶ್ಯಾಮಣ್ಣ ಹಿಂದೆ ಬೆಂಗಳೂರಿನಲ್ಲಿ ಟೆನಿಸ್ ಕೋಚ್ ಆಗಿ ಕೆಲಸ ಮಾಡ್ತಾಯಿದ್ರು.

ವೀರೇಂದ್ರ ಹೆಗಡೆಯವರಿಗೂ ಸಹ ಟೆನಿಸ್ ಕೋಚ್ ಕೊಟ್ಟ ಹೆಗ್ಗಳಿಕೆ ಶ್ಯಾಮಣ್ಣ ಅವರಿಗಿದೆ. ಈ ಹಿನ್ನಲೆ ತನ್ನ ಹೆಸರ ಜೊತೆ ಟೆನಿಸ್ ಸೇರಿಸಿ ಟೆನಿಸ್ ಕೃಷ್ಣ ಮಾಡಿಕೊಳ್ಳಲು ಕೃಷ್ಣ ನಿರ್ಧರಿಸಿದ್ದು ಅಂದಿನಿಂದ ಟೆನಿಸ್ ಕೃಷ್ಣ ಆಗಿ ಬದಲಾದರು. ನಂತರ ಹಲವು ಸಿನಿಮಾಗಳಲ್ಲಿ ಟೆನಿಸ್ ನಟಿಸಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಗಳಿಸಿಕೊಂಡ್ರು. ಹಾಗೆಯೇ ಜನ ಮೆಚ್ಚಿದ ಕಾಮಿಡಿಯನ್ ಆದರು. ನಂತರದ ದಿನಗಳಲ್ಲಿ ಟೆನಿಸ್ ಕೃಷ್ಣ ಅವರು ದೊಡ್ಡಣ್ಣ ಅವರಿಗೆ ಜೋಡಿಯಾಗಿ ಅಭಿನಯಿಸಿಲಿಕ್ಕೆ ಶುರು ಮಾಡಿದ್ರು. ಒಂದು ಕಾಲದಲ್ಲಿ ಟೆನ್ನಿಸ್ ಹಾಗೂ ದೊಡ್ಡಣ್ಣ ಕಾಂಬಿನೇಷನ್ ಚಿತ್ರರಂಗವನ್ನು ಆಳಿದ್ದು ಗತ ಇತಿಹಾಸವಾಯ್ತು.

[widget id=”custom_html-3″]

ಸ್ವಂತ ಮನೆಯವರಿಂದಾನೆ ಮೋಸ ಹೋದ ಟೆನಿಸ್ ಕೃಷ್ಣ ಅವರಿಗೆ ಇಂದಿಗೂ ಒಂದು ಸ್ವಂತ ಮನೆ ಕಟ್ಟಿಕೊಳ್ಳಲಾಗಲಿಲ್ಲ ಎಂಬ ದುಖಃ, ನೋವಿದೆ. ಹೊಸ ತಲೆಮಾರುಗಳು ಬಂದಾಗ ನಿಧಾನವಾಗಿ ಟೆನಿಸ್ ಕೃಷ್ಣ ಅವರಿಗೆ ಬೇಡಿಕೆ ಕಡಿಮೆಯಾಯ್ತು. ಯಾವ ನಟ ಸಖತ್ ಬ್ಯುಸಿಯಾಗಿ ಸಾಕಷ್ಟು ಆಫರ್‌ಗಳನ್ನು ಕೈಲಿ ಇಟ್ಟುಕೊಂಡು ಓಡಾಡುತ್ತಿದ್ದನೋ ಅದೇ ಹಾಸ್ಯ ನಟ ಅವಕಾಶದಿಂದ ವಂ’ಚಿ’ತರಾಗಿ ಅವಕಾಶಕ್ಕಾಗಿ ಎದುರು ನೋಡುವ ಪರಿಸ್ಥಿತಿ ಬಂದಿದೆ. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ವೀಕ್ಷಕರ ಮನ ಕದ್ದ ಟೆನಿಸ್ ಕೃಷ್ಣ ಅವರು ಒಂದು ಮನೆ ಕಟ್ಟಲಾಗಲಿಲ್ಲ ಅಂದರೆ ಬೆಸರದ ಸಂಗತಿ..